ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಯ ಕಿಟಕಿ ಗ್ಲಾಸ್‍ಗಳನ್ನ ಕಿಡಿಗೇಡಿಗಳ ಪುಡಿಪುಡಿ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ತಾಲುಖಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿರುವ ಅತಿ ದೊಡ್ಡ ಶಾಲೆಯ ಹೊಸ ಕಟ್ಟಡದ ಕಿಟಕಿ ಗ್ಲಾಸ್‍ಗಳಿಗೆ ಯಾರೋ ದುಷ್ಕರ್ಮಿಗಳು ತಡರಾತ್ರಿ ಕಲ್ಲುತೂರಾಟ ಮಾಡಿ ನಾಲ್ಕು ಸಿಸಿ ಕ್ಯಾಮೆರಾಗಳು, ಶಾಲೆಯ ಕೊಠಡಿಯ ಕಿಟಿಕಿಗಳಿಗೆ ಕಲ್ಲು ತೂರಿದ್ದು ಇಲ್ಲಿ ಯಾರೂ ಹೇಳೋರು ಇಲ್ಲ ಕೇಳೋರು ಇಲ್ಲದಂತಾಗಿದೆ. ಸಂಜೆ ಆದರೆ ಸಾಕು ಪೋಲಿ ಹುಡುಗರ ದಂಡು ಶಾಲೆ ಒಳಗೆ ಆಗಮಿಸಿ ಶಾಲೆ ವಾತವರಣವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಳೆದ ಬಾರಿಯಷ್ಟೇ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಶಾಲೆಯನ್ನ ಉದ್ಘಾಟನೆ ಮಾಡಿದ್ದರು. ಶಾಲೆಯ ಹೊಸ ಕಟ್ಟಡದ ಕಿಟಕಿಗಳಿಗೆ ಕಲ್ಲುತೂರಾಟ ನಡೆಸಿರುವ ಕಾರಣ, ಗಾಜಿನ ಚೂರುಗಳು ತರಗತಿ ಕೊಠಡಿಗಳೊಗೆ ಬಿದ್ದಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ 3, 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳನ್ನು ಹೊರಗೆ ಕೂರಿಸಿ ಶಿಕ್ಷಕರು ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಅವಧಿ ಮುಗಿದ ಮೇಲೆ ಇಲ್ಲಿನ ಕೆಲವು ಪೋಲಿ ಹುಡುಗರ ತಂಡ ಅವರಣ ಬಳಗೆ ಬಂದು ಆಟ ಆಡುವ ನೆಪದಲ್ಲಿ ಮದ್ಯ ಸೇವನೆ, ಗಾಂಜಾ ಸೇವನೆ, ಶಲೀಷನ್ ಸೇವೆ ಮಾಡುತ್ತಾರೆ ಎನ್ನವ ಆರೋಪಗಳು ಅಲ್ಲಲ್ಲಿ ಕೇಳಿ ಬರುತ್ತಿತ್ತು, ಅನೇಕ ಬಾರಿ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದರೂ ಸಹ ಯಾವುದೇ ಪ್ರಯೋಜನ ಇಲ್ಲ ಮದ್ಯ ಸೇವನೆ ಇಂದ ಇಂತಹ ಘಟನೆಗಳು ನೆಡೆದಿರಬಹುದು ಎಂದು ಸಾರ್ವಜನಿಕರ ಮಾತಾಗಿದೆ.
ಬಿಇಒ ಫೈರೋಜಾ ಬೇಗಂ ಮಾತನಾಡಿ ಹೊಳವನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಶಾಲೆಯ ಹೊಸ ಕಟ್ಟಡದ ಕಿಟಕಿ ಗ್ಲಾಸ್‍ಗಳು ಪುಡಿಪುಡಿಯಾಗಿದ್ದು, ಗಾಜಿನ ಚೂರುಗಳು ತರಗತಿ ಕೊಠಡಿಗಳೊಳಗೆ ಬಿದ್ದಿವೆ. ಇದರ ಜೊತೆಗೆ ಶಾಲೆಯಲ್ಲಿ ಅಳವಡಿಸಲಾಗಿದ್ದ ನಾಲ್ಕು ಸಿಸಿ ಕ್ಯಾಮೆರಾಗಳಿಗೂ ಕಲ್ಲು ತೂರಲಾಗಿದೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಪೆÇಲೀಸ್ ಠಾಣೆಗೆ ದೂರು ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕಾದ ಸಂದರ್ಭದಲ್ಲಿ ಕಿಟಕಿ ಗ್ಲಾಸ್‍ಗಳೇ ಒಡೆದು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಗಾಜಿನ ಚೂರುಗಳು ಕೊಠಡಿಗಳಲ್ಲಿ ಬಿದ್ದಿರುವುದರಿಂದ ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಮಾಡಬೇಕಾಗಿದೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಶಾಲೆಯ ಗ್ಲಾಸ್‍ಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಶಿಕ್ಷಕರು ಹಾಗೂ ಎಸ್‍ಡಿಎಂಸಿ ಸದಸ್ಯರು ಆಗ್ರಹಿಸಿದ್ದಾರೆ.



