
ತುರುವೇಕೆರೆ: ತಾಲೂಕಿನ ಕೋಳಘಟ್ಟ ಗ್ರಾಮದ ಮಂಜುನಾಥ ಜಲ್ಲಿಕ್ರಷರ್ ಕಾರ್ಮಿಕನ ಮೇಲೆ ಕ್ರಷರ್ ಮಾಲೀಕ ರಾಜೂಗೌಡ ಕೈ ಕಟ್ಟಿ ಮಾರಾಂತಿಕ ಹಲ್ಲೆ ನೆಡೆಸಿರುವ ವಿಡಿಯೋ ಸಮಾಜಿಕ ತಾಣದಲ್ಲಿ ವೈರಲ್ ಹಾಗಿದೆ.
ತಾಲ್ಲೂಕು ಕೊಳಘಟ್ಟಗ್ರಾಮದಲ್ಲಿ ಮಂಡ್ಯ ಮೂಲದ ರಾಜೇಗೌಡ ಎಂಬ ವ್ಯಕ್ತಿ ಸುಮಾರು ವರ್ಷಗಳಿಂದ ಜಲ್ಲಿ ಕ್ರಷರ್ ನಡೆಸುತ್ತಿದ್ದು,
ಕ್ರಷರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಮೇಲೂ ಕೂಡ ಹಲ್ಲೆಯನ್ನು ನಡೆಸುತ್ತಿರುವ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ. ವ್ಯಕ್ತಿ ಹೊಸದುರ್ಗ ಮೂಲದ ವ್ಯಕ್ತಿ ಕ್ರಷರ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದ್ದು ಹಣ ದುರುಪಯೋಗ ಮಾಡಿದ್ದಾರೆ ಎಂದು ಈ ರೀತಿ ಬೆತ್ತಲೆಯನ್ನು ಮಾಡಿ ಅವರ ಕೈಗಳನ್ನು ಬಂಧಿಸಿ ಬೆಲ್ಟ್ ನಲ್ಲಿ ಕ್ರಷರ್ ಮಾಲಿಕ ರಾಜೇಗೌಡ ಎಂಬ ವ್ಯಕ್ತಿ ಹಲ್ಲೆಯ, ಈ ವಿಡಿಯೋ ಹರಿದಾಡುತ್ತಿದೆ. ಈ ಘಟನೆ ಸಂಭವಿಸುತ್ತಿದAತೆ ರಾಜೂಗೌಡ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಿ ಬಲೆ ಬೀಸಿದ್ದಾರೆ.
ತಹಸೀಲ್ದಾರ್ ಕುಂ ಇ ಅಹಮದ್ ಎ.ಎನ್. ಪೋಲೀಸರು ಸ್ಥಳಕ್ಕೆ ಭೇಟಿ: ತಾಲ್ಲೂಕಿನ ಕೊಳಘಟ್ಟ ಗ್ರಾಮದಲ್ಲಿರುವ ‘ಮೇ ಮಂಜುನಾಥ ಸ್ಟೋನ್ ಕ್ರಷರ್’ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬAಧಿಸಿದAತೆ, ತಹಸೀಲ್ದಾರ್ ಕುಂ ಇ ಅಹಮದ್ ಎ.ಎನ್. ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ತುರ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳಘಟ್ಟದ ಮಂಜುನಾಥ ಸ್ಟೋನ್ ಕ್ರಷರ್‌ನಲ್ಲಿ ಹೊಸದುರ್ಗ ಮೂಲದ ಅಭಿಷೇಕ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣ ಸ್ಥಳಕ್ಕೆ ಧಾವಿಸಿದೆ. ತಹಸೀಲ್ದಾರ್ ಕುಂ ಇ ಅಹಮದ್ ಎ.ಎನ್., ಪೊಲೀಸ್ ಸಬ್‌ಇನ್‌ಸ್ಪೆಕ್ಟರ್, ಕಂದಾಯ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಕುಂ ಇ ಅಹಮದ್ ಎ.ಎನ್ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ವಿಡಿಯೋ ವೈರಲ್ ಆದ ತಕ್ಷಣವೇ ಕಂದಾಯ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ನಾವು ಭೇಟಿ ನೀಡಿದ ಸಂದರ್ಭದಲ್ಲಿ ಕ್ರಷರ್ ಮಾಲೀಕರು ಹಾಗೂ ಹಲ್ಲೆಗೊಳಗಾದ ವ್ಯಕ್ತಿ ಸ್ಥಳದಲ್ಲಿ ಇರಲಿಲ್ಲ. ಸ್ಥಳೀಯ ಗ್ರಾಮಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡಿದ್ದೇವೆ. ಈ ಸಂಬAಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ರೀತಿ ಅಗತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.


