BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ
  • ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ
  • ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ
  • ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ
  • ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ
  • ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ
  • ವಿಕಲಚೇತನರು ಸ್ವಾವಲಂಬಿಗಲು ಅವಕಾಶ ಕಲ್ಪಿಸಿ
  • ಕುಡಿಯುವ ನೀರಿನ ಯೋಜನೆ ಅಸಮರ್ಪಕ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕಪ್ಪುಪಟ್ಟಿ ಧರಿಸಿ ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ!
Trending

ಕಪ್ಪುಪಟ್ಟಿ ಧರಿಸಿ ಡಿಸಿಸಿ ಬ್ಯಾಂಕ್ ನೌಕರರ ಪ್ರತಿಭಟನೆ!

By News Desk BenkiyabaleUpdated:July 22, 2019 6:42 pm

ತುಮಕೂರು:

      ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸೂಪರ್ ಸೀಡ್ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಡಿಸಿಸಿ ಬ್ಯಾಂಕ್ ನೌಕರರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

      ನಗರದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸೇರಿದಂತೆ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರಗಳ ಶಾಖೆ ಮುಂಭಾಗ ಕಪ್ಪುಪಟ್ಟಿ ಧರಿಸಿ ಜಮಾಯಿಸಿದ ಬ್ಯಾಂಕ್ ನೌಕರರು ಬ್ಯಾಂಕ್‍ನ ಆಡಳಿತ ಮಂಡಳಿಯನ್ನು ರದ್ದುಮಾಡಿ ಸೂಪರ್ ಸೀಡ್ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, ಕೂಡಲೇ ರದ್ದುಪಡಿಸಿರುವ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಮತ್ತೆ ಅಧಿಕಾರ ನೀಡಬೇಕು. ಕೇವಲ ರಾಜಕೀಯ ದ್ವೇಷಕ್ಕೋಸ್ಕರ ಇಡೀ ಜಿಲ್ಲೆಯ ರೈತ ಸಮೂಹದ ಮೇಲೆ ಬರೆ ಎಳೆಯುವುದು ಸರಿಯಲ್ಲ ಎಂದರು.

      ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಬ್ಯಾಂಕ್ ಅಧ್ಯಕ್ಷರಾದ ಮೇಲೆ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸುವುದರ ಜತೆಗೆ ಇತರೆ ಸಹಕಾರ ಬ್ಯಾಂಕ್‍ಗಳಿಗೆ ಸರಿಸಮನಾಗಿ ಬೆಳೆಸಿದ್ದಾರೆ.

      ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಬ್ಯಾಂಕ್‍ನಿಂದ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅವರ ಆರ್ಥಿಕ ಮಟ್ಟ ಸುಧಾರಣೆಗೆ ಚೈತನ್ಯದ ಚಿಲುಮೆಯಾಗಿದ್ದಾರೆ. ಹೀಗಿದ್ದರೂ ಸಹ ಯಾರೋ ಒಬ್ಬರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದು ಖಂಡನಾರ್ಹ ಎಂದರು.

      ಡಿಸಿಸಿ ಬ್ಯಾಂಕ್‍ನಿಂದ ಈವರೆಗೆ 5317 ಮಂದಿ ರೈತರಿಗೆ 1549.63 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ. ಇದು ಸರ್ಕಾರದ ಸಾಲ ಮನ್ನಾ ಯೋಜನೆ ಹೊರತುಪಡಿಸಿ ಮಾಡಿರುವ ಸಾಲ ಮನ್ನಾ ಆಗಿದೆ ಎಂದರು.

      ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಬ್ಯಾಂಕ್ ಆರಂಭದ ದಿನಗಳಲ್ಲಿ ಇದ್ದ ಸ್ಥಿತಿಗತಿಗೂ ಇಂದು ಇವರು ಸ್ಥಿತಿಗತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇದಕ್ಕೆ ಪ್ರಮುಖ ಕಾರಣರು ಕೆ.ಎನ್. ರಾಜಣ್ಣ ಅವರು. ರೈತರಿಗೆ ಸಾಲ ಸೌಲಭ್ಯ ಒದಗಿಸಲು ಮಾತ್ರ ಸೀಮಿತವಾಗಿದ್ದ ಬ್ಯಾಂಕ್‍ನ್ನು ಇಂದು ಇತರೆ ಸಹಕಾರಿ ಬ್ಯಾಂಕ್‍ಗಳಿಗೆ ಸರಿ ಸಮನಾಗಿ ಬೆಳೆಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಎಂದರು.

      ಕೆ.ಎನ್. ರಾಜಣ್ಣನವರು ರೈತರಿಗೆ ಋಣಮುಕ್ತ ಸಾಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆದು ಆಡಳಿತ ಮಂಡಳಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಡಿಸಿಸಿ ಬ್ಯಾಂಕ್‍ನ ನೌಕರರು ಇಂದು ಕಪ್ಪುಪಟ್ಟಿ ಧರಿಸಿ ಸಂಜೆವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.

      ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‍ಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ನೌಕರರು ಮನವಿ ಸಲ್ಲಿಸಿ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಕೋರಿದರು.

      ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರಾದ ಪ್ರಕಾಶ್, ನರಸಿಂಹಮೂರ್ತಿ, ಲಕ್ಷ್ಮಯ್ಯ, ಲತಾ, ಸಿದ್ದಪ್ಪ, ನರೇಂದ್ರ, ಚಂದ್ರಕುಮಾರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

(Visited 13 times, 1 visits today)
Previous Articleಡಿಸಿಸಿ ಬ್ಯಾಂಕ್ ಸೂಪರ್‍ಸೀಡ್ ಆಡಳಿತಾಧಿಕಾರಿಯಾಗಿ ಡಿಸಿ ನೇಮಕ
Next Article ಸಣ್ಣ ಕೈಗಾರಿಕೋದ್ಯಮಿಗಳು ತಪ್ಪದೇ ಪೇಟೆಂಟ್ ಪಡೆಯಲು ಡೀಸಿ ಸಲಹೆ!
News Desk Benkiyabale

Related Posts

ಜ.10, 11: 26ನೇ ವರ್ಷದ ದುರ್ಗಪೂಜೆ

January 05, 2026 3:45 pm ತುಮಕೂರು

ಅಧ್ಯಯನದಿಂದ ಯಶಸ್ಸು ಸಾಧ್ಯ

January 05, 2026 3:41 pm ತುಮಕೂರು

ಆರ್‌ಡಿಪಿಆರ್‌ನಲ್ಲಿ ಸೇವೆಯ ಅವಕಾಶ ದೊಡ್ಡ ಸೌಭಾಗ್ಯ: ಜಿ.ಪ್ರಭು

January 05, 2026 3:38 pm ತುಮಕೂರು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm
ಇತರೆ ಸುದ್ಧಿಗಳು

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm
ಇತರೆ ಸುದ್ಧಿಗಳು

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm
ಇತರೆ ಸುದ್ಧಿಗಳು

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
ಇತರೆ ಸುದ್ಧಿಗಳು

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
ಇತರೆ ಸುದ್ಧಿಗಳು

ಖಾಲಿಯಿರುವ ಪೌರಕಾರ್ಮಿಕರ ನೇಮಕಾತಿ ವಿಳಂಬ

March 03, 2026 2:50 pm
Our Youtube Channel
Our Picks

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

March 03, 2026 2:58 pm

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm

ಬೆಳ್ಳಾವಿ ಸೋಮೇಶ್ವರಸ್ವಾಮಿಯ ವೈಭವದ ರಥೋತ್ಸವ

March 03, 2026 2:52 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಬೇಟರಾಯಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ

By News Desk BenkiyabaleMarch 03, 2026 2:58 pm

ತುರುವೇಕೆರೆ: ಪಟ್ಟಣದ ಇತಿಹಾಸ ಪ್ರಸಿದ್ದ ಬೇಟರಾಯ ಸ್ವಾಮಿ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿ0ದ ಸೋಮವಾರ…

ಶುಶ್ರೂಷಕಿಯರ ಸೇವೆ ಜಗತ್ತಿನ ಸರ್ವಶ್ರೇಷ್ಠ ಸೇವೆ

March 03, 2026 2:57 pm

ಪೌರಕಾರ್ಮಿಕರಿಗೆ ಶೂ, ಕೈಗವಸು, ಮಾಸ್ಕ್ ವಿತರಿಸಲು ಅಧಿಕಾರಿಗಳಿಗೆ ಪಿ. ರಘು ಸೂಚನೆ

March 03, 2026 2:55 pm

ಬಲಿಜ ಸಮುದಾಯ ಅತ್ಯಂತ ಸಂಘಟಿತ ಸಮುದಾಯ

March 03, 2026 2:54 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.