ತುಮಕೂರು: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತುಮಕೂರು ಜಿಲ್ಲಾ ಶಾಖೆಯು ಇತ್ತೀಚೆಗೆ ಮಾಸಿಕ ಸಭೆ ಮತ್ತು ಶಿಕ್ಷಕರ ದಿನಾಚರಣೆ ಕರ‍್ಯಕ್ರಮ ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಾಗಿ ತನಿಖಾಧಿಕಾರಿಗಳಾಗಿ ಬಿಇಓ ಆಗಿ ನಂತರ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಆಗಿ ನಿ.ನೌ.ಪ.ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಡಾ. ಪಿ. ಹುಚ್ಚಯ್ಯನವರು ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ, ನಿವೃತ್ತಿ ಹೊಂದಿ, ನಿವೃತ್ತರ ಸಂಘದಲ್ಲಿ ಪದಾಧಿಕಾರಿಗಳಾಗಿ, ಹಾಲಿ ಮಾಧ್ಯಮ ಕಾರ್ಯದರ್ಶಿಯಾಗಿರುವ `ಮಾಚಿ ಪತ್ರಿಕೆ’ ಸಂಪಾದಕರಾಗಿರುವ ಶ್ರೀ ಹೆಚ್. ಹನುಮಂತಯ್ಯ, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸಮಾಜಸೇವೆಯಲ್ಲಿ ತೊಡಗಿರುವ ತುಮಕೂರು ತಾಲ್ಲೂಕು ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸರ್ವಮಂಗಳ ಶಂಕರಪ್ಪ ಇವರುಗಳನ್ನು ಅವರ ಮತ್ತು ಸೇವೆ ಸಾಧನೆಯನ್ನು ಶ್ಲಾಘಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಹನುಮಂತಯ್ಯನವರು ತಮ್ಮನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಶಿಕ್ಷಕರ ದಿನಾಚರಣೆಗೆ ಕಾರಣರಾದ ದಿ|| ರಾಷ್ಟçಪತಿ, ಶಿಕ್ಷಣತಜ್ಞ, ತತ್ವಶಾಸ್ತçಜ್ಞ ೧೦೦ಕ್ಕೂ ಹೆಚ್ಚು ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಕುರಿತು ಅವರ ಚಿಂತನೆಗಳನ್ನು ಕುರಿತು ಸಾಂದರ್ಭಿಕವಾಗಿ ಮಾತನಾಡಿದರು. ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ಶಿಕ್ಷಣ ಕುರಿತು ಡಿ.ಎನ್. ನಾಗರಾಜ್ ಶೈಲಾ ಮತ್ತು ಜಗದೀಶಯ್ಯ ಮಾತನಾಡಿದರು.
ಶೈಲಜಾ, ಶಶಿಧರ್ ಮತ್ತು ನಿವೃತ್ತ ಪ್ರಾಚಾರ್ಯರಾದ ಅಕ್ಕಮ್ಮ ಹಾಡಿನ ಮೂಲಕ ಅಕ್ಷರದ ಮಹತ್ವ ಸಾರಿದರು. ತುಮಕೂರು ತಾಲ್ಲೂಕು ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಂತರಾಮಯ್ಯನವರು ಮಾತನಾಡಿದರು. ಮಧುಗಿರಿ ಸಂಘದ ಚಂದ್ರೇಗೌಡ ಯೋಗದ ಬಗ್ಗೆ ತಿಳಿಸಿದರು. ಗುಬ್ಬಿ ಸಂಘದ ಅಪ್ಪಾಜಿ, ಶಿರಾದ ನಾನ್ಯಾನಾಯಕ್, ಪಾವಗಡದ ಚಂದ್ರಶೇಖರ್, ತಿಪಟೂರಿನ ಚಿಕ್ಕಣ್ಣ ಉಪಸ್ಥಿತರಿದ್ದರು.

(Visited 1 times, 1 visits today)