ತುಮಕೂರು: ಪ್ರಯೋಗದಾಟಗಳ ರಂಗಕೇಂದ್ರವೆಂದೇ ಪ್ರಸಿದ್ಧಿ ಇರುವ ನಾಟಕ ಮನೆ ತುಮಕೂರು ರಂಗತಂಡವು ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ರಂಗಉತ್ಸವ, ನಾಟಕಗಳು, ವಿಚಾರಸಂಕಿರಣ, ರಂಗ ಕಾರ್ಯಾಗಾರಗಳು, ಸಾಧಕರಿಗೆ ಅಭಿನಂದನೆ ಹೀಗೆ ಹಲವಾರು ರೀತಿಯ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಇದರ ಮುಂದುವರಿದ ಭಾಗವಾಗಿ ದಿನಾಂಕ12-11-2026ರ ಗುರುವಾರ ಸಂಜೆ 7ಕ್ಕೆ ತುಮಕೂರಿನ ಸ್ವಾಂದೇನಹಳ್ಳಿಯಲ್ಲಿ ಗುರುಶಿಷ್ಯರು ಎಂಬ ಹಾಸ್ಯ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶನಗೊಳಿಸಲಾಗಿದೆ.
ನಾಟಕವನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟನೆ ಮಾಡಿದ ಅತಿಥಿಗಳಾದ ಎಮ್.ವಿ.ನಾಗಣ್ಣ, ಜಿಲ್ಲಾ ರಾಜು ಕುಮಾರ್ ಪ್ರಶಸ್ತಿಪುರಸ್ಕೃತರು, ನಂಜಪ್ಪ ಶೆಟ್ರು ಯಲ್ಲಾಪುರ, ಕಲಾವಿದರು, ಫೆÇೀಟೋ ಜಗಧೀಶ್, ಸತ್ಯಮಂಗಲ ಕಲಾವಿದರು, ಮೊಹಮದ್ ರಫಿ, ಕಲಾಪೆÇೀಷಕರು, ಈರಣ್ಣ ಬೀರನಕಲ್ಲು, ನ್ಯಾಯಬೆಲೆ ಅಂಗಡಿ ಮಾಲೀಕರು, ರಂಗರಾಜು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪಣಗಾರ್ ರಮೇಶ್, ಸ್ವಾಂದೇನಹಳ್ಳಿ, ರಂಗಣ್ಣ ಸ್ವಾಂದೇನಹಳ್ಳಿ, ರಂಗಭೂಮಿ ಕಲಾವಿದರು ವೇದಿಕೆಯನ್ನು ಅಲಂಕರಿಸಿದ್ದರು. ಉದ್ಘಾಟನೆಯ ನಂತರ ಮಾತನಾಡಿದ ಎಮ್.ವಿ.ನಾಗಣ್ಣ, ಜಿಲ್ಲಾ ರಾಜು ಕುಮಾರ್ ಪ್ರಶಸ್ತಿ ಪುರಸ್ಕೃತರು ಗ್ರಾಮೀಣ ಭಾಗದಲ್ಲಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿ ನಾಟಕಕ್ಕೆ ಶುಭಕೋರಿದರು. ಫೆÇೀಟೋ ಜಗಧೀಶ್, ಸತ್ಯಮಂಗಲ ಕಲಾವಿದರು ಒಂದು ಗಣೇಶನ ಕುರಿತಾದ ರಂಗಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ನಂಜಪ್ಪ ಶೆಟ್ರು ಯಲ್ಲಾಪುರ, ಕಲಾವಿದರು ಮಾತನಾಡಿ ನಾಟಕಗಳ ಮಹತ್ವವನ್ನು ತಿಳಿಸಿ ನಾಟಕಗಳ ಮೂಲಕ ಸಾಮಾಜದ ಸ್ವಾಸ್ಥವನ್ನು ಉಳಿಸಿಕೊಳ್ಳುವುದರ ಬಗ್ಗೆ ಹೇಳಿ ನಾಟಕಕ್ಕೆ ಶುಭಕೋರಿದರು.
ನಂತರ ರಂಗರಾಜು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತರು, ಮೊಹಮದ್ ರಫಿ, ಕಲಾ ಪೆÇೀಷಕರು, ಜಯರಾಮಯ್ಯ, ಹರಿಕಥೆ ವಿದ್ವಾಂಸರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಬನಶಂಕರಿ ಈ ಮೂವರು ಸಾಧಕರನ್ನು ಸ್ವಾಂದೇನಹಳ್ಳಿ ಗ್ರಾಮಸ್ಥರು ಹಾಗು ಸಿದ್ಧಿ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರುಗಳಿಂದ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮ ಮುಗಿದ ಮೇಲೆ ಗುರುಶಿಷ್ಯರು ಹಾಸ್ಯ ನಾಟಕ ಬಹಳ ಯಶಸ್ವಿಯಾಗಿ ತುಂಬಿದ ಪ್ರೇಕ್ಷಾಂಗಣದಲ್ಲಿ ಪ್ರದರ್ಶನಗೊಂಡಿತು. ಒಬ್ಬ ಜ್ಞಾನಿ ಗುರು ಮತ್ತು ಅವನ ಏಳು ಜನ ಮೂರ್ಖ ಶಿಷ್ಯರ ಸುತ್ತ ಈ ಹಾಸ್ಯಕಥೆ ಸಾಗುತ್ತದೆ. ದೇವತೆಗಳ ಶಾಪದಿಂದಾಗಿ ಜ್ಞಾನಿ ಗುರುವಿಗೆ ಅತ್ಯಂತ ಮೂರ್ಖರಾದ ಏಳುಜನ ಶಿಷ್ಯರುಸಿಗುತ್ತಾರೆ. ಗುರುಗಳು ಏನು ಹೇಳಿದರು ಈ ಶಿಷ್ಯರು ಅದನ್ನು ತದ್ವಿರುದ್ಧವಾಗಿ ಅಥವಾ ಅತಿಬುದ್ಧಿವಂತಿಕೆಯಿಂದ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಉದಾಹರಣೆಗೆ: ನದಿ ದಾಟುವಾಗ ಎಲ್ಲರೂ ಇದ್ದಾರಾ ಎಂದು ಎಣಿಸುವಾಗ, ಎಣಿಸುವವನು ತನ್ನನ್ನು ತಾನು ಬಿಟ್ಟು ಉಳಿದ ಆರು ಜನರನ್ನು ಮಾತ್ರ ಎಣಿಸಿ ಒಬ್ಬ ಮುಳುಗಿಹೋದ ಎಂದು ಅಳುವುದು; ಗುರುವಿನ ಆಜ್ಞೆಯನ್ನು ಅಕ್ಷರಶಃ ಪಾಲಿಸಲು ಹೋಗಿ ಇಡೀ ಊರನ್ನೇ ಗೊಂದಲಕ್ಕೀಡು ಮಾಡುವುದು.
ಈ ವಿಶೇಷ ಹಾಸ್ಯನಾಟಕಕ್ಕೆ ಹೆಚ್ಚಿನಸಂಖ್ಯೆಯಲ್ಲಿ ರಂಗಾಸಕ್ತ ಬಂಧುಗಳು ಸೇರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿ ಕಲಾವಿದರಿಗೆ ಸ್ಪೂರ್ತಿಯನ್ನು ತುಂಬಿದರು.

(Visited 1 times, 1 visits today)