ತುಮಕೂರು: ಕಲ್ಕತ್ತಾದ ಆರ್‌ಜಿಕರ್ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣ ನಡೆದ ಕರಾಳ ದಿನದ ಸ್ಮರಣೆಗಾಗಿ ದೇಶದಲ್ಲಿರುವ ಎಲ್ಲಾ ಪ್ರಸೂತಿ ಮತ್ತು ಸ್ತಿçರೋಗ ವೈದ್ಯರು ಆಗಸ್ಟ್ ೦೯ನ್ನು ಅಭಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಪ್ರಸೂತಿ ಮತ್ತು ಸ್ತಿçರೋಗ ವೈದ್ಯರ ಸಂಘದ ಅಧ್ಯಕ್ಷರಾದ ಡಾ.ಬಸವರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪ್ರತಿವರ್ಷ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ, ದೌರ್ಜ ನ್ಯಗಳನ್ನು ತಡೆಯುವ ಸಲುವಾಗಿ ಹೊಸ ಕಾಯ್ದೆ ಯನ್ನೇ ಜಾರಿಗೆ ತಂದರೂ,ಇAದಿಗೂ ರೋಗಿಗಳ ಸಂಬAಧಿಸಿಕರು, ಸಾರ್ವಜನಿಕರು ಸೇವೆಯ ಲೋಪ ದೋಷಗಳನ್ನೇ ನೆಪ ಮಾಡಿಕೊಂಡು ವೈದ್ಯರ ಮೇಲೆ ಹಲ್ಲೆ ನಡೆಸುವುದನ್ನು ಮುಂದು ವರೆಸಿದ್ದಾರೆ.ಹಾಗಾಗಿ ಹೊಸ ಕಾಯ್ದೆಯ ಪ್ರಕಾರ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡುವ ವ್ಯಕ್ತಿಗಳಿಗೆ ಆಗುವ ಶಿಕ್ಷೆ ಮತ್ತು ದಂಡದ ಪ್ರಮಾಣ ಹಾಗೂ ಇಂತಹ ತಪ್ಪುಗಳು ನಡೆದಾಗ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅಭಯ ದಿನ ಅಂಗವಾಗಿ ದೇಶದಾದ್ಯಂತ ಮಾಡಲಾಗುತ್ತಿದೆ ಎಂದರು.
ಜನರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ಜನರ ನಿರೀಕ್ಷೆಗಳು ಹೆಚ್ಚಾಗಿವೆ.ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರೂ ನಿರೀಕ್ಷಿಸುವುದು ಸಹಜ.ಯಾವ ವೈದ್ಯರು ರೋಗಿ ಸಾಯಬೇಕೆಂದು ಬಯಸುವುದಿಲ್ಲ.ಎಲ್ಲರೂ ಜೀವ ಉಳಿಸುವ ನಿಟ್ಟಿನಲ್ಲಿ ತಾವು ಕಷ್ಟಪಟ್ಟ ಕಲಿತ ವಿದ್ಯೆಯನ್ನು ಅವರ ಮೇಲೆ ಪ್ರಯೋಗಿಸುತ್ತಾರೆ.ಕೆಲವೊಂದು ಸಂದರ್ಭಗಳಲ್ಲಿ ಕೈ ಮೀರಿ ಹೋಗುತ್ತದೆ.ಇಂತಹ ವೇಳೆಯಲ್ಲಿ ರೋಗಿಗಳ ಕಡೆಯವರು ಸಹನೆ, ತಾಳ್ಮೆ ಕಳೆದುಕೊಳ್ಳದೆ ವಾಸ್ತುವವನ್ನು ಅರ್ಥಮಾಡಿ ಕೊಂಡು ವರ್ತಿಸಿದರೆ ಇಂತಹ ಅನಾಹುತಗಳು ನಡೆಯುವುದಿಲ್ಲ.ಆದರೆ ಕೆಲವರು ಇಂತಹದ್ದ ಪ್ರಕರಣವನ್ನು ಮುಂದಿಟ್ಟು, ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಯ ವಸ್ತುಗಳನ್ನು ಹಾನಿ ಮಾಡುವುದು ಮಾಡುತ್ತಾರೆ. ಇದು ಜೀವ ಉಳಿಸಬೇಕೆಂದು ಕಷ್ಟಪಡುವ ವೈದ್ಯರ ಆತ್ಮಸ್ಥೆöÊರ್ಯವನ್ನು ಕುಗ್ಗಿಸುತ್ತದೆ. ಪ್ರತಿ ಬಾರಿ ಗಂಭೀರ ಪ್ರಕರಣಗಳಲ್ಲಿ ಕೆಲಸ ಮಾಡುವಾಗಲು ಹಿಂಜರಿಯುವ0ತಹ ಸ್ಥಿತಿಗೆ ತಲುಪುತ್ತಾರೆ. ಇದರಿಂದ ಮತ್ತಷ್ಟು ಜನರ ಪ್ರಾಣ ಹರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.ಹಾಗಾಗಿ ವೈದ್ಯರು ಮತ್ತು ರೋಗಿಗಳ ನಡುವೆ ಒಳ್ಳೆಯ ಭಾಂಧವ್ಯ ಬೆಳೆಸುವುದು ಅಭಯದಿನದ ಉದ್ದೇಶವಾಗಿದೆ ಎಂದರು.
ಹಿರಿಯ ಪ್ರಸೂತಿ ಮತ್ತು ಸ್ತಿರೋಗ ತಜ್ಞರಾದ ಡಾ.ಹನುಮಕ್ಕ ಮಾತನಾಡಿದರು. ಅಭಯ ದಿನದ ಅಂಗವಾಗಿ ಆಗಸ್ಟ್ ೦೯ ರಂದು ಜಿಲ್ಲೆಯ ಎಲ್ಲಾ ಪ್ರಸೂತಿ ಮತ್ತು ಸ್ತಿರೋಗ ವೈದ್ಯರು ಐಎಂಎ ಹಾಲ್‌ನಲ್ಲಿ ಸೇರಿ,ಅಭಯ ದಿನದ ಪ್ರಯುಕ್ತ ಶ್ರದ್ದಾಂಜಲಿ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಜೀವನ್ ರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಪ್ರಸೂತಿ ಮತ್ತು ಸ್ತಿçÃರೋಗ ವೈದ್ಯರ ಸಂಘದ ಕಾರ್ಯದರ್ಶಿ ಜೀವನರೆಡ್ಡಿ,ಪ್ರಸೂತಿ ಮತ್ತು ಸ್ತಿçÃರೋಗ ವೈದ್ಯರಾದ ಡಾ.ನಾಗಲಕ್ಷಿ, ಡಾ.ದ್ವಾರಕನಾಥ್, ಇಂದಿರಾ ಶಿವಾನಂದ್,ಡಾ.ಗಿರೀಶ್, ಡಾ.ನಾಗೇಶ್, ಡಾ.ಪಾವನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)