ತುಮಕೂರು: ಸರ್ಕಾರದಿಂದ ಕೃತಕ ಬುದ್ಧಿಮತ್ತೆ (ಎಐ) ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಸರ್ಕಾರಿ ಇಂಜಿನಿಯರ್ಗಳ ಸಂಘದ ಉದ್ಘಾಟನೆ ಹಾಗೂ ಸಂಘದ ಲಾಂಛನ ಅನಾವರಣ ಮಾಡಿ ಮಾತನಾಡಿದ ಅವರು, ಬದಲಾಗುತ್ತಿರುವ ತಂತ್ರಜ್ಞಾನದ ಜತೆ ನಾವು ಪ್ರಯಾಣ ಮಾಡಬೇಕು. ಇದೀಗ ಎಲ್ಲಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅದರ ವೇಗಕ್ಕೆ ಹೊಂದಿಕೊಳ್ಳಬೇಕು. ತಂತ್ರಜ್ಞಾನ ಮತ್ತಷ್ಟು ಸುಧಾರಣೆ ಆಗಬೇಕು. ಮುಂದಿನ ವರ್ಷದಿಂದ ಸರ್ಕಾರದಿಂದಲೇ ಇಂಜಿನಿಯರ್ಸ್ ದಿನ ಆಚರಿಸಲಾಗುವುದು ಎಂದರು.
ಉತ್ತರ ಕರ್ನಾಟಕದ ಭಾಗಕ್ಕಿಂಥಾ ಮೈಸೂರು ಕರ್ನಾಟಕ ಅಭಿವೃದ್ಧಿಯಾಗಿರುವುದಕ್ಕೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಅವರ ಆಡಳಿತದಲ್ಲಿ ಇಂಜಿನಿಯರ್, ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಅಭಿವೃದ್ಧಿ ಚಿಂತನೆ, ಅವರು ಮಾಡಿದ ಕೆಲಸ ಕಾರಣ. ವಿಶ್ವೇಶ್ವರಯ್ಯನವರು ನಾಡಿನ ಅಭಿವೃದ್ಧಿ ಆಗಬೇಕು ಎಂದುಕೊAಡು ಕಾರ್ಯನಿರ್ವಹಿಸಿದರು, ಕಾರ್ಯವ್ಯಾಪ್ತಿಯಲ್ಲಿ ಸ್ವಾರ್ಥತೆ ಬರಬಾರದು ಎಂಬ ತತ್ವ, ಆದರ್ಶಗಳನ್ನು ಇಟ್ಟುಕೊಂಡಿದ್ದರು. ತಮ್ಮ ಜೀವನಪೂರ್ತಿ ಅದೇ ತತ್ವದಡಿಯಲ್ಲಿ ಕಾರ್ಯನಿರ್ವಹಿಸಿದರು ಎಂದರು.
ದೇಶದ ಅಭಿವೃದ್ಧಿಯಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ ಎಲ್ಲಾ ಕ್ಷೇತ್ರಗಳ ಇಂಜಿನಿಯರ್ಗಳ ಪಾತ್ರ ದೊಡ್ಡದಿದೆ. ಹೊಸ ಆವಿಷ್ಕಾರ, ಮೂಲಸೌಕರ್ಯ ಒದಗಿಸುವಲ್ಲಿ ಇಂಜಿನಿಯರ್ಗಳು ಕೊಡುಗೆ ನೀಡಿದ್ದಾರೆ. ಆದರೆ, ಕೆಲವು ಪರಿಸ್ಥಿತಿಯಲ್ಲಿ ಇಂಜಿನಿಯರ್ಗಳು ವಿವಿಧ ರೀತಿಯ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಏನೇ ಆದರೂ ಇಂಜಿನಿಯರ್ಗಳು ತಮ್ಮ ಆತ್ಮಸಾಕ್ಷಿಯಂತೆ ಕೆಲಸ ಮಾಡುವ ಪ್ರಯತ್ನ ಮಾಡಬೇಕಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಚಂದ್ರಶೇಖರಗೌಡ, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಒ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ನಗರಪಾಲಿಕೆ ಆಯುಕ್ತೆ ಬಿ.ಶುಭಕ, ಸರ್ಕಾರದ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ರಾಘವನ್, ಪ್ರಧಾನ ಇಂಜಿನಿಯರ್ಗಳಾದ ಬಿ.ಆರ್. ವೀರಭದ್ರಯ್ಯ, ಟಿ.ಎನ್. ಫಣಿರಾಜ್, ಎಚ್.ಕೆ. ದಿವಾಕರ್ ನಾಯಕ್, ನಿವೃತ್ತ ಮುಖ್ಯ ಇಂಜಿನಿಯರ್ ಹೆಚ್. ಶಿವಕುಮಾರ್, ಮುಖ್ಯ ಇಂಜಿನಿಯರ್ ಹೆಚ್.ಎಸ್. ಆನಂದ್, ಅಧೀಕ್ಷಕ ಇಂಜಿನಿಯರ್ಗಳಾದ ಜಿ.ಸಿ.ಜಗದೀಶ್, ಬಿ. ತಿಮ್ಮರಾಯಪ್ಪ , ಜಿಲ್ಲಾ ಸರ್ಕಾರಿ ಇಂಜಿನಿಯರ್ಗಳ ಸಂಘದ ಅಧ್ಯಕ್ಷ ಎಚ್.ಆರ್. ಮುರಳೀಧರ, ಉಪಾಧ್ಯಕ್ಷ ಜಿ. ರಾಜು, ಕಾರ್ಯದರ್ಶಿ ಎಚ್.ಎಂ.ಪುಷ್ಯAತ್, ಜಿ.ಎನ್.ರಾಧಾಕೃಷ್ಣ, ಎಸ್.ಛಾಯಾಮಣಿ ಮತ್ತಿತರರು ಇದ್ದರು.
(Visited 1 times, 1 visits today)





