ತುಮಕೂರು: ಬಹುಜನ ಸಮಾಜ ಪಕ್ಷದ ರಾಯಚೂರು ಜಿಲ್ಲಾ ಉಸ್ತುವಾರಿ ಭೂಮಾನಂದ್ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಸಂತ್ರಸ್ಥ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಬಹು ಜನ ಸಮಾಜ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ಅಂಜನಮೂರ್ತಿ ಎಂ.ಎA ಸರ್ಕಾರವನ್ನು ಆಗ್ರಹಿಸಿದರು.
ನಗರದ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು, ೫ ಲಕ್ಷ ಪರಿಹಾರ ಒದಗಿಸಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗ ಹಾಗೂ ೫ ಎಕರೆ ಸರ್ಕಾರಿ ಭೂಮಿ ನೀಡಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಬಿಎಸ್‌ಪಿ ಪಕ್ಷದ ರಾಯಚೂರು ಜಿಲ್ಲಾ ಉಸ್ತುವಾರಿಯಾಧ ಭೂಮಾನಂದ್ ಅವರ ಕೊಲೆಯನ್ನು ಖಂಡಿಸುತ್ತೇವೆ. ಸರಕಾರ ಇಡೀ ಪ್ರಕರಣದ ಸಮಗ್ರತನಿಖೆ ನಡೆಸಬೇಕು. ತಪಿತಸ್ಥರಿಗೆಉಗ್ರ ಶಿಕ್ಷ ವಿಧಿಸಬೇಕು. ತನಿಖೆ ನಡೆಯುವವರೆಗೆ ಮೃತ ಭೂಮಾನಂದ್ ಅವರ ಕುಟುಂಬಕೆ ಕರಕ್ಷಣೆ ನೀಡಬೇಕೆಂಬುದು ನಮ್ಮ ಆಗ್ರಹ. ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ರಾಜ್ಯ ಗೃಹ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದಲಿತರ ಮೇಲಿನ ಹಲ್ಲೆ, ದೌರ್ಜನ್ಯಗಳಲ್ಲಿ ತನಿಖೆ ವಿಳಂಬವಾಗಿ, ಸಂತ್ರಸ್ಥರಿಗೆ ನ್ಯಾಯದೊರೆಯುವುದು ಮರೀಚಿಕೆಯಾಗಿದೆ. ಹಾಗಾಗಿ ಪೊಲೀಸರು ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ ಸೀಟ್ ಸಲ್ಲಿಸುವ ಮೂಲಕ ನಿಜವಾದ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಮಾಡಬೇಕು ಎಂದರು.
ಈ ಹಿಂದೆ ತುಮಕೂರು ಜಿಲ್ಲೆಯ ಆನಂದ್ ಎಂಬ ದಲಿತ ಯುವಕನ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಸಂರ್ಘಷಿತ ಗ್ರಾಮಗಳಲ್ಲಿ ಸರ್ವ ಸಮುದಾಯಗಳ ಸಮನ್ವಯ ಸಭೆ ಕರೆದು ಶಾಂತಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳ ಜಾತಿ ಪ್ರಮಾಣಪತ್ರ ರದ್ದು ಪಡಿಸುವ ಮೂಲಕ ಯಾವುದೇ ರಿತಿಯ ಸರ್ಕಾರಿ ಸೌಲಭ್ಯ ನೀಡಬಾರದು, ಸ್ವಾತಂತ್ರ ಬಂದು ೮೦ ವರ್ಷಗಳೇ ಕಳೆದರೂ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲವಾಗಿದ ಎಂದು ಅಂಜನಮೂರ್ತಿ ಎಂ.ಎA ದೂರಿದರು.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯದ ವಿರುದ್ಧ ಹೊರಾಡುತ್ತಿರುವ ರಾಜ್ಯದಲ್ಲಿ ಬಿಎಸ್‌ಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ಗ್ರಾಮೀಣ ಭಾಗಗಳ ದಲಿತ ಕೇರಿಗಳಲ್ಲಿ ಸಿಸಿ ಕ್ಯಾಮಾರ ಅಳವಡಿಸಬೇಕು, ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ್, ಮುಖಂಡರಾದ ಮಂಜುನಾಥ್, ಮಂಜುಳಾ, ಸಿದ್ದಲಿಂಗಯ್ಯ, ಶೂಲಯ್ಯ, ನಗರ ಘಟಕದ ಆಧ್ಯಕ್ಷ ಮಂಜುನಾಥ್ ಇತರರು ಉಪಸ್ಥಿತರಿದ್ದರು.

(Visited 1 times, 1 visits today)