ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ನಗರದ ಕೇಂದ್ರ ಕಚೇರಿಯಲ್ಲಿ ಅಸಮಾನತೆಯ ವಿರುದ್ಧ ಹೋರಾಡಿದ ಕ್ರಾಂತಿಕಾರಿ ನಾಯಕ ಮತ್ತು ನಮ್ಮ ಮಾದರಿ, ತಂದೆ ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚುವುದರ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ ನಿಧಿ ಕುಮಾರ್ ಮಾತನಾಡುತ್ತಾ ಇ. ವಿ. ರಾಮಸ್ವಾಮಿ ಪ್ರೀತಿಯಿಂದ ಎಲ್ಲರೂ ಕರೆಯುವುದು ತಂದೆ ಪೆರಿಯಾರ್, ದಕ್ಷಿಣ ಭಾರತ ಕಂಡ ಅಪರೂಪದ ಕ್ರಾಂತಿಕಾರಿ ಸಮಾಜ ಸುಧಾರಕ. ಜಾತಿ ತಾರತಮ್ಯ ಅಸ್ಪöÈಶ್ಯತೆ ಮತ್ತು ಮೂಢನಂಬಿಕೆಗಳ ಕತ್ತಲೆಯಲ್ಲಿ ಮುಳುಗಿದ್ದ ಸಮಾಜದಲ್ಲಿ ಶೋಷಿತರು ಮತ್ತು ದಮನಿತರಿಗೆ ಆತ್ಮಗೌರವದ ಬೆಳಕು ತೋರಿದ ಮಹಾನ್ ನಾಯಕರಾಗಿದ್ದವರು. ರಾಜಕೀಯ ಸ್ವಾತಂತ್ರ÷್ಯಕ್ಕಿAತ ಮನುಷ್ಯನಿಗೆ ಆತ್ಮಗೌರವ ಮುಖ್ಯವೆಂದು ಸಾರಿದ ಇವರು ತಮಿಳುನಾಡಿನಲ್ಲಿ ದ್ರಾವಿಡ ಮತ್ತು ಸ್ವಾಭಿಮಾನ ಚಳವಳಿಯ ಮೂಲಕ ಸಾಮಾಜಿಕ ನ್ಯಾಯದ ಹೊಸ ಇತಿಹಾಸವನ್ನೇ ಬರೆದ ಮಹಾನೀಯರು. ಶಿಕ್ಷಣ, ಮಹಿಳಾ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಅವರ ಚಿಂತನೆಗಳು ಇಂದಿಗೂ ಚರ್ಚೆಗೆ ಮತ್ತು ಅಧ್ಯಯನಕ್ಕೆ ಪ್ರಸ್ತುತವಾಗಿವೆ. ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಸಮಾಜವೇ ನಿಜವಾದ ಪ್ರಗತಿಶೀಲ ಸಮಾಜ ಎಂಬ ಆಶಯದೊಂದಿಗೆ ಬದುಕಿದ ಪೆರಿಯಾರ್ ಅವರ ವಿಚಾರಧಾರೆ, ಸಮಾನತೆ ಮತ್ತು ಸ್ವಾಭಿಮಾನದ ಸಮಾಜ ನಿರ್ಮಾಣದ ಸಂಕಲ್ಪಕ್ಕೆ ಸದಾ ಪ್ರೇರಣೆಯಾಗಲಾದೆ ಎಂದು ತಿಳಿಸಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಉಪಾಧ್ಯಕ್ಷ ಇಂದ್ರ ಕುಮಾರ್ ಡಿ.ಕೆ, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ರಾಜ್ಯ ಅಧ್ಯಕ್ಷ ಪ್ರಕಾಶ್ ಎಚ್ ಪಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್. ಕೆ.ನಿಧಿ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಇಂದ್ರುಕುಮಾರ್ ಡಿ.ಕೆ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರಾದ ಇಲ್ಲಾಸ್ ಅಹ್ಮದ್, ಅಲ್ಪಸಂಖ್ಯಾತರ ಯುವ ಘಟಕದ ಜಿಲ್ಲಾ ಅಧ್ಯಕ್ಷರಾದ ಮೋಹಿನ್ ಅಹ್ಮದ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಟೈಲರ್ ಜಗದೀಶ್, ನಗರದ ಪ್ರಧಾನ ಕಾರ್ಯದರ್ಶಿ ನರಸಿಂಹ, ಸಂವಿಧಾನ ರಕ್ಷಣಾ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ಪ್ರಕಾಶ್ ಎಚ್.ಪಿ, ಮುಖಂಡರುಗಳಾದ ಜಬಿನೇಷನ್, ಹನುಮನರಸಯ್ಯ, ಮಾರ್ಕೆಟ್ ಮಣ್ಣಪ್ಪ, ಗಂಗಾಧರ್ ಜಿ.ಆರ್, ಇಮ್ರಾನ್ ಅಹಮ್ಮದ್ ಸೇರಿದಂತೆ ಇನ್ನಿತರರು ಇದ್ದರು.

(Visited 1 times, 1 visits today)