BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ
  • ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು
  • ಮದರ್ ಥೆರೆಸಾರವರ ಜನ್ಮದಿನಾಚರಣೆ
  • ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ
  • ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ
  • ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ
  • ಅಡಿಕೆ ತೋಟದಲ್ಲಿ ಕಿಡಿಗೇಡಿಗಳ ಅಟ್ಟಹಾಸ: ಗಿಡಗಳು ನೆಲಸಮ
  • ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು
news

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

By News Desk BenkiyabaleUpdated:August 28, 2026 5:12 pm

ಪಾವಗಡ: ಬಡಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ. ಆದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಂತ್ರಿಕ ಎಡವಟ್ಟು ಹಾಗೂ ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಪಡಿತರ ಚೀಟಿದಾರರು ಬೆಳಗಿನಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತರೂ ರೇಷನ್ ಪಡೆಯಲಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಉಚಿತ ಯೋಜನೆಗಳನ್ನು ಘೋಷಿಸುವ ಸರ್ಕಾರ, ಕೋಟ್ಯಂತರ ಜನರು ಬಳಸುವ ಇಲಾಖೆಯ ಸರ್ವರ್ ಸಾಮರ್ಥ್ಯವನ್ನು ಏಕೆ ಹೆಚ್ಚಿಸುತ್ತಿಲ್ಲ? ಕೂಡಲೇ ತಾಂತ್ರಿಕ ಕೊರತೆಯನ್ನು ನೀಗಿಸಬೇಕು.
ಸರ್ವರ್ ಸಮಸ್ಯೆ ಸಂಪೂರ್ಣ ಬಗೆಹರಿಯುವವರೆಗೆ ಸಾರ್ವಜನಿಕರನ್ನು ಪೀಡಿಸದೆ, ಹಳೆಯ ಮಾದರಿಯಂತೆ ರಿಜಿಸ್ಟರ್ ಆಫ್‌ಲೈನ್ ಆಧಾರದಲ್ಲಿ ಪಡಿತರ ವಿತರಿಸಲು ಆಹಾರ ಇಲಾಖೆ ತಕ್ಷಣ ಆದೇಶ ಹೊರಡಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನಕ್ಕೆ ನೆರವಾಗಲು ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ತಾಂತ್ರಿಕ ಲೋಪದೋಷಗಳಿಂದಾಗಿ ಈ ಸೌಲಭ್ಯವು ಜನಸಾಮಾನ್ಯರಿಗೆ ಸಕಾಲದಲ್ಲಿ ತಲುಪುತ್ತಿಲ್ಲ. ಪಡಿತರ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಯೋಜನೆಗಳು ತಾಂತ್ರಿಕ ಎಡವಟ್ಟುಗಳಿಂದ ಜನರಿಗೆ ತೊಂದರೆಯಾಗಿ ಪರಿಣಮಿಸಿವೆ
ತಾಲ್ಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಯಕ್ಕೆ ಸರಿಯಾಗಿ ಪಡಿತರ ಸಿಗದೆ ಸಾರ್ವಜನಿಕರು ಹಾಗೂ ಪಡಿತರ ಚೀಟಿದಾರರು ತೀವ್ರ ಪರದಾಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಹಾಗೂ ಸರ್ವರ್ ಸಮಸ್ಯೆ ತಲೆದೂರಿದ್ದು, ಬೆಳಗಿನಿಂದ ಸಂಜೆಯವರೆಗೆ ಸಾಲಿನಲ್ಲಿ ನಿಂತರೂ ಅಕ್ಕಿ-ರಾಗಿ ಸಿಗದೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಭಾಗದ ದಿನಗೂಲಿ ನೌಕರರು, ವೃದ್ಧರು ಮತ್ತು ಮಹಿಳೆಯರು ತಮ್ಮ ದೈನಂದಿನ ಕೆಲಸ-ಕಾರ್ಯಗಳನ್ನು ಬಿಟ್ಟು ಮುಂಜಾನೆಯಿAದಲೇ ರೇಷನ್ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಇ-ಪೋಸ್ ಯಂತ್ರದಲ್ಲಿ ಬೆರಳಚ್ಚು ನೀಡುವಾಗ “ಸರ್ವರ್ ಬ್ಯುಸಿ” ಎಂಬ ಸಂದೇಶ ಬರುತ್ತಿದೆ. ಇದರಿಂದಾಗಿ ಇಡೀ ದಿನ ಕಾದು, ಬರೀ ಕೈಯಲ್ಲಿ ಮನೆಗೆ ಹಿಂತಿರುಗುವ ದುಸ್ಥಿತಿ ನಿರ್ಮಾಣವಾಗಿದೆ
ಆಹಾರ ಭದ್ರತೆಯು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ. ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಜಾರಿಗೆ ತಂದಿರುವುದು ಶ್ಲಾಘನೀಯವಾದರೂ, ಡಿಜಿಟಲ್ ಮೂಲಸೌಕರ್ಯ ಮತ್ತು ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸದೇ ಇರುವುದು ಯೋಜನೆಯ ಮೂಲ ಉದ್ದೇಶವನ್ನೇ ಹಾಳುಗೆಡವುತ್ತಿದೆ. ತಂತ್ರಜ್ಞಾನವು ಜನರ ಜೀವನವನ್ನು ಸುಲಭಗೊಳಿಸಬೇಕೇ ಹೊರತು ಅವರಿಗೆ ಶಾಪವಾಗಬಾರದು. ಆಹಾರ ಇಲಾಖೆಯು ಇನ್ನು ಮುಂದಾದರೂ ಕಾಲಹರಣ ಮಾಡದೆ, ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಪಡಿತರದಾರರ ಸಂಕಷ್ಟಕ್ಕೆ ಮುಕ್ತಿ ಹಾಡಬೇಕಿದೆ.

(Visited 1 times, 1 visits today)
kannada news karnataka local news pavagada Protest tumkur ತುಮಕೂರು:
Previous Articleಮದರ್ ಥೆರೆಸಾರವರ ಜನ್ಮದಿನಾಚರಣೆ
Next Article ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ
News Desk Benkiyabale

Related Posts

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm news

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm news

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm news
ತಾಜಾ ಸುದ್ಧಿಗಳು
news

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm
news

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm
news

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm
news

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm
news

ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ

August 28, 2026 5:08 pm
news

ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ

August 28, 2026 5:06 pm
Our Youtube Channel
Our Picks

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

August 28, 2026 5:44 pm

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm

ಅಪಘಾತವಲ್ಲ, ಅದು ಪೂರ್ವಯೋಜಿತ ಕೊಲೆ: ಗ್ರಾಮಸ್ಥರಿಂದ ಪ್ರತಿಭಟನೆ

August 28, 2026 5:08 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ವಿಬಿ ಜಿ ರಾಮ್ ಜಿ ಯೋಜನೆಯ ಕರಪತ್ರ ಬಿಡುಗಡೆ

By News Desk BenkiyabaleAugust 28, 2026 5:44 pm

ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್…

ತಾಂತ್ರಿಕ ಎಡವಟ್ಟು: ರೇಷನ್ ಅಂಗಡಿಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾದ ಜನಸಾಮಾನ್ಯರು

August 28, 2026 5:12 pm

ಮದರ್ ಥೆರೆಸಾರವರ ಜನ್ಮದಿನಾಚರಣೆ

August 28, 2026 5:11 pm

ಮೈಸೂರಿನಿಂದ ಶಿರಡಿಗೆ ೧,೦೦೦ ಕಿ.ಮೀ ಸುದೀರ್ಘ ಯಾತ್ರೆ

August 28, 2026 5:09 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.