ಪಾವಗಡ: ಮಹರ್ಷಿ ವಾಲ್ಮೀಕಿ ಆಶ್ರಮ, ವಾಲ್ಮೀಕಿ ಜಾಗೃತಿ ವೇದಿಕೆ, ನಿಡಗಲ್ಲು ಗ್ರಾಮಸ್ಥರು ಮತ್ತು ದುರ್ಗದ ಅಭಿಮಾನಿಗಳ ವತಿಯಿಂದ ೧೦ನೇ ವರ್ಷದ ನಿಡಗಲ್ಲು ಉತ್ಸವ-೨೦೨೬ ಅನ್ನು ನಿಡಗಲ್ಲು ದುರ್ಗದ ರಾಮತೀರ್ಥ ಬಳಿ ಅದ್ದೂರಿಯಾಗಿ ಆಚರಿಸಲಾಯಿತು.
ಡೋಲು ಬಾರಿಸುವ ಮೂಲಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಸರ್ಕಾರವೇ ಪ್ರತಿ ವರ್ಷ ನಿಡಗಲ್ಲು ಉತ್ಸವ ಆಚರಿಸಬೇಕು ಮತ್ತು ನಿಡಗಲ್ಲು ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ತಮ್ಮ ಶಾಸಕಾವಧಿಯಲ್ಲಿ ದುರ್ಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದು, ವಾಲ್ಮೀಕಿ ಆಶ್ರಮದ ಅಭಿವೃದ್ಧಿಗೆ ಸಂಸದರ ನಿಧಿಯಿಂದ ಸಹಕಾರ ಕೊಡಿಸುವುದಾಗಿ ಭರವಸೆ ನೀಡಿದರು.
ತುಮಕೂರು ನಗರಸಭೆ ಮಾಜಿ ಮಹಾಪೌರ, ವಾಲ್ಮೀಕಿ ಬ್ಯಾಂಕ್ ಅಧ್ಯಕ್ಷ ಬಿ.ಜಿ. ಕೃಷ್ಣಪ್ಪ ಮಾತನಾಡಿ, ಆಶ್ರಮದ ಭವನದ ಮುಂದುವರಿದ ಕಾಮಗಾರಿಗೆ ವೈಯಕ್ತಿಕವಾಗಿ ಮತ್ತು ಬ್ಯಾಂಕ್ ವತಿಯಿಂದ ಸಹಾಯ ಮಾಡುವುದಾಗಿ ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ವಾಲ್ಮೀಕಿ ಸಂಜಯಕುಮಾರಾನAದ ಸ್ವಾಮೀಜಿ ಮಾತನಾಡಿ, ೧೦ ವರ್ಷಗಳಿಂದ ಉತ್ಸವ ಆಚರಿಸುತ್ತಾ ಬಂದರೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಉತ್ಸವ ಆಚರಿಸಲು ಮತ್ತು ಆಶ್ರಮದ ಅಭಿವೃದ್ಧಿಗೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಸಕರು ನಿಡಗಲ್ಲು ಗೈರು ಹಾಗಿರುವುದಕ್ಕೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಲೋಕೇಶ್ ಪಾಳೇಗಾರ್ ಅಧ್ಯಕ್ಷರು ವಾಲ್ಮೀಕಿ ಜಾಗೃತಿ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಮೆರಗೂ ವಿವಿಧ ಸಂಸ್ಥಾನದ ಪಾಳೆಗಾರ ವಂಶಸ್ಥರಾದ ಚಿತ್ರದುರ್ಗದ ದೊಡ್ಡ ಮದಕರಿ ನಾಯಕ ವಂಶಸ್ಥರಾದ ರಾಜ ಪ್ರಸನ್ನ ನಾಯಕ. ರಾಜ ಯಲ್ಲಪ್ಪ ನಾಯಕ ಸಂಸ್ಥಾನದ ದೊರೆ ಪಾಳೆಗಾರ ರಾಜ ಜಯಚಂದ್ರ ರಾಜು. ನಾಯಕನಹಟ್ಟಿ ಸಂಸ್ಥಾನದ ಪಾಳೇಗಾರರಾದ ರಾಜಾ ರುದ್ರಮುನಿ ಪಾಳೇಗಾರ್. ಕಣ್ ಕುಪ್ಪೆ ಸಂಸ್ಥಾನದ ಪಾಳೆಗಾರರಾದ ರಾಜ ತಿಪ್ಪೇಶ್ ಪಾಳೆಗಾರ್. ಹೊಸದುರ್ಗ ಸಂಸ್ಥಾನದ ಪಾಳೆಗರ್ ರಾಜ ಶ್ರೀಧರ್ ನಾಯಕ ಉತ್ಸವದಲ್ಲಿ ಆಗಮಿಸಿರುವುದು ಕಾರ್ಯಕ್ರಮಕ್ಕೆ ವಿಶೇಷ ಮೆರಗುತ ನೀಡಿತ್ತು.
ಉತ್ಸವ ಕಾರ್ಯಕ್ರಮ ನಿಡಗಲ್ಲು ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದಿಂದ ವಿವಿಧ ಕಲಾತಂಡಗಳೊAದಿಗೆ ಮೆರವಣಿಗೆ ಮೂಲಕ ರಾಮತೀರ್ಥದವರೆಗೂ ಕಲಾತಂಡಗಳ ಮೆರವಣಿಗೆ ನಡೆಯಿತು ವೇದಿಕೆಯಲ್ಲಿ ವಿಶೇಷ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು.
ಕನ್ನಡ ಸಂಸ್ಕöÈತಿ ಇಲಾಖೆ ಅಡಿಯಲ್ಲಿ ಬಯಲಾಟ ಅಕಾಡೆಮಿ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಡಿ ನಾಗರಾಜು ಅವರಿಗೆ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿ.ಪಂ. ಸದಸ್ಯ ತಿಮ್ಮಾರೆಡ್ಡಿ. ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಲಕ್ಷಿ÷್ಮÃನಾರಾಯಣ್. ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್ ನಾಯಕ. ಜಿಲ್ಲಾ ನಾಯಕ ಸಂಘದ ಪದಾಧಿಕಾರಿಗಳಾದ. ಜಯರಾಮ್. ಎನ್. ಅನಿಲ್ ಕುಮಾರ್. ಆರ್ ಟಿ ಓ ತಿಪ್ಪೇಸ್ವಾಮಿ. ಆರ್‌ಟಿಓ ನಾಗರಾಜ್. ಕೊತ್ತೂರು ನಾಗೇಶ್. ಸೊಗಡು, ಎನ್ ಎ, ಈರಣ್ಣ,
ಪಿಡಿಒ ಚಿಕ್ಕಣ್ಣ, ಡಿಎಸ್‌ಎಸ್ ಸಿಕೆ ತಿಪ್ಪೇಸ್ವಾಮಿ, ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ, ಮುಖಂಡರಾದ ಎನ್.ಎ. ಈರಣ್ಣ. ವೆಂಕಟೇಶ್. ಸಮಾಜ ಸೇವಕ ಚೇತನ್ ಬಾಬು. ನರಸಿಂಹ ಕೃಷ್ಣ. ನರಸಿಂಹಮೂರ್ತಿ. ಟಿ.ಪಿ. ನರಸಿಂಹ. ನಿಡಗಲ್ಲು. ರಾಮಪ್ಪ,ಕಾಮರಾಜ, ಮಹಾರಾಜ್, ಪಾಲಾಕ್ಷ, ಪಟೇಲ್ ಹನುಮಂತರಾಯ. ಹೋಮ ನಾಗರಾಜು, ಬಲರಾಮ್. ತಿಮ್ಮಯ್ಯ.ಮಲ್ಲಿಕಪ್ಪ, ಗಿರಿಜಾ ಶಿವಣ್ಣ, ನಿವೃತ್ತ ಸೈನಿಕ ಅನಂತ್. ಶ್ರೀಧರ್. ಪಾವಗಡ ಪ್ರಕಾಶ್. ರಂಗಮ್ಮ ಶಿವಕುಮಾರ.ಅಂಬಿಕರಮೇಶ್. ಮುಂತಾದವರು ಹಾಜರಿದ್ದರು.
(Visited 1 times, 1 visits today)





