BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ
  • ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ
  • ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ
  • ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ
  • ತುಮಕೂರು ಪೌರಾಣಿಕ ರಂಗಭೂಮಿ ತವರೂರು
  • ಜಂಬೂ ಸವಾರಿ ಮೆರವಣಿಗೆ ಸಿದ್ಧತೆ
  • ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥ ಸ್ವಚ್ಚತಾ ಕಾರ್ಯಕ್ರಮ
  • ಹೆಲಿಕಾಪ್ಟರ್‍ಗೆ ಮುತ್ತಿಗೆ ಹಾಕಲು ಯತ್ನ: ವಿದ್ಯಾರ್ಥಿಗಳ ಆಕ್ರೋಶ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು ಪೌರಾಣಿಕ ರಂಗಭೂಮಿ ತವರೂರು
news

ತುಮಕೂರು ಪೌರಾಣಿಕ ರಂಗಭೂಮಿ ತವರೂರು

By News Desk BenkiyabaleUpdated:October 13, 2026 5:58 pm

ತುಮಕೂರು: ರಂಗಭೂಮಿ ಎಂಬುದು ಒಂದು ಸಶಕ್ತ ಮಾಧ್ಯಮ ಎಂದು ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್. ಶಿವಣ್ಣ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗ ದಸರಾ ಅಂಗವಾಗಿ ಚೇಳೂರಿನ ದೃಷ್ಟೇಶ್ವರ ಕೃಪಾಪೋಷಿತ ನಾಟಕ ಮಂಡಳಿಯವರು ಪ್ರಸ್ತುತಪಡಿಸಿದ ದೇವಿ ಮಹಾತ್ಮೆ ಯಕ್ಷಗಾನ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ತುಮಕೂರು ಪೌರಾಣಿಕ ರಂಗಭೂಮಿಯ ತವರೂರು ಎಂದ ಅವರು ಪೌರಾಣಿಕ ನಾಟಕವೆಂದರೆ ಪುರಾಣಗಳಲ್ಲಿನ ಕಥೆಗಳು, ಪಾತ್ರಗಳು ಮತ್ತು ಘಟನೆಗಳನ್ನು ಆಥರಿಸಿ ರಚಿತವಾದ ನಾಟಕ ಎಂದರು.
ಇದು ಧಾರ್ಮಿಕ, ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುತ್ತದೆ. ಹಾಗೆಯೇ ಪ್ರೇಕ್ಷಕರಿಗೆ ಆದರ್ಶ ಜೀವನ ಮಾರ್ಗವನ್ನು ತೋರಿಸುತ್ತದೆ ಎಂದರು.
ರAಗ ದಸರಾಕ್ಕೆ ಉಪಮುಖ್ಯಮಂತ್ರಿರ ಡಾ. ಜಿ. ಪರಮೇಶ್ವರ್ ಸಾಥ್ ನೀಡಿದ್ದಾರೆ. ಕಳೆದ ವರ್ಷದಿಂದ ವಿಜೃಂಭಣೆಯಿAದ ರಂಗ ದಸರಾ ಆರಂಭವಾಗಿದೆ. ಈ ವರ್ಷ ವೈವಿಧ್ಯಮಯ ನಾಟಕಗಳು ಪ್ರದರ್ಶನಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಾಟಕಗಳು ಪ್ರದರ್ಶನ ಕಾಣುವಂತಾಗಲಿ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ರಂಗ ದಸರಾದ ಉದ್ದೇಶ ಸ್ಥಳೀಯ ರಂಗಭೂಮಿ ಕಲಾವಿದರಿಗೆ ಉತ್ತೇಜನ ನೀಡುವುದು ಹಾಗೂ ನಾಟಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಆಗಿದೆ ಎಂದರು. ಕಳೆದ ವರ್ಷ ತುಮಕೂರು ರಂಗ ದಸರಾದಲ್ಲಿ ಪೌರಾಣಿಕ ನಾಟಕಕ್ಕೆ ಆದ್ಯತೆ ನೀಡಲಾಗಿತ್ತು. ಈ ಬಾರಿ ಪೌರಾಣಿಕ ನಾಟಕಗಲ ಜೊತೆಗೆ ಸಾಮಾಜಿಕ ನಾಟಕಗಳಿಗೂ ವೇದಿಕೆ ಕಲ್ಪಿಸಲಾಗಿದೆ ಎಂದರು.
ಜಿಲ್ಲೆ ಪೌರಾಣಿಕ, ಜಾನಪದ, ಬುಡಕಟ್ಟು ಹೀಗೆ ವೈವಿಧ್ಯಮಯ ಕಲಾ ಪ್ರಕಾರಗಳಿಗೆ ಹೆಸರು ವಾಸಿಯಾಗಿರುವುದರಿಂದ ತುಮಕೂರಿಗೆ ಬಯಲು ಸೀಮೆ ರಂಗಾಯಣವನ್ನು ಸರ್ಕಾರ ಮಂಜೂರು ಮಾಡಬೇಕೆಂದು ತಿಳಿಸಿದರು. ಈಗಾಗಲೇ ಕರ್ನಾಟಕ ವಿವಿಧೆಡೆ ರಂಗಾಯಣಗಳು ಸಕ್ರಿಯವಾಗಿದೆ. ಬೆಂಗಳೂರು, ಕೋಲಾರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಒಳಗೊಂಡು ಬಯಲು ಸೀಮೆ ರಂಗಾಯಣ ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು.
ಈಗಾಗಲೇ ರಂಗದಸರಾದಲ್ಲಿ ಶಿವಸತಿಯರ ಕಲ್ಯಾಣ, ದಕ್ಷಯಜ್ಞ, ರತಿ ಮನ್ಮಥ ಕಲ್ಯಾಣ, ಕೌಂಡ್ಲಿಕನ ವಧೆ, ದೇವಿ ಮಹಾತ್ಮೆ ನಾಟಕಗಳು ಪ್ರದರ್ಶನಗೊಂಡಿದ್ದು ರಕ್ತ ಬೀಜಾಸುರ ವಧೆ, ಕುರುಕ್ಷೇತ್ರ, ಭಗವದ್ಗೀತೆ, ಕರ್ಣ ಕುಂತಿಯರ ಸಮಾಗಮ, ಶ್ರೀಕೃಷ್ಣ ವಿಧುರಾತಿಥ್ಯ, ಮುದ್ರಿಕಾ ಪ್ರಧಾನ, ಭೀಮ ಪ್ರತಿಜ್ಞೆ, ಛಲದೋಳ್ ದುರ್ಯೋಧನ, ಮೂರುವರೆ ವಜ್ರಗಳು, ಶ್ರೀಕೃಷ್ಣ ರಾಯಭಾರ, ಗೌತಮ ಬುದ್ಧ, ಜ್ಞಾನಜ್ಯೋತಿ ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ, ಕರ್ಣಕುಲಂ ಹಾಗೂ ಶ್ರೀಕೃಷ್ಣನ ಶಾಂತಿ ಸಂದೇಶ ನಾಟಕಗಳು ಪ್ರದರ್ಶನಗೊಳ್ಳಲಿದೆ ಎಂದರು.
ವೇದಿಕೆಯಲ್ಲಿ ಎಂ.ವಿ. ನಾಗಣ್ಣ, ರಂಗರಾಜು ಬನಶಂಕರಿ, ನಂಜಪ್ಪ ಶೆಟ್ರು, ಬಿ.ಎಂ. ವೆಂಕಟೇಶ್, ಎಸ್. ರಾಜಣ್ಣ, ಪುಟ್ಟಬೋರಯ್ಯ, ರಾಮು, ಹೆಚ್.ಆರ್. ರಂಗಪ್ಪ, ಜಗನ್ನಾಥ ಪಟೇಲ್ ಮುಂತಾದವರಿದ್ದರು.

(Visited 1 times, 1 visits today)
kannada news karnataka local news tumakur tumkur tumkur news ತುಮಕೂರು:
Previous Articleಜಂಬೂ ಸವಾರಿ ಮೆರವಣಿಗೆ ಸಿದ್ಧತೆ
Next Article ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ
News Desk Benkiyabale

Related Posts

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm news

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm news

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm news
ತಾಜಾ ಸುದ್ಧಿಗಳು
news

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm
news

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm
news

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm
news

ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ

October 13, 2026 6:02 pm
news

ತುಮಕೂರು ಪೌರಾಣಿಕ ರಂಗಭೂಮಿ ತವರೂರು

October 13, 2026 5:58 pm
news

ಜಂಬೂ ಸವಾರಿ ಮೆರವಣಿಗೆ ಸಿದ್ಧತೆ

October 13, 2026 5:56 pm
Our Youtube Channel
Our Picks

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

October 13, 2026 6:07 pm

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm

ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ

October 13, 2026 6:02 pm

ತುಮಕೂರು ಪೌರಾಣಿಕ ರಂಗಭೂಮಿ ತವರೂರು

October 13, 2026 5:58 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬಡತನ ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯ

By News Desk BenkiyabaleOctober 13, 2026 6:07 pm

ತುಮಕೂರು: ಅ.೧೩: ಪದವಿ ಶಿಕ್ಷಣವೆಂಬುದು ಬದುಕಿನ ಕನಸುಗಳನ್ನು ಹೊತ್ತು ಸಾಗುವ ಪರಿಶ್ರಮದ ದಾರಿ.ಬಡತನ,ಹಸಿವು ಇವುಗಳನ್ನು ಮೆಟ್ಟಿ ನಿಂತಾಗ ಮಾತ್ರ ನಿರ್ಧಿಷ್ಟ…

ಪಾವಗಡ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬರದ ಸಿದ್ಧತೆ

October 13, 2026 6:05 pm

ಚಿ.ನಾ.ಹಳ್ಳಿ ತಾಲ್ಲೂಕಿನ ನವಿಲೆ ಕೆರೆಗೆ ಹೇಮೆ ಹರಿಸಲು ರೈತರ ಆಗ್ರಹ

October 13, 2026 6:03 pm

ಬಜರ0ಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಕಾರ್ಯಾಚರಣೆ

October 13, 2026 6:02 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.