ತುಮಕೂರು: ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿಕೊಂಡಿರುವ ಸಾಲದ ಒಪ್ಪಂದ ಹಾಗೂ ಖಾಸಗಿ ಶಾಲೆಗಳು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ನೀತಿಯನ್ನು ವಿರೋಧಿಸಿ, ಎಐಡಿಎಸ್‌ಓ ನೇತೃತ್ವದಲ್ಲಿ ನಗರದ ಟಿಪುö್ಪನಗರ ಹಾಗೂ ಕುಂಕಮನಹಳ್ಳಿಯಲ್ಲಿ ವಿದ್ಯಾರ್ಥಿಗಳ ಹಾಗೂ ಪೋಷಕರ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ “ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೬ನೇ ತರಗತಿಯಿಂದಲೇ ಎಲೆಕ್ಟಿçಕಲ್, ಪ್ಲಂಬಿAಗ್, ಬ್ಯೂಟಿ ವೆಲ್ನೆಸ್, ಕೃಷಿ, ತೋಟಗಾರಿಕೆ ಮುಂತಾದ ಕೌಶಲ್ಯಾಧಾರಿತ ಶಿಕ್ಷಣ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರವು ನಿರ್ಧರಿಸಿದೆ. ‘ರಾಜ್ಯದ ಶೇ ೪೦ರಷ್ಟು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ಪಿಯು ಹಂತದಲ್ಲೇ ಶಿಕ್ಷಣ ತೊರೆದು ಉದ್ಯೋಗ ಹುಡುಕಲು ತೊಡಗುತ್ತಾರೆ. ಅವರು ಕೌಶಲ್ಯಗಳ ಕೊರತೆಯಿಂದ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ’ ಎಂಬ ವಾದವನ್ನು ಮುಂದಿಟ್ಟು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಂದರೆ, ಶಿಕ್ಷಣ ತೊರೆಯುವ ಬಡಮಕ್ಕಳಿಗೆ ಪೂರಕ ವಾತಾವರಣ ಮತ್ತು ಅವಕಾಶಗಳನ್ನು ಕಲ್ಪಿಸಿ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಬದಲಿಗೆ ಶಿಕ್ಷಣದಿಂದ ದೂರ ತಳ್ಳುವುದೇ ಸರ್ಕಾರದ ಉದ್ದೇಶ ಎಂಬುದನ್ನು ಇದು ಸಾಬೀತುಪಡಿಸುತ್ತದೆ”. ಸರ್ಕಾರದ ಈ ಬಡಜನ ವಿರೋಧಿ ಅವೈಜ್ಞಾನಿಕ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಮುAದುವರಿದು ಮಾತನಾಡಿದ ಅವರು “ಈ ಮೂಲಕ ಸಾರ್ವಜನಿಕ ಶಿಕ್ಷಣ ಮತ್ತು ನಾಗರೀಕತೆಯನ್ನು ಸರ್ವನಾಶಗೊಳಿಸಲು ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎನ್‌ಈಪಿ-೨೦೨೦ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಹಣವಂತರ ಮಕ್ಕಳು ಖಾಸಗೀ ಶಾಲೆಗಳಿಗೆ ಹೋಗಿ ಗಣಿತ, ವಿಜ್ಞಾನ ಮುಂತಾದ ಮೂಲಭೂತ ವಿಷಯಗಳನ್ನು ಕಲಿತು ಉನ್ನತ ಶಿಕ್ಷಣದ ತಯಾರಿ ಮಾಡುತ್ತಾರೆ. ಬಡಮಕ್ಕಳನ್ನು ಮಾತ್ರ ಕೌಶಲ್ಯದ ಹೆಸರಲ್ಲಿ ಶಿಕ್ಷಣದಿಂದ ದೂರ ತಳ್ಳಿ ಕಾರ್ಪೊರೇಟ್ ಕಂಪನಿಗಳಿಗೆ ಅಗ್ಗದ ಕಾರ್ಮಿಕರನ್ನಾಗಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಕೆಪಿಎಸ್ ಯೋಜನೆ ಅನುಷ್ಠಾನಕ್ಕಾಗಿ ಎಡಿಬಿಯಿಂದ ತೆಗೆದುಕೊಂಡಿರುವ ಫಲಿತಾಂಶ ಆಧಾರಿತ (೨,೦೦೦ಕೋಟಿ) ಸಾಲದ ಕರಾರುಗಳ ಭಾಗವಾಗಿ ಈ ಕೌಶಲ್ಯದ ನಾಟಕವನ್ನು ಸರ್ಕಾರ ಆರಂಭಿಸಿದೆ. ದೇಶದ ಹೆಮ್ಮೆಯ ಇಂಜಿನಿಯರ್ ಆದ ಸರ್ ಎಂ ವಿಶ್ವೇಶ್ವರಯ್ಯ, ವಿಜ್ಞಾನಿ ಸಿ ವಿ ರಾಮನ್, ಮುಂತಾದ ಮೇರು ವ್ಯಕ್ತಿತ್ವಗಳಿಗೆ ಶಾಲೆಯಲ್ಲಿ ಯಾವ ಕೌಶಲ್ಯ ನೀಡಲಾಗಿತ್ತು ಎಂಬ ಪ್ರಶ್ನೆಯನ್ನು ನಾವು ಕೇಳಬಯಸುತ್ತೇವೆ!”
ಸರ್ಕಾರವು ಕೌಶಲ್ಯದ ಹೆಸರಲ್ಲಿ ನೈಜ ಶಿಕ್ಷಣವನ್ನು ಕಡೆಗಣಿಸುವ ಹುನ್ನಾರನ್ನು ಕೈಬಿಡಬೇಕು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಪ್ರೇಮಿ ಜನತೆ ಸರ್ಕಾರದ ಈ ಹುನ್ನಾರವನ್ನು ವಿರೋಧಿಸಿ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಜನಹೋರಾಟವನ್ನು ಬಲಪಡಿಸಬೇಕೆಂದು ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಮೊಹಸಿನ್ ಬಾನು ಅವರು ಮಾತನಾಡಿದರು.
ಎಐಡಿಎಸ್‌ಓ ಕಾರ್ಯಕರ್ತರಾದ ಸೈಯದ್, ಉಮೇಶ್, ನಂದನ್ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮಂಜುಳ , ನರಸಿಂಹರಾಜು, ಶ್ರೀಧರ್ ಮೂರ್ತಿ, ಮೊಹಸಿನ್ ಭಾನು, ಅಮಿದ್ ಖಾನ್, ಅಪ್ಸನ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

(Visited 1 times, 1 visits today)