ತುಮಕೂರು: ಅ.೧೩: ಪದವಿ ಶಿಕ್ಷಣವೆಂಬುದು ಬದುಕಿನ ಕನಸುಗಳನ್ನು ಹೊತ್ತು ಸಾಗುವ ಪರಿಶ್ರಮದ ದಾರಿ.ಬಡತನ,ಹಸಿವು ಇವುಗಳನ್ನು ಮೆಟ್ಟಿ ನಿಂತಾಗ ಮಾತ್ರ ನಿರ್ಧಿಷ್ಟ ಗುರಿ ತಲುಪಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯ ಪಟ್ಟಿದ್ದಾರೆ
ನಗರದ ಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಸಾಂಸ್ಕöÈತಿಕ, ಕ್ರೀಡೆ,ಎನ್.ಎಸ್.ಎಸ್., ಎನ್.ಸಿ.ಸಿ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಅಭಿವ್ಯಕ್ತಿ-೨೦೨೬-೨೭ ಕ್ಕೆ ದೀಪ ಬೆಳಗಿಸಿ, ಲಿಂಗೈಕ್ಯ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸಿ ಮಾತನಾಡಿದ ಅವರು, ಹಸಿವು, ಬಡತನ ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯಗಳಿಂದಲೂ ಸಿಗಲು ಸಾಧ್ಯವಿಲ್ಲ ಎಂದರು.
೧೯೭೮-೮೧ ರ ಅವಧಿಯಲ್ಲಿ ನಾನು ಸಹ ಈ ಕಾಲೇಜಿನ ವಿದ್ಯಾರ್ಥಿ, ಅಂದು ಇಷ್ಟು ಅಧುನಿಕ ಸೌಕರ್ಯಗಳ ಇರಲಿಲ್ಲ.ಆದರೆ ಬೋಧಕರ ಪರಿಶ್ರಮ ಸ್ವಾಮೀಜಿ ಇಚ್ಚೆ ಇಂದು ಈ ಸಂಸ್ಥೆಯನ್ನು ಹೆಸರುವಾಸಿಯನ್ನಾಗಿಸಿದೆ.ಹಿರಿಯ ಸ್ವಾಮೀಜಿಗಳ ನಿತಂತರ ಪರಿಶ್ರಮದ ಫಲವಾಗಿ,ಒಳ್ಳೆಯ ಕಟ್ಟಡಗಳು ತಲೆ ಎತ್ತಿ, ಬ್ಲಾಕ್ ಬೋರ್ಡ್ ಹೋಗಿ ಸ್ಮಾರ್ಟ್ ಕ್ಲಾಸ್ ಗಳು ಬಂದಿವೆ.ಆದರೆ ವಿದ್ಯಾರ್ಥಿಗಳ ಅನಾಸಕ್ತಿಯಿಂದ ಅಂಕಗಳಿಕೆಗೆ ಮಾತ್ರ ಶಿಕ್ಷಣ ಸಿಮೀತವಾಗಿ, ಮೌಲ್ಯಗಳು ಮರೆಯಾಗಿವೆ.ವಿದ್ಯಾರ್ಥಿಗಳು ಮಾನವೀಯತೆ, ಮನುಷತ್ವ,ಜಾತ್ಯಾತೀತ ತತ್ವಗಳನ್ನು ಅಳವಡಿಸಿಕೊಂಡು ಸಮಾಜ ಸೇವೆಯತ್ತ ಮುಖ ಮಾಡಬೇಕಿದೆ. ಆತ್ಮಸಾಕ್ಷಿ ಮತ್ತು ಸಾಮಾಜಿಕ ಪ್ರಜ್ಞೆಯನ್ನು ರೂಢಿಸಿಕೊಂಡು, ಸಾರ್ವಜನಿಕ ಆಸ್ತಿ,ಪಾಸ್ತಿಗೆ ಹಾನಿಯಾಗದಂತೆ ನಡೆದುಕೊಂಡರೆ,ಅದೇ ನಿಜವಾದ ರಾಷ್ಟçಪ್ರೇಮ ಎಂದು ಕೆ.ಎಸ್.ಸಿದ್ದಲಿಂಗಪ್ಪ ನುಡಿದರು.
ಅಭಿವ್ಯಕ್ತಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಯುವ ಗಾಯಕ ವ್ಯಾಸರಾಜ್ ,ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದು, ನಾವು ಇಲ್ಲಿ ಕಲಿಕೆಯ ಜೊತೆಗೆ, ಗಳಿಕೆಗೂ ಅವಕಾಶವಿದೆ. ಶಿಕ್ಷಣದ ಮೂಲಕ ಜ್ಞಾನವನ್ನು ಕಲಿತರೆ, ನಮ್ಮಲಿನ ಪ್ರತಿಭೆಗಳ ಮೂಲಕ ಕೌಶಲ್ಯ ಗಳಿಸಲು ಸಾಧ್ಯವಿದೆ. ಜೀವನ ರೂಪಿಸಲು ಅಂಕಗಳೇ ಸಾಲದು, ವ್ಯಕ್ತಿತ್ವವೂ ಮುಖ್ಯ.ಈ ಎರಡರತ್ತಲೂ ವಿದ್ಯಾರ್ಥಿಗಳು ಗಮನ ಹರಿಸಿದಾಗ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ. ಎಲ್ಲಾ ಕ್ಷೇತ್ರದಲ್ಲಿಯೂ ಪೈಪೋಟಿ ಇದೆ. ಎಲ್ಲರಿಗಿಂತ ಬೆಸ್ಟ್ ಆದಾಗ ಮಾತ್ರ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯ. ಒಳ್ಳೆಯವರ ಸಹವಾಸ ಮಾಡಿ, ಎಷ್ಟೇ ಆತ್ಮೀಯ ಗೆಳೆಯನಾದರೂ, ಆತ ತಪುö್ಪ ಮಾಡಿದಾಗ,ಅದನ್ನು ಖಂಡಿಸುವ, ಇಲ್ಲವೇ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜನಾಧಿಕಾರಿ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಆಶಯದೊಂದಿಗೆ ಆರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಉನ್ಬತವಾದ ಬದುಕು ಕಟ್ಟಿಕೊಂಡಿದ್ದಾರೆ. ರಾಷ್ಟç ಕವಿ ಜಿ.ಎಸ್.ಶಿವರುದ್ರಪ್ಪ ಈ ಕಾಲೇಜಿನ ಇಂಟರ್ ಮಿಡಿಯೆಟ್ ವಿದ್ತಾರ್ಥಿ, ಅವರು ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಬರೆದ ಕವನ ಲೋಕ ವಿಖ್ಯಾತವಾಗಿದೆ. ಏಕಾಗ್ರತೆಯಿಂದ ಮನುಷ್ಯ ಮೇಲ್ಮುಖವಾಗಿ ಬೆಳೆಯಲು ಸಾಧ್ಯ. ಭಾರತ ಇಂದು ವಿಶ್ವದಲ್ಲಿಯೇ ಮೊಬೈಲ್ ಮಾರಾಟಕ್ಕೆ ಬಹುದೊಡ್ಡ ವೇದಿಕೆಯಾಗಿದೆ.ಯುವಜನರು ಸಹ ರೀಲ್ಸ್ ಹುಚ್ಚಿಗೆ ಬಿದ್ದು, ಇಹಲೋಕವನ್ನೇ ಮರೆತಿದ್ದಾರೆ.ಕೇವಲ ಅಂಕ ಗಳಿಕೆಯೇ ಮಾನದಂಡವಾಗಿರುವ ಈ ಕಾಲದಲ್ಲಿ ನೈತಿಕತೆ, ಮಾನವೀಯತೆ,ಅನುಕಂಪ,ಪ್ರೀತಿ ವಿಶ್ವಾಸಗಳನ್ಬು ಬೆಳಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಆರ್.ರೇವಣಸಿದ್ದಯ್ಯ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದು, ಅ ಮೂಲಕ ಶ್ರೀಗಳ ಕನಸು ನನಸಾಗಿದೆ. ಪಠ್ಯಗಳು ಜ್ಞಾನವನ್ನು ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಾಯಕತ್ವದ ಗುಣದ ಜೊತೆಗೆ, ಶಿಸ್ತು,ಸೇವಾ ಮನೋಭಾವ, ಅನುಕಂಪ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಕಲಿಸಿಕೊಡಲಿವೆ. ಮಕ್ಕಳಲ್ಲಿನ ಕಲೆ.ಸಾಹಿತ್ಯ ಮತ್ತು ಸಾಂಸ್ಕöÈತಿಕ ಪ್ರತಿಭೆಗೆ ಅಭಿವ್ಯಕ್ತಿ ವೇದಿಕೆಯಾಗಿದೆ ಎಂದರು.
ಅಭಿವ್ಯಕ್ತಿಯ ಸಂಚಾಲಕರಾದ ಶ್ರೀ ಮತಿ ಸೌಮ್ಯ ಎಲ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಸಂಚಾಲಕರಾದ ಡಾ. ರಾಕೇಶ್.ಹೆಚ್. ಡಾ.ಸೌಮ್ಯಶ್ರೀ ಆರ್., ನಯನ.ಎಂ, ಡಾ.ಪದ್ಮಜ.ವೈ.ಎಂ,ವ್ಯವಸ್ಥಾಪಕರಾದ ಪಿ.ಜಿ.ಗಂಗಣ್ ಅವರುಗಳು ಉಪಸ್ಥಿತರಿದ್ದರು.
(Visited 1 times, 1 visits today)





