BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ
  • ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ
  • ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ
  • ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
  • ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ
  • ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ
  • ಸಿಂಹಾದ್ರಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹ
  • ಹುಳಿಯಾರು ಪ.ಪಂ ಕಸ ವಿಲೇವಾರಿ ಘಟಕಕ್ಕೆ ಭೂಮಿ ಮಂಜೂರು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ
news

ತಳ ಸಮುದಾಯಗಳು ಗುರುತಿಸಿಕೊಳ್ಳಲು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ

By News Desk BenkiyabaleUpdated:August 10, 2026 5:45 pm

ತುಮಕೂರು: ತಳ ಸಮುದಾಯಗಳು ಸಮಾಜದಲ್ಲಿ ಗುರುತಿಸಿ ಕೊಳ್ಳುತ್ತಿದ್ದರೆ, ಅದಕ್ಕೆ ಕಾರಣ ಅವರಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ ಮನಸ್ಥಿತಿಯೇ ಕಾರಣ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್.ಎನ್ ಛಲವಾದಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಅಮ್ಮಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ) ಮುದಿಮಡು ಇವರು ಆಯೋಜಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತಂದುಕೊಡುವ ಅರೆ, ಉರುಮೆ, ಕಹಳೆ ಇನ್ನಿತರ ಚರ್ಮ ವಾದ್ಯಗಳು ಇಂದಿಗೂ ತಳ ಸಮುದಾಯಗಳ ಕಲೆಯಾಗಿಯೇ ಉಳಿದಿವೆ. ಇಂತಹ ಕಲೆಗಳನ್ನು ಪ್ರೋತ್ಸಾಹಿಸಲು ಇಲಾಖೆಯೂ ಸಿದ್ದವಿದೆ ಎಂದರು.
ಬಾಬಾ ಸಾಹೇಬರು ಬರೆದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬದುಕುತಿದ್ದೇವೆ. ತಳ ಸಮುದಾಯಗಳಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ತಳ ಸಮುದಾಯಗಳು ಸಂಘಟಿತರಾಗಿ ಮುನ್ನೆಡೆದರೆ, ಅದಕ್ಕೆ ನಮ್ಮ ಸಾಂಸ್ಕೃತಿಕ ಹಿರಿಮೆಗಳು ಜೊತೆಗೂಡಿದರೆ ಇಡೀ ವಿಶ್ವವೇ ನಮ್ಮತ್ತ ತಿರುಗಲಿದೆ. ಹಾಗಾಗಿ ಅರೆ, ಉರುವೆ ಕಳಹೆ ಕಲಾವಿದರು ಆಸಕ್ತರಿಗೆ ತಮ್ಮ ಕಲೆಯನ್ನು ಧಾರೆ ಎರೆದು ಅದು ಮುಂದಿನ ಪೀಳಿಗೆಗೆ ತಲುಪವಂತೆ ಮಾಡಬೇಕೆಂದು ಅಶೋಕ್.ಎನ್ ಛಲವಾದಿ ತಿಳಿಸಿದರು.
ಸಮಾಜ ಸೇವಕರಾದ ಗೌತಮ್ ಮಾತನಾಡಿ, ಅಳಿವಿನ ಹಂಚಿನಲ್ಲಿರುವ ಜಾನಪದ ಕಲೆಗಳು ನೂರಾರು ವರ್ಷಗಳ ಕಾಲ ಉಳಿಯಬೇಕೆಂದರೆ ಕಲಾ ಪ್ರೋತ್ಸಾಹಕರ ಅಗತ್ಯವಿದೆ. ಈ ಕೆಲಸವನ್ನು ಅಮ್ಮಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಸುರೇಶ ಅವರು ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ದೆಹಲಿಯಲ್ಲಿ ಅರೆ, ತಮಟೆ,ನಗಾರಿ, ಕಹಳೆ ಕಲೆಗಳ ಪ್ರದರ್ಶನ ನೀಡುವ ಮೂಲಕ ಇಂದಿಗೂ ಆ ಕಲೆಗಳು ಜೀವಂತವಿರುವAತೆ ಮಾಡಿದ್ದಾರೆ. ಮತ್ತಷ್ಟು ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿದರು.
ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಭವನದಲ್ಲಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾದರೆ ಕನಿಷ್ಠ ಒಂದೆರಡು ಕಾರ್ಯಕ್ರಮಗಳನ್ನಾದರೂ ವೀಕ್ಷಿಸುವುದು ಮೊದಲಿನಿಂದಲೂ ರೂಢಿಸಿ ಕೊಂಡಿದ್ದೇನೆ. ಕಲೆಗೆ ಸಾವಿಲ್ಲ. ಹಾಗೆಯೇ ಕಲೆಗೆ ಬೆಲೆ ಕಟ್ಟಲಾಗದು. ನಿಸ್ವಾರ್ಥದಿಂದ ಕಲೆಯ ಸೇವೆ ಮಾಡುವವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಂಬAಧಪಟ್ಟ ಇಲಾಖೆಗಳು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅರೆ, ಉರುಮೆ, ಕಹಳೆಯಂತಹ ಕಲೆಗಳನ್ನು ಚಿತ್ರ ಗಳಲ್ಲಷ್ಟೇ ನೋಡಬೇಕಾದ ಕಾಲ ಬರಬಹುದು ಎಂದರು.
ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ ಮಾತನಾಡಿದರು.
ಕಾರ್ಯಕ್ರಮವನ್ನು ಸೌಭಾಗ್ಯ ಲಕ್ಷಿö್ಮÃಪತಿ ಉದ್ಘಾಟಿಸಿದರು. ವೇದಿಕೆಯಲ್ಲಿ ಚಿಟ್ಟಿಮೇಳ, ವೀರಗಾಸೆ, ಅರೆವಾದ್ಯ, ಪೂಜಾ ಕುಣಿತ, ತಮಟೆ ವಾದ್ಯದ ಪ್ರದರ್ಶನ ಹಾಗೂ ಜಾನಪದ ಗೀತೆಗಳ ಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ ಕುಮಾರ್, ಅಂತರರಾಷ್ಟಿçÃಯ ತಮಟೆ ಕಲಾವಿದ ಕುಂತೂರು ಕುಮಾರ್, ಡಿಸಿ ಕಚೇರಿ ಅಡಳಿತಾಧಿಕಾರಿ ಎಲ್.ಮುರುಳೀಧರ್, ವಕೀಲರಾದ ಹಾಲೇನಹಳ್ಳಿ ಮಂಜುನಾಥ್, ಅಮ್ಮಾಜಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷರಾದ ನರಸಿಂಹರಾಜು, ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ಜಿಲ್ಲಾಡಳಿತ ತುಮಕೂರು:
Previous Articleಸ್ಲ0 ನಿವಾಸಿಗಳ ಕುಂದು ಕೊರತೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ
Next Article ನಕಲಿ ದಾಖಲೆ ಸೃಷ್ಟಿಸಿ ವೃದ್ಧಾಪ್ಯ ವೇತನ ವಂಚನೆ
News Desk Benkiyabale

Related Posts

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm news

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm news
ತಾಜಾ ಸುದ್ಧಿಗಳು
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm
news

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm
news

ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ

September 24, 2026 6:16 pm
news

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm
news

ಕುಡಿಯುವ ನೀರಿನ ಸಮಸ್ಯೆ: ಪರ್ಯಾಯ ಮೂಲಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ

September 23, 2026 5:51 pm
Our Youtube Channel
Our Picks

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm

ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ

September 24, 2026 6:16 pm

ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಡಿಸಿ ಸೂಚನೆ

September 23, 2026 5:52 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

By News Desk BenkiyabaleSeptember 24, 2026 6:21 pm

ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆ ಅಕ್ಟೋಬರ್…

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm

ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ

September 24, 2026 6:18 pm

ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ

September 24, 2026 6:16 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.