BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು
  • ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ
  • ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ
  • ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ
  • ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ
  • ಪರ್ಯಾಯ ಸ್ಥಳ ಕಲ್ಪಿಸದೆ ತೆರವುಗೊಳಿಸುವುದು ಸಲ್ಲದು: ಸಿಐಟಿಯು
  • ಗಂಗಸ0ದ್ರ ಕೆರೆ ಏರಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜ್ಯೋತಿಗಣೇಶ್ ಚಾಲನೆ
  • ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದವರು ವೀರಣ್ಣ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಮಹಿಳಾದಿನದ ಅಂಗವಾಗಿ ನಡೆದ ರಾಗಿಬೀಸುವ ಸ್ಪರ್ಧೆ
ತುಮಕೂರು ಜಿಲ್ಲಾ ಸುದ್ಧಿಗಳು

ಮಹಿಳಾದಿನದ ಅಂಗವಾಗಿ ನಡೆದ ರಾಗಿಬೀಸುವ ಸ್ಪರ್ಧೆ

By News Desk BenkiyabaleUpdated:March 12, 2019 4:57 pm

ಚಿಕ್ಕನಾಯಕನಹಳ್ಳಿ:

      ಗ್ರಾಮೀಣ ಭಾಗದಿಂದಲೂ ಮರೆಯಾಗುತ್ತಿರುವ ಶ್ರಮಸಂಸ್ಕೃತಿಯನ್ನು, ಈಗಿನ ಸಮಾಜಕ್ಕೆ ಪರಿಚಯುಸುವಲ್ಲಿ ತಾಲ್ಲೂಕಿನ ಶೆಟ್ಟಿಕೆರೆಯ ಜನತಾಯುವ ಕ್ರೀಡಾಸಂಘ ಪ್ರಯತ್ನ ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸಮೂರ್ತಿ ತಿಳಿಸಿದರು.

      ತಾಲ್ಲೂಕಿನ ಶೆಟ್ಟಿಕೆರೆಯ ಜನತಾ ಪ್ರೌಢಶಾಲಾ ಆವರಣದಲ್ಲಿ ಅಂತರ್‍ರಾಷ್ಟ್ರೀಯ ಮಹಿಳಾದಿನದ ಅಂಗವಾಗಿ ನಡೆದ ರಾಗಿಬೀಸುವ ಸ್ಪರ್ಧೆ ಹಾಗೂ ಮೂರು ಬಿಂದಿಗೆ ನೀರು ಹೊರವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಜಾನಪದಗಳ ಹುಟ್ಟಿಗೆ ಕಾರಣವಾಗಿದ್ದ ಧಾನ್ಯಗಳನ್ನು ಬೀಸುವ ಹಾಗೂ ಕುಟ್ಟುವ ಸಂಸ್ಕೃತಿ ಇಂದು ಮರೆಯಾಗಿದೆ. ಅಂದು ರೈತರು ಕೊಟ್ಟಿಗೆ ಗೊಬ್ಬರವನ್ನು ತಮ್ಮ ಹೊಲಕ್ಕೆ ಬಳಸಿ ಯಾವುದೇ ರಾಸಾಯನಿಕ ಆಂಶದಿಂದ ಹೊರತಾದ ಧಾನ್ಯವನ್ನು ಬೆಳೆಯುತ್ತಿದ್ದರು. ನಂತರ ಕಣದಲ್ಲಿ ಸಂಸ್ಕರಿಸಿದ ಧಾನ್ಯವನ್ನು ಮನೆಗೆ ತಂದು ಕೆಡದಂತೆ ತಮ್ಮದೆ ವ್ಯವಸ್ಥೆಯಲ್ಲಿ ಇಡುತ್ತಿದ್ದರು. ಇಂತಹ ಧಾನ್ಯವನ್ನು ಪುಡಿಮಾಡಿ ಬಳಸುವಲ್ಲಿ ಬೀಸುವ ಕಲ್ಲುಗಳು , ಒರಳಕಲ್ಲು ಮತ್ತು ಒನಕೆಗಳ ಬಳಕೆ ಎಲ್ಲಾ ಮನೆಯಲ್ಲಿಯೂ ಇರುತ್ತಿತ್ತು. ಇದರ ಬಳಕೆಯಿಂದ ಧಾನ್ಯದಲ್ಲಿನ ಸತ್ವ ಹಾಗೂ ಸಾರದ ಅಂಶಗಳು ಪುಡಿಮಾಡಿದಾಗಲೂ ಹಾಗೆಯೇ ಉಳಿಯುತ್ತಿತ್ತು. ಆದರೆ ಕ್ರಮೇಣ ರೈಸ್‍ಮಿಲ್ ಹಾಗೂ ಗ್ರೈಂಡರ್‍ಗಳ ಪರಿಪಾಟ ಎಲ್ಲಡೆ ಬಂದಾಗ ರೈಸ್‍ಮಿಲ್‍ನಿಂದ ಧಾನ್ಯ ಪುಡಿಯಾಗುತ್ತಿದ್ದಾಗಲೇ ವಿಪರೀತ ಶಾಖದ ಪರಿಣಾಮದಿಂದ ಧಾನ್ಯದಲ್ಲಿನ ಸಾರ ಹಾಗೂ ಸತ್ವದ ಪ್ರಮಾಣ ಗಣನೀಯವಾಗಿ ವ್ಯವವಾಗುತ್ತದೆ. ಇಂತಹ ಆಹಾರದ ಬಳಕೆಯಿಂದ ನಮ್ಮ ದೇಹಕ್ಕೆ ಸಿಗಬೇಕಾದ ಪೌಷ್ಟಿಕಾಂಶದ ಕೊರತೆಯಿಂದ ಕ್ರಮೇಣ ದೇಹದ ಆರೋಗ್ಯ ಏರುಪೇರಾಗುತ್ತಿದೆ. ಇದರ ಅರಿವು ಬಹುತೇಕರಿಗೆ ಇರುವುದಿಲ್ಲವೆಂದ ಅವರು ಗ್ರಾಮೀಣ ಭಾಗದಲ್ಲಿ ರಾಗಿ ಬೀಸುವ ವಿಧಾನ ಇನ್ನೂ ಜೀವಂತವಾಗಿದೆ. ಈಗಿನ ಯುವಜನತೆ ಇಂತಹ ಪಾರಂಪರಿಕ ಶ್ರಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕಿದೆ ಎಂದರು.

      ನಂತರ ನಡೆದ ರಾಗಿ ಬೀಸುವ ಸ್ಪರ್ಧೆಗೆ 20 ಮಂದಿ ಭಾಗವಹಿಸಿದ್ದರೆ, ಮೂರು ಬಿಂದಿಗೆ ನೀರನ್ನು ಹೊತ್ತು ತರುವ ಸ್ಪರ್ಧೆಯಲ್ಲಿ 15 ಮಂದಿ ಸ್ಪರ್ಧಿಸಿದ್ದರು.
ರಾಗಿ ಬೀಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಲ್ಲಿ ಕೆಲವರು ಜಾನಪದ ಹಾಡುಗಳನ್ನಾಡುತ್ತಾ ಬೀಸುತ್ತಿದ್ದರೆ ಮತ್ತೆ ಕೆಲವರು ಭರದಿಂದ ಬೀಸುತ್ತಿದ್ದರು. ಆದರೆ ನಿಯಮಿತ ಅವಧಿಯಲ್ಲಿ ನುಣ್ಣಗೆ ಬೀಸಿದ ರಾಗಿಹಿಟ್ಟಿನ ಲೆಖ್ಖವನ್ನು ಮಾತ್ರ ಪರಿಗಣನೆಗೆ ತೆಗದುಕೊಳ್ಳಲಾಗುತ್ತಿತ್ತು. ಅದರಂತೆ ಹೊಸಪಾಳ್ಯದ ಜಯಮ್ಮ ಅರ್ಧ ಗಂಟೆಯ ಅವಧಿಯಲ್ಲಿ 3.5 ಕೆ.ಜಿ. ರಾಗಿಹಿಟ್ಟನ್ನು ಬೀಸಿ ಪ್ರಥಮ ಬಹುಮಾನ ಪಡೆದರೆ. ಮಾಕುವಳ್ಳಿ ಸುನಂದ 2.75 ಕಿ.ಗ್ರಾಂ. ದ್ವಿತೀಯ ಹಾಗೂ ಶೆಟ್ಟಿಕೆರೆಯ ರಾಜಮ್ಮ 2.650 ಕಿ. ಗ್ರಾಂ ರಾಗಿಯನ್ನು ಬೀಸಿ ಮೂರನೆ ಬಹುಮಾನ ಪಡೆದರು. ಗೆದ್ದವರೆಲ್ಲರೂ 40 ವರ್ಷ ಮೇಲ್ಪಟ್ಟವರೇ ಆಗಿದ್ದರು.

      ಮೂರು ಬಿಂದಿಗೆಯಲ್ಲಿ ನೀರು ಹೊರುವ ಸ್ಪರ್ಧೆಯಲ್ಲಿ ತುಂಬಿದ ಬಿಂದಿಗೆಗಳನ್ನು ಹೊತ್ತು 100 ಮೀಟರ್ ದೂರವನ್ನು ಬೇಗನೆ ಕ್ರಮಿಸಿದ ಶೋಭ ಶೆಟ್ಟಿಕೆರೆ ಪ್ರಥಮ, ಸರೋಜಮ್ಮ ಸೋಮಲಾಪುರ ದ್ವಿತೀಯ ಹಾಗೂ ಜಯಮ್ಮ ಶೆಟ್ಟಿಕೆರೆ ಮೂರನೆ ಬಹುಮಾನ ಪಡೆದರು.

 

(Visited 167 times, 1 visits today)
Previous Article‘ನನಗೆ ಸಿದ್ದರಾಮಯ್ಯ ಸಿಎಂ’ : ಪುಟ್ಟರಂಗಶೆಟ್ಟಿ
Next Article ಮತ ಚಲಾವಣೆ ನಮ್ಮೆಲ್ಲರ ಕರ್ತವ್ಯ – ಸಿಇಓ ಶುಭಾ ಕಲ್ಯಾಣ್
News Desk Benkiyabale

Related Posts

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm news

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm news

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm news
ತಾಜಾ ಸುದ್ಧಿಗಳು
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm
news

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm
news

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm
news

ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

September 01, 2026 5:03 pm
news

ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ

September 01, 2026 5:02 pm
news

ಪರ್ಯಾಯ ಸ್ಥಳ ಕಲ್ಪಿಸದೆ ತೆರವುಗೊಳಿಸುವುದು ಸಲ್ಲದು: ಸಿಐಟಿಯು

September 01, 2026 5:00 pm
Our Youtube Channel
Our Picks

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

September 01, 2026 5:08 pm

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm

ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

September 01, 2026 5:03 pm

ಧನ ಧಾನ್ಯ ಕೃಷಿ ಯೋಜನೆ ಪ್ರಗತಿಯಲ್ಲಿ ತುಮಕೂರು ಪ್ರಥಮ ಸ್ಥಾನ

September 01, 2026 5:02 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೆವೈಸಿ ಮಾಡಿಸದಿದ್ದರೆ ಕೈಸೇರದು ಪಿಎಂ ಕಿಸಾನ್ ಕಂತು

By News Desk BenkiyabaleSeptember 01, 2026 5:08 pm

ಹುಳಿಯಾರು: ನಕಲಿ ಫಲಾನುಭವಿಗಳನ್ನು ತಡೆಯಲು ಮತ್ತು ಪಾರದರ್ಶಕವಾಗಿ ಹಣ ಜಮೆ ಮಾಡಲು ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ…

ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲು ಡಿವೈಎಫ್ ೧೦ನೇ ಜಿಲ್ಲಾ ಸಮ್ಮೇಳನ ಆಗ್ರಹ

September 01, 2026 5:06 pm

ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ

September 01, 2026 5:04 pm

ಬರ ಎದುರಿಸಲು ಪೂರ್ವ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

September 01, 2026 5:03 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.