ಕೊರಟಗೆರೆ: ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯನ್ನು ಸಮುದಾಯದ ಮುಖಂಡರ ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ತ್ರೀ ಸಬಲೀಕರಣದ ಶಕ್ತಿ ಒನಕೆ ಓಬವ್ವ ಎಂದ ತಹಶೀಲ್ದಾರ್ ಶರತ್ ಕುಮಾರ್. ಗಂಡಿನ ಪ್ರತಿ ಸಾಧನೆಯ ಹಿಂದೆ ಹೆಣ್ಣಿನ ಶಕ್ತಿ ಇರುತ್ತದೆ ಎಂಬುವುದಕ್ಕೆ ಉದಾಹರಣೆ ಒನಕೆ ಓಬವ್ವ. ಒನಕೆ
ಯಿಂದ ಶತ್ರುಗಳನ್ನು ಸದೆ ಬಡಿದಿದ್ದರು. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಆಂತರಿಕವಾಗಿ ಬದಲಾಗಬೇಕು. ಸರ್ಕಾರದ ಹಲವು ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಪುರುಷರಿಗೆ ಸರಿ ಸಮಾನವಾಗಿ ಕೆಲಸ ಮಾಡಬೇಕು ಎಂದು ತಹಶೀಲ್ದಾರ್ ಸಲಹೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹನುಮ ಮೂರ್ತಿ ಓಬವ್ವ ಅವರ ಚರಿತ್ರೆ ತಿಳಿಯಲು ನಾವು ಪ್ರಯತ್ನಿಸಬೇಕು ಎಂದು ಛಲವಾದಿ ಸಮುದಾಯದ ಮುಖಂಡ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್, ಪುರಸಭೆ ಮುಖ್ಯ ಅಧಿಕಾರಿ ಉಮೇಶ್ ಕೆಎಸ್, ಜೋಶ್ನಾ ರೆಡ್ಡಿ, ಕಲ್ಲೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ.ಯಮುನಾ.ಹಾಗೂ ಛಲವಾದಿ ಮಹಾಸಭೆಯ ನಿರ್ದೇಶಕರು ಮುಖಂಡರುಗಳು.ಹಾಗೂ ಪತ್ರಕರ್ತರ ಹಾಗೂ ಅಧ್ಯಕ್ಷರು ಸದಸ್ಯರು ಭಾಗಿಯಾಗಿದ್ದರು.

(Visited 1 times, 1 visits today)