
ತುಮಕೂರು: ಸರಕಾರ ಶ್ರೀಕೃಷ್ಣ ಜಯಂತಿಯ ಮೂಲಕ ಸಮುದಾಯದ ಎಲ್ಲರೂ ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿದೆ.ಇದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾರೋಗೆರೆ ಎಂ.ಮಹೇಶ್ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಗೊಲ್ಲರ(ಯಾದವ) ಸಂಘ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸ್ವಾತಂತ್ರ ನಂತರ ಮೊದಲ ಬಾರಿ ನಿಗಮ ಸ್ಥಾಪಿಸಿ, ಅದರ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದರು.
ಗೊಲ್ಲ ಮತ್ತು ಕಾಡುಗೊಲ್ಲ ಸಮುದಾಯದ ತಮ್ಮ ಜಾತಿಯ ಹೆಸರನ್ನು ಎದೆ ಉಬ್ಬಿಸಿ ಹೇಳುವಂತಹ ಧೈರ್ಯ ತೋರಬೇಕು.ಅದರಲ್ಲಿಯೂ ವಿದ್ಯಾವಂತರು ಈ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಬೇಕು.ರಾಜ್ಯದಲ್ಲಿ ಕಾಡುಗೊಲ್ಲರ ಸಂಖ್ಯೆ ೧೦ ಲಕ್ಷಕ್ಕೂ ಅಧಿಕವಿದೆ.ಆದರೆ ವಿವಿಧ ಸೌಲಭ್ಯಗಳಿಗಾಗಿ ನಿಗಮ ಅರ್ಜಿ ಕರೆದರೆ ಕೇವಲ ೪೫೦೦ ಜನರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ.ಇದು ಶೇ೫ ಸಹ ಇಲ್ಲ.ಜನರಲ್ಲಿ ಜಾಗೃತಿ ಇಲ್ಲವೋ, ಅಥವಾ ಉದಾಸೀನವೋ ತಿಳಿಯದು. ಅರ್ಜಿಗಳು ಹೆಚ್ಚಿಗೆ ಬಂದಷ್ಟು ಸರಕಾರದ ಹೆಚ್ಚು ಅನುದಾನ ನಿರೀಕ್ಷೆ ಮಾಡಬಹುದು. ಈ ವರ್ಷದಿಂದ ಅಲೆಮಾರಿ ಪ್ರವೃತ್ತಿಯ ಕುರಿಗಾಯಿಗಳಿಗೆೆ ಒಂದೆಡೆಯಿAದ ಇನ್ನೊಂದಡೆಗೆ ತಮ್ಮ ಸಾಮಾನು, ಸರಂಜಾಮುಗಳನ್ನು ಸಾಗಿಸಲು ಅನುಕೂಲವಾಗುವಂತೆ ನಿಗಮದಿಂದ ಟ್ರಾಕ್ಟರ್ ನೀಡಲು ಅರ್ಜಿ ಕರೆದಿದ್ದೇವೆ.ಸರಕಾರ ನಮ್ಮ ಕೋರಿಕೆ ಮನ್ನಸಿ, ಟ್ರಾಕ್ಟರ್‌ಗೆ ಸಹಾಯ ಧನ ನೀಡಲು ಮುಂದೆ ಬಂದಿದೆ.ಹಾಗೆಯೇ ಇತರೆ ಸಾಲ ಸೌಲಭ್ಯಗಳ ಪಡೆಯಲು ಅರ್ಜಿ ಸಲ್ಲಿಸುವಂತೆ ಎಂ.ಮಹೇಶ್ ಮನವಿ ಮಾಡಿದರು.
ಅಲೆಮಾರಿ ಸಮುದಾಯಕ್ಕೆ ಸೇರಿದ ಕಾಡುಗೊಲ್ಲರ ಹಟ್ಟಿಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಹಲವು ಅನಿಷ್ಠ ಕಟ್ಟುಪಾಡುಗಳನ್ನು ವಿಧಿಸುತ್ತಿದ್ದು,ಇದನ್ನು ನಾವು ಬಿಡಬೇಕಾಗಿದೆ.ಜಾಗದ ಕೊರತೆ ಮತ್ತು ಮೌಢ್ಯತೆಯಿಂದ ಇಂತಹ ಸಂಪ್ರದಾಯಗಳು ಮುಂದುವರೆದುಕೊAಡು ಬಂದಿವೆ.ಆದರೆ ಕಾಲ ಬದಲಾಗಿದೆ. ವೈಜ್ಞಾನಿಕವಾಗಿ ನಾವು ಆಲೋಚಿಸಿ, ಇಂತಹ ಪದ್ದತಿಗಳಿಂದ ಹೊರಬರುವ ಕೆಲಸ ಮಾಡಬೇಕು. ಇದೇ ನಾವು ಶ್ರೀಕೃಷ್ಣನಿಗೆ ನೀಡುವ ನಿಜವಾದ ಗೌರವ ಎಂದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರು,ತುಮಕೂರು ಜಿಲ್ಲಾ ಗೊಲ್ಲರ(ಯಾದವ)ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ,ನಮ್ಮಲ್ಲಿ ಶಿಕ್ಷಣದ ಕೊರತೆ ಇದೆ.ಅದರಲ್ಲಿಯೂ ಮಹಿಳಾ ಶಿಕ್ಷಣ ಬಹಳ ಕೆಳ ಮಟ್ಟದಲ್ಲಿದೆ.ನಮ್ಮಲ್ಲಿರುವ ಮೌಢ್ಯ ಹೋಗಬೇಕಾದರೆ ಮನೆಯ ಜವಾಬ್ದಾರಿ ಹೊರುವ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಹಾಗಾಗಿ ಹೆಣ್ಣು ಮಕ್ಕಳ ಹಾಸ್ಟಲ್ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಿಕೊಡಬೇಕೆಂಬ ಬೇಡಿಕೆ ನಮ್ಮದು.ನಮ್ಮಲ್ಲಿ ಜಾಗೃತಿ ಬಂದರೆ ಕನಿಷ್ಠ ದೊಡ್ಡ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿಯಾದರೂ ನಮ್ಮ ಸಮುದಾಯದ ಶಾಸಕರನ್ನು ನೋಡುವ ನಮ್ಮದಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿ,ಶ್ರೀಕೃಷ್ಣ ಮನುಷ್ಯ ಸಂಸ್ಕöÈತಿಗೆ ಸೇರಿದವ. ಹಾಗಾಗಿಯೇ ತನಗಾಗಿ ರಾಜ ಮಾರ್ಯದೆಯ ಅತಿಥ್ಯವಿದ್ದರೂ ಬಡವನಾದ ವಿಧುರನ ಮನೆಗೆ ಹೋಗಿ ಊಟ ಮಾಡಿದೆ. ಎಲ್ಲರನ್ನು ಒಳಗೊಳ್ಳಬೇಕು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ.ಮಹಾಭಾರತದ ಮುಂದಾಳ್ವತ ವಹಿಸುವ ಶ್ರೀಕೃಷ್ಣ,ಆಸೆ, ಅತಿಯಾಸೆ, ನಿರಾಸೆ ಇವುಗಳ ನಡುವೆ ಇರುವ ಸಂಬAಧವನ್ನು ಹೇಳುತ್ತದೆ.ಮಹಾಭಾರತ ಯುದ್ದದ ಸಾರಥ್ಯವಹಿಸಿದ ಶ್ರೀಕೃಷ್ಣ, ಅದನ್ನು ಸರಿದಾರಿಯಲ್ಲಿ ನಡೆಸಿದ ಕಾರಣದಿಂದ ಧರ್ಮ ಸ್ಥಾಪನೆ ಸಾಧ್ಯವಾಯಿತು.ಮನುಷ್ಯ ಇಂದು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವಿದೆ.ಅದನ್ನು ಗಮನವಿಟ್ಟು ಅವಲೋಕಿಸಿದರೆ ಅದು ಜನರಿಗೆ ದಾರಿದೀಪವಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮೊದಲು ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಟೌನ್‌ಹಾಲ್ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಶ್ರೀಕೃಷ್ಣರ ಭಾವಚಿತ್ರದ ಮೆರವಣಿಗೆಯನ್ನು ಸಮುದಾಯದ ಮುಖಂಡರು ನಡೆಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಪ್ರೊ. ಗುರುಲಿಂಗಯ್ಯ ಉಪನ್ಯಾಸ ನೀಡಿದರು.ಚಂಗಾವರ ಕರಿಯಣ್ಣ ಮಾತನಾಡಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್ ಸಿದ್ದಲಿಂಗಪ್ಪ, ಷಣ್ಮುಗಪ್ಪ, ಮಹಾಲಿಂಗಪ್ಪ,ಚಿಕ್ಕೇಗೌಡ, ಚಿಕ್ಕಪ್ಪಯ್ಯ, ಎಸ್.ಚಿಕ್ಕರಾಜು, ಬಿ.ಈರಯ್ಯ, ಕಲಾವಿದೆ ಅಕ್ಕಮ್ಮ, ಹನುಮಂತರಾಜು, ಶಿವಕುಮಾರಸ್ವಾಮಿ,ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ, ಬಯಲಾಟ ಕಲಾವಿದ ನಾಗರಾಜು, ಗೋವಿಂದರಾಜು,ಮAಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





