BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಟ್ಟೆಚ್ಚರ
  • ಪರ್ಯಾಯ ವ್ಯವಸ್ಥೆ ಮಾಡದೆ ಫುಟ್‌ಪಾತ್ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಬೇಡಿ
  • ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ೬-೭ ಕೋಟಿ ರೂ. ಅವ್ಯವಹಾರ
  • ಫಲವತ್ತಾದ ಭೂಮಿಯ ಬದಲು, ಲಭ್ಯವಿರುವ ಗೋಮಾಳ ಜಮೀನು ಬಳಸಿ
  • ಗ್ರಾಮಗಳಿಗೆ ಜಿಲ್ಲಾಧಿಕಾರಿ ದಿಡೀರ್ ಭೇಟಿ: ನೀರು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ
  • ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ
  • ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ
  • ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕಳೆದು ಹೋದ ಅಮಾನಿಕೆರೆ ವೈಭವಕ್ಕೆ ಮತ್ತೆ ಹೊಸ ರೂಪ
Trending

ಕಳೆದು ಹೋದ ಅಮಾನಿಕೆರೆ ವೈಭವಕ್ಕೆ ಮತ್ತೆ ಹೊಸ ರೂಪ

By News Desk BenkiyabaleUpdated:July 13, 2019 6:58 pm

ತುಮಕೂರು :

      ನಗರದ ಕೇಂದ್ರಭಾಗದಲ್ಲಿರುವ ಅಮಾನಿಕೆರೆಗೆ ಸುಮಾರು 887 ವರ್ಷಗಳ ಇತಿಹಾಸವಿದೆ. ಮಾನವ ನಿರ್ಮಿತ ವೈಭವದಿಂದ ಕೂಡಿದ್ದ ಈ ಕೆರೆಯು ಕೆಲವು ವರ್ಷಗಳ ಹಿಂದೆ ಸಂಸ್ಕರಿಸದ ಒಳಚರಂಡಿ ನೀರು, ಕಸದ ರಾಶಿಯಿಂದ ತುಂಬಿಕೊಂಡು ಅಸಹನೀಯ ದುರ್ವಾಸನೆಯಿಂದ ಕೂಡಿದ ಅವ್ಯವಸ್ಥೆಯ ತಾಣವಾಗಿತ್ತು. ಮತ್ತೊಮ್ಮೆ ಈ ಕೆರೆಗೆ ಪುನಶ್ಚೇತನ ನೀಡಿ ಹೊಸ ರೂಪ ನೀಡಲು ಸ್ಮಾರ್ಟ್ ಸಿಟಿ ಸಂಸ್ಥೆಯು ಮುಂದಾಗಿದೆ.

  28ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ:

      ಭಾರತದಲ್ಲಿ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಖಿieಡಿ (ಟೈರ್)-1 ನಗರಗಳಾದ ದೆಹಲಿ, ಬೆಂಗಳೂರು, ಹೈದ್ರಬಾದ್, ಮತ್ತಿತರ ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಬರಿದಾಗಲಿದೆ ಎಂದು ಓIಖಿI ಆಯೋಗವು ಇತ್ತೀಚಿಗಷ್ಟೇ ವರದಿ ಮಾಡಿದೆ. ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ ನಗರದ ನಾಗರಿಕರಿಗೆ ಉಪಯೋಗವಾಗುವಂತೆ ಅಮಾನಿಕೆರೆಯನ್ನು ಪುನರುಜ್ಜೀವನಗೊಳಿಸಿ ಸೌಂದರ್ಯೀಕರಣಗೊಳಿಸಲು 28 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಯೊಂದನ್ನು ರೂಪಿಸಿ ಈಗಾಗಲೇ ಕಾರ್ಯಾರಂಭ ಮಾಡುವ ಮೂಲಕ ಆಧುನಿಕತೆಯ ಹೊಸ ರೂಪ ನೀಡಲು ಸ್ಮಾರ್ಟ್ ಸಿಟಿ ಸಜ್ಜಾಗಿದೆ.

 ಅಂತರ್ಜಲ ಮಟ್ಟ ಹೆಚ್ಚಳ:

      ಸುಮಾರು 506 ಎಕರೆ ಪ್ರದೇಶ, 7 ಕಿ.ಮೀ ವಿಸ್ತೀರ್ಣದ ಪರಿಧಿ, ಒಳಭಾಗದ ಒಟ್ಟು ವಿಸ್ತೀರ್ಣ 481 ಎಕರೆ ಹೊಂದಿ ದುರ್ವಾಸನೆ ಮತ್ತು ಕಳೆಗಳಿಂದ ಕೂಡಿದ್ದ ಈ ಸರೋವರ(ಅಮಾನಿಕೆರೆ)ವನ್ನು ಸ್ಮಾರ್ಟ್ ಸಿಟಿಯ ಸೌಂದರ್ಯೀಕರಣ ಯೋಜನೆಯಡಿ ರಿವೆಟ್ಮೆಂಟ್ಸ್ ಮರುಜೋಡಣೆ, ಸರೋವರದ ಒಡ್ಡು(ಃuಟಿಜ) ಪ್ರದೇಶಲ್ಲಿರುವ ಸಾರ್ವಜನಿಕ ಉದ್ಯಾನವನದ ಅಭಿವೃದ್ಧಿ ಮತ್ತು ನವೀಕರಣ, ಕೆರೆಯಿಂದ ಹೂಳು ತೆಗೆಯುವ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯಿಂದ ಕೆರೆಯಲ್ಲಿ ನೀರು ತುಂಬಿ ಜನರಿಗೆ ಕುಡಿಯುವ ನೀರಿನ ಬವಣೆಗೆ ಪರಿಹಾರ ದೊರೆಯುವುದಲ್ಲದೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.

ಸಲಹಾ ಕಂಪನಿಯ ನೇಮಕ:

      ಈ ಸರೋವರದ ಅಭಿವೃದ್ಧಿಗೆ ಅಂತರ್‍ರಾಷ್ಟ್ರೀಯ ಸಲಹಾ ಸಂಸ್ಥೆಯಾದ ಐಪಿಒ ಗ್ಲೋಬಲ್ ಕಂಪನಿಯನ್ನು ನೇಮಿಸಲಾಗಿದೆ. ಸಲಹಾ ಕಂಪನಿಯು ಸರೋವರದ ಅಭಿವೃದ್ಧಿಯತ್ತ ಗಮನ ಹರಿಸಲಿದ್ದು, ಸಂಸ್ಕರಿಸದ ಕೊಳೆತ ಪದಾರ್ಥಗಳನ್ನು ಸರೋವರಗಳಲ್ಲಿ ಪ್ರವೇಶಿಸುವುದನ್ನು ತಡೆಯಲು ಒಳಚರಂಡಿ ತಿರುವು ಕಾರ್ಯವನ್ನು ಮೊದಲ ಹಂತದಲ್ಲಿ ಪೂರ್ಣಗೊಳಿಸಲಿದೆ. ಒಳಚರಂಡಿಯನ್ನು ತಿರುಗಿಸುವುದರ ಜೊತೆಗೆ, ನೀರಿನ ಹಾನಿಕಾರಕ ಒಳಹರಿವನ್ನು ಮತ್ತು ನೀರಿನಲ್ಲಿ ಬೆಳೆಯುವ ಕಳೆ ಸಸ್ಯಗಳನ್ನು ತಡೆಗಟ್ಟುವುದಕ್ಕೆ ಆದ್ಯತೆ ನೀಡಲಿದೆ. ಅಲ್ಲದೆ ಈ ಯೋಜನೆಯಡಿ ಶೌಚಾಲಯದ ಬ್ಲಾಕ್‍ಗಳು, ಮಕ್ಕಳ ಉದ್ಯಾನ ಪ್ರದೇಶ, ವಾಕಿಂಗ್ ಟ್ರ್ಯಾಕ್, ಯೋಗ ಮತ್ತು ವ್ಯಾಯಾಮ ವಲಯಗಳನ್ನು ಸ್ಥಾಪಿಸಲಾಗುವುದು.

      ಅಮಾನಿಕೆರೆ ಸರೋವರವು ಮನರಂಜನೆ, ಪ್ರವಾಸೋದ್ಯಮ ಮತ್ತು ಕಾಟೇಜ್ ಅಥವಾ ವಸತಿ ಜೀವನಕ್ಕೆ ಪ್ರಮುಖ ಅವಕಾಶಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಯೋಜನೆಯಿಂದ ಐತಿಹಾಸಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಹೆಚ್ಚಿಸುವುದರೊಂದಿಗೆ ಶುದ್ಧೀಕರಿಸಿದ ನೀರಿನ ಮೂಲವನ್ನಾಗಿ ಅಭಿವೃದ್ಧಿಪಡಿಸಬಹುದಾಗಿದೆ.

      ಅಮಾನಿಕೆರೆಯು ಕಾವೇರಿ ಜಲಾನಯನ ಪ್ರದೇಶ ಮತ್ತು ಶಿಂಷಾ ನದಿ ಉಪ ಜಲಾನಯನ ಪ್ರದೇಶದಲ್ಲಿದ್ದು, ಸರೋವರದ ಜಲಾನಯನ ಪ್ರದೇಶ ಸುಮಾರು 38 ಚ.ಕಿ.ಮೀ ಹೊಂದಿದ್ದು, ನೀರು ಶೇಖರಣಾ ಸಾಮಥ್ರ್ಯ 4885 ಮಿಲಿಯನ್ ಲೀಟರ್ ಆಗಿರುತ್ತದೆ. ನೀರಿನ ಅಭಾವವಿರುವ ತುಮಕೂರಿನಲ್ಲಿ ಅಂತರ್ಜಲ ಮಟ್ಟವನ್ನು ಪುನರ್ಭರ್ತಿ ಮಾಡಲು ಅಮಾನಿಕೆರೆ ಅಭಿವೃದ್ಧಿ ಒಂದು ವರವಾಗಲಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ತಿಳಿಸಿದ್ದಾರೆ.

 

(Visited 34 times, 1 visits today)
Previous Articleಹಲ್ಲೆ ಮಾಡಿ ಪ್ರಾಣ ಬೆದರಿಕೆ ಆರೋಪಿಗಳಿಗೆ 4 ವರ್ಷ ಕಠಿಣ ಶಿಕ್ಷೆ
Next Article 1ಲಕ್ಷ ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ವಶ : 50 ಸಾವಿರ ರೂ.ದಂಡ!
News Desk Benkiyabale

Related Posts

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಟ್ಟೆಚ್ಚರ

July 22, 2026 5:16 pm news

ಪರ್ಯಾಯ ವ್ಯವಸ್ಥೆ ಮಾಡದೆ ಫುಟ್‌ಪಾತ್ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಬೇಡಿ

July 22, 2026 5:11 pm news

ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ೬-೭ ಕೋಟಿ ರೂ. ಅವ್ಯವಹಾರ

July 22, 2026 5:09 pm news
ತಾಜಾ ಸುದ್ಧಿಗಳು
news

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಟ್ಟೆಚ್ಚರ

July 22, 2026 5:16 pm
news

ಪರ್ಯಾಯ ವ್ಯವಸ್ಥೆ ಮಾಡದೆ ಫುಟ್‌ಪಾತ್ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಬೇಡಿ

July 22, 2026 5:11 pm
news

ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ೬-೭ ಕೋಟಿ ರೂ. ಅವ್ಯವಹಾರ

July 22, 2026 5:09 pm
news

ಫಲವತ್ತಾದ ಭೂಮಿಯ ಬದಲು, ಲಭ್ಯವಿರುವ ಗೋಮಾಳ ಜಮೀನು ಬಳಸಿ

July 22, 2026 5:07 pm
news

ಗ್ರಾಮಗಳಿಗೆ ಜಿಲ್ಲಾಧಿಕಾರಿ ದಿಡೀರ್ ಭೇಟಿ: ನೀರು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ

July 22, 2026 5:05 pm
news

ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 22, 2026 5:04 pm
Our Youtube Channel
Our Picks

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಟ್ಟೆಚ್ಚರ

July 22, 2026 5:16 pm

ಪರ್ಯಾಯ ವ್ಯವಸ್ಥೆ ಮಾಡದೆ ಫುಟ್‌ಪಾತ್ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಬೇಡಿ

July 22, 2026 5:11 pm

ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ೬-೭ ಕೋಟಿ ರೂ. ಅವ್ಯವಹಾರ

July 22, 2026 5:09 pm

ಫಲವತ್ತಾದ ಭೂಮಿಯ ಬದಲು, ಲಭ್ಯವಿರುವ ಗೋಮಾಳ ಜಮೀನು ಬಳಸಿ

July 22, 2026 5:07 pm

ಗ್ರಾಮಗಳಿಗೆ ಜಿಲ್ಲಾಧಿಕಾರಿ ದಿಡೀರ್ ಭೇಟಿ: ನೀರು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಲು ಸೂಚನೆ

July 22, 2026 5:05 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಟ್ಟೆಚ್ಚರ

By News Desk BenkiyabaleJuly 22, 2026 5:16 pm

ತುಮಕೂರು: ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ ತಾಲ್ಲೂಕಿನ ಅಂಕಸAದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನ…

ಪರ್ಯಾಯ ವ್ಯವಸ್ಥೆ ಮಾಡದೆ ಫುಟ್‌ಪಾತ್ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಬೇಡಿ

July 22, 2026 5:11 pm

ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ೬-೭ ಕೋಟಿ ರೂ. ಅವ್ಯವಹಾರ

July 22, 2026 5:09 pm

ಫಲವತ್ತಾದ ಭೂಮಿಯ ಬದಲು, ಲಭ್ಯವಿರುವ ಗೋಮಾಳ ಜಮೀನು ಬಳಸಿ

July 22, 2026 5:07 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.