BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ
  • ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ
  • ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ
  • ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?
  • ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ
  • ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ
  • ತುಮಕೂರು ರಂಗ ದಸರಾದಲ್ಲಿ “ಮೂರುವರೆ ವಜ್ರಗಳು” ನಾಟಕ ಪ್ರದರ್ಶನ
  • ರಸ್ತೆ ಕಾಮಗಾರಿ ವಿಳಂಬ: ಪೂರ್ಣಗೊಳಿಸಲು ಸಿಪಿಐ(ಎಂ) ಒತ್ತಾಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ
news

ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ

೨೦೧೬-೧೭ನೇ ಸಾಲಿನಲ್ಲಿ ನಡೆಸಿದ ಇಡೀ ನೇಮಕಾತಿ ಪ್ರಕ್ರಿಯೆಯ ತನಿಖೆಗೆ ಆಗ್ರಹ
By News Desk BenkiyabaleUpdated:October 22, 2026 5:16 pm

ತುಮಕೂರು: ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ತುಮುಲ್)ನಲ್ಲಿ ೨೦೧೬-೧೭ನೇ ಸಾಲಿನಲ್ಲಿ ನಡೆಸಿದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇತ್ತೀಚಿನ ಸುಪ್ರಿಂ ಕೋರ್ಟು ತೀರ್ಪು ಇದಕ್ಕೆ ಸಾಕ್ಷಿ ಎಂಬAತೆ ಇದೆ. ಹಾಗಾಗಿ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ತನಿಖೆಗೆ ಒಳಪಡಿಸಬೇಕು ಎಂದು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅರುಣ್ ಕುಮಾರ್, ವೆಂಕಟೇಶ್, ಶಾಂತಲಾ, ಶಾಂತರಾಜು, ರೇಣುಕಯ್ಯ, ಪುಟ್ಟರಾಜು, ರಜತ್ ಹಾಗೂ ಮಂಜುನಾಥ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅತಿ ಹೆಚ್ಚು ಅಂಕ ಪಡೆದಿರುವ ಅಭ್ಯರ್ಥಿಗಳನ್ನು ಬಿಟ್ಟು, ಕಡಿಮೆ ಅಂಕ ಪಡೆದಿರುವ ಕೆಲವರಿಗೆ ಉದ್ಯೋಗ ನೀಡಲಾಗಿದೆ. ವೇಣುಗೋಪಾಲ್ ಎಂಬುವವರು ೧೦೨ ಅಂಕಗಳನ್ನು ಪಡೆದಿದ್ದು, ಮಧುಸೂಧನ್ ಎಂಬುವವರು ೭೭ ಅಂಕ ಪಡೆದಿದ್ದರು. ಆದರೆ ಹೆಚ್ಚು ಅಂಕ ಪಡೆದ ವೇಣುಗೋಪಾಲ್ ಎಂಬುವವರ ಬದಲಿಗೆ ಮಧುಸೂಧನ್ ಉದ್ಯೋಗ ನೀಡಲಾಗಿತ್ತು. ವೇಣುಗೋಪಾಲ್ ಆಡಳಿತ ಮಂಡಳಿಯ ಈ ನಿರ್ಧಾರ ಪ್ರಶ್ನಿಸಿ, ಹೈಕೋರ್ಟು, ಸುಪ್ರಿಂಕೋರ್ಟಿನ ವರೆಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಇದೇ ಸುಮಾರು ೩೫-೪೦ರವರವಗೆ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.
ನೇರ ನೇಮಕಾತಿಯಲ್ಲಿ ಪಡೆದ ಅಂಕ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ತುಲನೆ ಮಾಡಲು ಮೂಲ ದಾಖಲಾತಿಗಳನ್ನು ಕೇಳಿದರೆ ಕಳೆದು ಹೋಗಿದೆ ಎಂಬ ಸಬೂಬು ಹೇಳುತ್ತಿದ್ದಾರೆ. ಅಲ್ಲದೆ ಕಳೆದ ಅಕ್ಟೋಬರ್ ೧೪ರಂದು ಆಡಳಿತ ವಿಭಾಗದಲ್ಲಿರುವ ಇಬ್ಬರು ಮಹಿಳಾ ಸಿಬ್ಬಂದಿಗಳು ಪರೀಕ್ಷೆಗೆ ಸಂಬAಧಿಸಿದ ದಾಖಲಾತಿಗಳನ್ನು ನಕಲು ಮಾಡಿರುವುದು ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿದ್ದರು ಸಹ ತುಮುಲ್ ಆಡಳಿತ ಆ ಇಬ್ಬರು ಮಹಿಳಾ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದೆ.ತುಮುಲ್ ನೇಮಕಾತಿ ಅಕ್ರಮಗಳ ಬಗ್ಗೆ ನೊಂದ ಅಭ್ಯರ್ಥಿಗಳು ತುಮುಲ್ ಆಡಳಿತ ಮಂಡಳಿಗೆ ಹಾಗೂ ಸಹಕಾರ ಇಲಾಖೆಗೆ ದೂರು ನೀಡಿದ ಬೆನ್ನಲ್ಲೇ ದಾಖಲಾತಿಗಳನ್ನು ತಿದ್ದಲು ಪ್ರಭಾವಿಗಳು ಮುಂದಾಗಿದ್ದು, ಆತ್ಮೀಯ ನೌಕರರ ಮೂಲಕ ದಾಖಲಾತಿಗಳ ನಕಲನ್ನು ತರಿಸಿಕೊಂಡಿರಬಹುದು ಎಂದು ಆರೋಪಿಸಿದರು.
ಕೆಲ ಅಭ್ಯರ್ಥಿಗಳು ಸಂದರ್ಶನಕ್ಕೆ ಬರದಿದ್ದರೂ ಅವರಿಗೆ ಅಂಕಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು. ನಕಲಿ ದಾಖಲೆಗಳ ಬಳಕೆಯ ಆರೋಪಗಳನ್ನೂ ಪರಿಶೀಲಿಸಿ, ತಪ್ಪು ದೃಢಪಟ್ಟರೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೊಂದ ಅಭ್ಯರ್ಥಿಗಳಾದ ನಮ್ಮಗಳ ಆಗ್ರಹವಾಗಿದೆ. ಮಾಜಿ ಸೈನಿಕರು, ಮಹಿಳೆಯರು ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸಂಬAಧಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕೆಂದು ಮನವಿ ಮಾಡಲಾಗಿದೆ. ಮೀಸಲಾತಿ ಹುದ್ದೆಗಳನ್ನು ಇತರ ವರ್ಗದ ಅಭ್ಯರ್ಥಿಗಳಿಗೆ ನೀಡಿದ್ದರೆ, ಅದಕ್ಕೆ ಸಮರ್ಥ ಪ್ರಾಧಿಕಾರದ ಅನುಮತಿ ಇದೆಯೇ ಮತ್ತು ರೋಸ್ಟರ್ ಹಾಗೂ ಮೆರಿಟ್ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
ಮೂಲ ಅಂಕಪಟ್ಟಿಗಳು, ಉತ್ತರ ಪÀತ್ರಿಕೆಗಳು, ಸಂದರ್ಶನದ ಅಂಕಗಳು, ಆಯ್ಕೆಪಟ್ಟಿಗಳು ಮತ್ತು ನೇಮಕಾತಿ ಸಮಿತಿಯ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮಗಳು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನ್ಯಾಯಕ್ಕೆ ಒಳಗಾದ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ವತಂತ್ರ‍್ಯ ಸಂಸ್ಥೆಯಿAದ ತನಿಖೆ ಮಾಡಲು ಸರಕಾರ ಮುಂದಾಗಬೇಕು ಎನ್ನುವ ಮಾತುಗಳು ಕೇಳಿಬಂದಿವೆ. ಕೆಪಿಎಸ್ಸಿ ಹಗರಣದ ಮಾದರಿ ತುಮುಲ್ ನೇಮಕಾತಿ ಮಾದರಿ ಒಂದೇ ಎನ್ನುವಂತಾಗಿದ್ದು, ಕೆಪಿಎಸ್ಸಿಗೆ ಹಗರಣದಲ್ಲಿ ಸರಕಾರ ನಡೆಸುತ್ತಿರುವ ತನಿಖೆಯಂತೆ ತುಮುಲ್ ನಲ್ಲಿ ನಡೆದಿರುವ ೨೦೧೬-೧೭ರ ನೇಮಕಾತಿ ಅಕ್ರಮವನ್ನು ತನಿಖೆಗೆ ಒಳಪಡಿಸಬೇಕು ಎಂದು ನೊಂದ ಅಭ್ಯರ್ಥಿಗಳು ತುಮುಲ್ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.
ತುಮುಲ್‌ನಲ್ಲಿ ೨೦೧೬-೧೭ನೇ ಸಾಲಿನ ನಡೆದಿರುವ ನೇಮಕಾತಿಯಲ್ಲಿ ಅಕ್ರಮವಾಗಿರುವ ಬಗ್ಗೆ ನೊಂದ ಅಭ್ಯರ್ಥಿಗಳು ತುಮುಲ್ ಆಡಳಿತ ಮಂಡಳಿಗೆ ದೂರು ನೀಡಿದ ನಂತರ ರಚಿಸಿದ ತನಿಖಾ ಯಾವ ತನಿಖೆಯನ್ನು ನಡೆಸದೇ ಸುಮ್ಮನಾಗಿದೆ. ನೇಮಕಾತಿಯಲ್ಲಿ ನೇಮಕಾತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿ ಸಿರುವ, ನೇಮಕಾತಿಗೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆಯದೇ ಇರುವ ಅಭ್ಯರ್ಥಿಗಳು ಹಾಗೂ ಸಂದರ್ಶನ ಅರ್ಹತೆಯೇ ಇಲ್ಲದ, ಸಂದರ್ಶನಕ್ಕೆ ಹಾಜರಾಗದವರು ಸಹ ಹೇಗೆ ನೇಮಕಗೊಂಡರು ಎನ್ನುವುದರ ಬಗ್ಗೆ ತನಿಖಾ ತಂಡ ಬಹಿರಂಗ ಪಡಿಸಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ನೊಂದ ಅಭ್ಯರ್ಥಿಗಳು ಒತ್ತಾಯಿಸಿದರು.

(Visited 1 times, 1 visits today)
crime Gubbi kannada news karnataka local news Police Protest tumakur tumkur tumul ತುಮಕೂರು:
Previous Articleಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ
Next Article ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ
News Desk Benkiyabale

Related Posts

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm news

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm news
ತಾಜಾ ಸುದ್ಧಿಗಳು
news

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm
news

ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ

October 22, 2026 5:16 pm
news

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm
news

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm
news

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm
news

ವಿದ್ಯಾರ್ಥಿಗಳು ಎಬಿಸಿಡಿ ತಂತ್ರಜ್ಞಾನ-ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ

October 19, 2026 5:13 pm
Our Youtube Channel
Our Picks

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

October 22, 2026 5:18 pm

ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ

October 22, 2026 5:16 pm

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm

ದಸರಾ ಮಹೋತ್ಸವಕ್ಕೆ ಶಾಸಕ ಜ್ಯೋತಿಗಣೇಶ್ ಚಾಲನೆ

October 19, 2026 5:15 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ

By News Desk BenkiyabaleOctober 22, 2026 5:18 pm

ತುಮಕೂರು: ತುಮಕೂರು ದಸರಾ ಉತ್ಸವದ ಅಂಗವಾಗಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಬುಧವಾರ…

ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ

October 22, 2026 5:16 pm

ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಆರೋಪ

October 19, 2026 5:21 pm

ಜಿ.ಪಂ. ಮೀಸಲಾತಿ ಕಾಂಗ್ರೆಸ್ ಅಭ್ಯರ್ಥಿಗಳಿಗಾಗಿಯೇ ಮಾಡಲಾಗಿದೆಯೇ?

October 19, 2026 5:18 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.