BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
  • ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
  • ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ
  • ರೈತರ ಬೃಹತ್ ಪಾದಯಾತ್ರೆಗೆ ಚಾಲನೆ
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
  • ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

ರಾಷ್ಟವ್ಯಾಪ್ತಿ ರಾಜಕೀಯ ಬದಲಾವಣೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಯಾನ
By News Desk BenkiyabaleUpdated:August 07, 2026 5:01 pm

ತುಮಕೂರು: ಭಾರತ ಕಮ್ಯುನಿಷ್ಟ ಪಕ್ಷ ಆರಂಭವಾಗಿ ೧೦೧ ವರ್ಷಗಳನ್ನು ಪೂರೈಸಿದ್ದು, ಅಂದಿನಿAದ ಇಂದಿನವರೆಗೆ ದುಡಿಯುವ ವರ್ಗದ ಜನರು, ರೈತರು, ಕಾರ್ಮಿಕರು, ಬಡವರ ಪರವಾಗಿ ದ್ವನಿ ಎತ್ತುತ್ತಲೇ ಬಂದಿದೆ. ರಾಷ್ಟçವ್ಯಾಪ್ತಿ ರಾಜಕೀಯ ಬದಲಾವಣೆಗೆ ಆಗಸ್ಟ್ ೦೬ ರಿಂದ ಆಗಸ್ಟ್ ೧೫ ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಜಕೀಯ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟç ರಾಜಕಾರಣದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುವ ಜನರಿಗೆ ಸತ್ಯದ ಅರಿವು ಮೂಡಿಸಲು ಸಿಪಿಐ ಪಕ್ಷ “ಬದಲಾವಣೆ ಅಗತ್ಯ” ಎಂಬ ಹೆಸರಿನಲ್ಲಿ ಹಮ್ಮಿಕೊಂಡಿರುವ ರಾಜಕೀಯ ಅಭಿಯಾನದ ಅಂಗವಾಗಿ ಇದೆಆಗಸ್ಟ್ ೦೯ರ ಭಾನುವಾರ ಕೊರಟಗೆರೆ ವಿಧಾನಸಭಾ ಕ್ಷೇತ್ರದ ತೋವಿನಕೆರೆ ಮತ್ತು ಕುರಂಕೋಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಾದಯಾತ್ರೆಯ ಮೂಲಕ ಅಭಿಯಾನ ನಡೆಸಲಾಗುವುದು ಎಂದರು.
ಜನಧನ ಯೋಜನೆಯ ಮೂಲಕ ಸುಮಾರು ೮೦ ಕೋಟಿ ಜನರಿಂದ ಶೂನ್ಯ ಅಕೌಂಟ್ ತೆರೆದು, ಕನಿಷ್ಠ ಠೇವಣಿ ಇರಿಸಿಲ್ಲ ಎಂಬ ಕಾರಣಕ್ಕೆ ೨೬ ಸಾವಿರ ಕೋಟಿ ದಂಢ ವಿಧಿಸಿ, ಬಡವರ, ದುಡಿಯುವ ವರ್ಗದ ಜನರು ಕೂಡಿಟ್ಟದ ಹಣವನ್ನು ಲಪಟಾಯಿಸಲಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ತುಂಬುವ ಭರವಸೆ ನೀಡಿದ್ದ ಸರಕಾರ, ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅತಿ ಹೆಚ್ಚು ಬಡವರೇ ಇರುವ ದೇಶದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲ ಯೋಜನೆಗಳನ್ನು ರೂಪಿಸಿದರೆ ಉಚಿತ ಭಾಗ್ಯ ಎಂದು ಅಣಕಿಸುವ ಜನರೇ ಹೆಚ್ಚಾಗಿದ್ದಾರೆ. ಜನರಿಗೆ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುತ್ತಿದ್ದ ನರೇಗಾ ಯೋಜನೆಯ ಕತ್ತು ಹಿಸುಕಿ, ರಾಮನ ಹೆಸರಿನಲ್ಲಿ ಯೋಜನೆ ತಂದು ಜನರಿಗೆ ಉದ್ಯೋಗ ದೊರೆಯುವಂತೆ ಮಾಡಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊAಡು ಸಿಪಿಐ ಪಕ್ಷ ಆಗಸ್ಟ್ ೦೬ ರಿಂದ ೧೫ ರವರಗೆ ರಾಜಕೀಯ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಆಗಸ್ಟ್ ೦೯ ರಂದು ಉಪ ಮುಖ್ಯಮಂತ್ರಿಗಳ ಕ್ಷೇತ್ರದ ತೋವಿನಕೆರೆ ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಸಂತೆ ಮೈದಾನ ಸ್ಥಳಾಂತರ, ಸುಸಜ್ಜಿತ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ, ಸ್ಮಶಾನ ಹಾಗೂ ಇನ್ನಿತರ ಕೊರತೆಯನ್ನು ಪೂರೈಸುವಂತೆ ಒತ್ತಾಯಿಸಿ ಆರಂಭವಾಗುವ ಸಿಪಿಐ ಪಕ್ಷದ ರಾಜಕೀಯ ಅಭಿಯಾನದ ಪಾದಯಾತ್ರೆ ತೋವಿನಕೆರೆಯಿಂದ ಸೂರೇನಹಳ್ಳಿ, ವೆಂಕಟರಮನಹಳ್ಳಿ, ಸಿವಿಡಿ ಪಾಳ್ಯ, ಜೋನಿಗರಹಳ್ಳಿ ಮೂಲಕ ಕುರಂಕೋಟೆ ಗ್ರಾಮ ಪಂಚಾಯಿತಿ ತಲುಪಲಿದೆ. ಸಿಪಿಐ ಪಕ್ಷದ ಹಿರಿಯರಾದ ಸಾತಿ ಸುಂದರೇಶ್ ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಶಿರಾದ ಸಿಬಿ ಆಗ್ರಹಾರ, ಕಳ್ಳಂಬೆಳ್ಳ, ತುಮಕೂರು ಗ್ರಾಮಾಂತರದ ಊರುಕೆರೆ, ಜಟ್ಟಿ ಅಗ್ರಹಾರ, ತುಮಕೂರು ನಗರದ ವಾರ್ಡು ನಂಬರ್ ೧-೨ ಮತ್ತು ೩, ಪಾವಗಡದ ಚಿಪುಗಾನಹಳ್ಳಿ, ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಂದೋಲನ ನಡೆಯಲಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದರು,
ಸುದ್ದಿಗೋಷ್ಠಿಯಲ್ಲಿ ಸಿಪಿಐ ಪಕ್ಷದ ಮುಖಂಡರಾದ ಗೋವಿಂದರಾಜು.ಆರ್, ಬೋಜರಾಜು, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
Cpim kannada news karnataka local news tumakur tumkur tumkur news ಜಿಲ್ಲಾಡಳಿತ ತುಮಕೂರು:
Previous Articleವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
Next Article ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
News Desk Benkiyabale

Related Posts

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm news
ತಾಜಾ ಸುದ್ಧಿಗಳು
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm
news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
news

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
news

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm
Our Youtube Channel
Our Picks

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

By News Desk BenkiyabaleAugust 07, 2026 5:03 pm

ತುಮಕೂರು: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್‌ಅವರು ನಗರದ ಅಸಹಾಯಕ ಒಬ್ಬಂಟಿ ಮಹಿಳೆ, ವಿಕಲಚೇತನೆಯಾದ ಬ್ರಾಹ್ಮಣ ಸಮುದಾಯದ…

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.