ಹುಳಿಯಾರು: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಜಾಗದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ತಾಲೂಕು ಕಚೇರಿಗೆ (ಮುಜರಾಯಿ ಇಲಾಖೆಗೆ) ಹಸ್ತಾಂತರಿಸುವAತೆ ತಹಶೀಲ್ದಾರ್ ಅವರು ಪಟ್ಟಣ ಪಂಚಾಯಿತಿಗೆ ಪತ್ರ ಬರೆದಿದ್ದು, ಈ ವಿಚಾರವಾಗಿ ಪಟ್ಟಣ ಪಂಚಾಯಿತಿ ತುರ್ತು ಸಭೆಯಲ್ಲಿ ತೀವ್ರ ಚರ್ಚೆ ನಡೆದಿದೆ.
ತಹಶೀಲ್ದಾರ್ ಪತ್ರದಲ್ಲೇನಿದೆ?: “ಹುಳಿಯಾರಿನ ’ಸಿ’ ಗ್ರೂಪ್ ಮುಜರಾಯಿ ದೇವಾಲಯವಾದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಹಿಂಭಾಗದ ಜಾಗದಲ್ಲಿ ಪಟ್ಟಣ ಪಂಚಾಯಿತಿಯಿAದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡಲಾಗಿದೆ. ಈ ಜಾಗವು ದೇವಾಲಯಕ್ಕೆ ಸೇರಿದ್ದಾಗಿದ್ದು, ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ. ಆದ್ದರಿಂದ ತಕ್ಷಣವೇ ಈ ಮಳಿಗೆಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಹಸ್ತಾಂತರಿಸಬೇಕು. ತಪ್ಪಿದ್ದಲ್ಲಿ ಕಾನೂನು ಹಾಗೂ ಶಿಸ್ತುಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಅವರು ಪಟ್ಟಣ ಪಂಚಾಯ್ತಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.
ತಹಶೀಲ್ದಾರ್‌ಗೆ ಪಟ್ಟಣ ಪಂಚಾಯಿತಿ ಪ್ರತ್ಯುತ್ತರ: ತಹಶೀಲ್ದಾರ್ ಅವರ ನೋಟಿಸ್‌ಗೆ ಈಗಾಗಲೇ ಮುಖ್ಯಾಧಿಕಾರಿ ಮಂಜುನಾಥ್ ಉತ್ತರ ನೀಡಲಾಗಿದ್ದು ಈ ಪತ್ರದಲ್ಲಿ ಸದರಿ ವಾಣಿಜ್ಯ ಮಳಿಗೆಗಳನ್ನು ಇತ್ತೀಚೆಗೆ ಕಟ್ಟಿದ್ದಲ್ಲ. ಇದು ಹಿಂದಿನ ಮಂಡಲ ಪಂಚಾಯಿತಿ ಅವಧಿಯಲ್ಲೇ ನಿರ್ಮಾಣಗೊಂಡಿದೆ. ದಿಶಾಂಕ್ ಆಪ್ ಪ್ರಕಾರ ಈ ಪ್ರದೇಶವು ವಸಾಹತು ಪ್ರದೇಶವಾಗಿದೆ. ಹಾಗಾಗಿ ಮುಜರಾಯಿ ಇಲಾಖೆಯು ಈ ಜಾಗ ತಮಗೆ ಸೇರಿದ್ದು ಎಂದು ಪ್ರತಿಪಾದಿಸುತ್ತಿರುವುದರಿಂದ, ಸಂಬAಧಪಟ್ಟ ದಾಖಲೆಗಳನ್ನು ನೀಡಿದರೆ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಿ ಮೇಲಧಿಕಾರಿಗಳು ನೀಡುವ ನಿರ್ದೇಶನ ಹಾಗೂ ಆದೇಶದಂತೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯಲಾಗಿದೆ.
ಪಟ್ಟಣ ಪಂಚಾಯಿತಿ ಸದಸ್ಯ ಎಸ್‌ಆರ್‌ಎಸ್ ದಯಾನಂದ್ ರಂಗನಾಥಸ್ವಾಮಿ ಹಿಂದಿನ ಮಂಡಲ ಪಂಚಾಯಿತಿ ಕಾಲದಿಂದಲೂ ಈ ಜಾಗವನ್ನು ಪಂಚಾಯಿತಿಯೇ ನಿರ್ಮಿಸಿ, ನಿರ್ವಹಿಸಿಕೊಂಡು ಬಂದಿದೆ. ಇದು ಪಟ್ಟಣ ಪಂಚಾಯಿತಿಗೆ ಸೇರಿದ ಆಸ್ತಿಯಾಗಿದ್ದು, ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಯ ಜಾಗದಲ್ಲಿ ಇದನ್ನು ನಿರ್ಮಿಸಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಪಟ್ಟಣ ಪಂಚಾಯಿತಿ ಆಸ್ತಿಯನ್ನು ಮುಜರಾಯಿ ಇಲಾಖೆಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ ದೇವಾಲಯದ ಮುಂಭಾಗದಲ್ಲಿದ್ದ ‘ತೇರು ಬೀದಿ’ಯನ್ನು ಕೆಲವರು ಅಕ್ರಮವಾಗಿ ಆಕ್ರಮಿಸಿಕೊಂಡು ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಆ ಜಾಗವನ್ನು ತೆರವು ಮಾಡಿ ದೇವಸ್ಥಾನದ ಧಾರ್ಮಿಕ ಕಾರ್ಯಗಳ ಬಳಕೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಂ.ಎಲ್. ಕಿರಣ್ ಮಾತನಾಡಿ ಮಳಿಗೆ ಇರುವ ಜಾಗದ ಬಗ್ಗೆ ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ಸ್ಪಷ್ಟ ದಾಖಲೆಗಳನ್ನು ಹೊಂದಿಲ್ಲ. ಒಂದು ವೇಳೆ ತಹಶೀಲ್ದಾರ್ ಬಳಿ ದಾಖಲೆಗಳಿದ್ದರೆ ನಿಯಮಾನುಸಾರ ಅಳತೆ ಮಾಡಿಸಿ ದೇವಾಲಯದ ಹೆಸರಿಗೆ ಖಾತೆ ಮಾಡಿಕೊಳ್ಳಲಿ. ನಮಗೇನೂ ಅಭ್ಯಂತರವಿಲ್ಲ, ಜೊತೆಗೆ ಸುತ್ತಮುತ್ತಲ ಜಾಗದಲ್ಲಿ ಅಕ್ರಮವಾಗಿ ಕೆಲವರಿದ್ದು ತೆರವುಗೊಳಿ ಹೊಸ ಬಸ್ ನಿಲ್ದಾಣ, ಅಗ್ನಿಶಾಮಕ ವಾಹನ, ಸೇರಿದಂತೆ ಇತರ ಸಾರ್ವಜನಿಕ ಕಟ್ಟಡಗಳ ಅಭಿವೃದ್ಧಿಗೆ ಜಾಗ ಕೊಡಸಲಿ ಎಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯ್ತಿ ಅಧ್ಯಕ್ಷರಾದ ಪ್ರೀತಿ ರಾಘವೇಂದ್ರ, ಮುಖ್ಯಾಧಿಕಾರಿ ಮಂಜುನಾಥ್, ಕಂದಾಯ ಅಧಿಕಾರಿ ಶೃತಿ, ಸಿಬ್ಬಂದಿ ರೇಖಾ, ಪಪಂ ಸದಸ್ಯರುಗಳಾದ ಶೃತಿ, ರತ್ನಮ್ಮ, ರಾಜುಬಡಗಿ, ಜುಬೇರ್, ಸಿದ್ದಿಕ್, ಹೇಮಂತ್, ಮಂಜನಾಯ್ಕ ಮತ್ತಿತರರು ಇದ್ದರು.
(Visited 1 times, 1 visits today)



