BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್
  • ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ
  • ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ
  • ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ
  • ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ
  • ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ
  • ದೇಶದ ಶಿಕ್ಷಣ ವ್ಯವಸ್ಥೆ ರಾಜಕಾರಣದಷ್ಟೇ ಕಲುಷಿತಗೊಂಡಿದೆ
  • ಕೊಲ್ಲಾಪುರದಮ್ಮ, ಕರುಗಲ್ಲಮ್ಮ ಜಾತ್ರಾ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರು ಕ್ಷೇತ್ರ ಜೆಡಿಎಸ್ ತೆಕ್ಕೆಗೆ : ಕಾಂಗ್ರೆಸ್ ಪ್ರತಿಭಟನೆ!!
Trending

ತುಮಕೂರು ಕ್ಷೇತ್ರ ಜೆಡಿಎಸ್ ತೆಕ್ಕೆಗೆ : ಕಾಂಗ್ರೆಸ್ ಪ್ರತಿಭಟನೆ!!

By News Desk BenkiyabaleUpdated:March 16, 2019 4:08 pm

ತುಮಕೂರು:

       ತುಮಕೂರು ರಾಜ್ಯದಲ್ಲಿ ಹಾಲಿ ಸಂಸದರು ಇರುವ ಲೋಕಸಭಾ ಕ್ಷೇತ್ರಗಳ ಪೈಕಿ ತುಮಕೂರು ಕ್ಷೇತ್ರವನ್ನು ಮಾತ್ರ ಜೆಡಿಎಸ್‍ಗೆ ಬಿಟ್ಟು ಕೊಟ್ಟಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

      ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್. ರಾಜೇಂದ್ರ ಅವರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟಿರುವ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

      ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್. ರಾಜೇಂದ್ರ ಮಾತನಾಡಿ, ದೇಶದಲ್ಲಿ 44 ಜನ ಕಾಂಗ್ರೆಸ್ ಸಂಸದರು ಗೆದ್ದಿದ್ದಾರೆ. ಇವರ ಪೈಕಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಲಾಗಿದೆ. ಇದರ ಅರ್ಥವೇನು. ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಕ್ಷೇತ್ರ ಬಿಟ್ಟು ಕೊಡಬಾರದು. ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲೇಬೇಕು ಎಂದು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.

      ಶತಾಯ ಗತಾಯ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೇ ಉಳಿಸಿಕೊಳ್ಳಲೇಬೇಕು ಎಂದು ಅವರು ಮನವಿ ಮಾಡಿದರು.  

      ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ತನ್ನದೇ ಆದ ಶಕ್ತಿ ಹೊಂದಿದೆ. ಹಾಲಿ ಸಂಸದರ ಅಭಿವೃದ್ಧಿ ಕಾರ್ಯಗಳು, ಜನಪರ ಕಾಳಜಿ ಪಕ್ಷಕ್ಕೆ ಬಲ ತಂದು ಕೊಟ್ಟಿದೆ. ಪಕ್ಷದತ್ತ ಜನರ ಒಲವು ಇರುವ ಸಂದರ್ಭದಲ್ಲೇ ಕ್ಷೇತ್ರವನ್ನು ಬಿಟ್ಟು ಕೊಡುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್‍ರವರ ಮೂಲಕ ಹೈಕಮಾಂಡ್ ಗಮನ ಸೆಳೆಯಲಾಗುವುದು ಎಂದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಮಾ. 19ಕ್ಕೆ ಮುಂದೂಡಲಾಗಿದೆ. ಅಂದಿನ ಸಭೆಯಲ್ಲಿ ಪಕ್ಷದ ಹೈಕಮಾಂಡ್ ಈ ಕುರಿತು ಗಮನ ಹರಿಸಬೇಕು. ತುಮಕೂರು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡರನ್ನೇ ಘೋಷಣೆ ಮಾಡಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

      ಮಾಜಿ ಶಾಸಕ ಎಸ್. ಶಫಿಅಹಮದ್ ಮಾತನಾಡಿ, ಸಂಸದ ಮುದ್ದಹನುಮೇಗೌಡರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರು ಹೊತ್ತಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕಾಂಗ್ರೆಸ್‍ನ ಎಲ್ಲ ನಾಯಕರನ್ನು ಭೇಟಿ ಮಾಡಿ ಕ್ಷೇತ್ರ ಉಳಿಸುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಡದೆ ಕಾಂಗ್ರೆಸ್‍ಗೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

      ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರ ಪರ ಜೈಕಾರ, ಜಯಘೋಷಗಳು ಮೊಳಗಿದವು. ಪ್ರತಿಭಟನೆಯಲ್ಲಿ ಮುಖಂಡರಾದ ಚೌದ್ರಿರಂಗಪ್ಪ, ಗೀತಾರುದ್ರೇಶ್, ಆಟೋರಾಜು, ತರುಣೇಶ್, ತು.ಬಿ. ಮಲ್ಲೇಶ್, ಪಾಲಿಕೆ ಸದಸ್ಯ ನಯಾಜ್ ಅಹಮದ್, ವೇಣುಗೋಪಾಲ್ ಸೇರಿದಂತೆ ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

(Visited 28 times, 1 visits today)
Previous Article‘ಎಕ್ಸೈಡ್ ಲೈಫ್’ ಇನ್ಷೂರೆನ್ಸ್ ಭದ್ರತೆಗೆ ಹೊಸ ಜೀವವಿಮೆ
Next Article  ‘ಶಿಶುನಾಳ ಷರೀಫರಿಗೆ ಪರ್ಯಾಯ ಇಲ್ಲ’ – ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ
News Desk Benkiyabale

Related Posts

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

July 31, 2026 5:01 pm news

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm news

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm news
ತಾಜಾ ಸುದ್ಧಿಗಳು
news

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

July 31, 2026 5:01 pm
news

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm
news

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm
news

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm
news

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm
news

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

July 31, 2026 4:50 pm
Our Youtube Channel
Our Picks

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

July 31, 2026 5:01 pm

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

By News Desk BenkiyabaleJuly 31, 2026 5:01 pm

ತುಮಕೂರು: ಐತಿಹಾಸಿಕ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆ ಸಂಶೋಧನೆಗಳು ಕಡಿಮೆ. ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ…

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.