BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು
  • ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು
  • ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ
  • ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ
  • ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು
  • ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು: ಡಿಸಿ
  • ತುಮಕೂರು ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ
  • ಜಾನುವಾರುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಗೂ ಪಶು ಆಸ್ಪತ್ರೆಗಳ ಬಲವರ್ಧನೆಗೆ ಸಚಿವ ಪುಟ್ಟ ರಂಗಶೆಟ್ಟಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೊರಟಗೆರೆ : ಭೀಕರ ಬಸ್ ದುರಂತಕ್ಕೆ ಐವರ ಬಲಿ!!
Trending

ಕೊರಟಗೆರೆ : ಭೀಕರ ಬಸ್ ದುರಂತಕ್ಕೆ ಐವರ ಬಲಿ!!

By News Desk BenkiyabaleUpdated:October 30, 2019 6:52 pm

 

      ಆಟೋ ಚಾಲಕನ ಅಜಾಗರೂಕತೆ ಮತ್ತು ಚೆಲ್ಲಾಟದಿಂದ ಖಾಸಗಿ ಬಸ್ಸಿನ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಅಪಘಾತವಾಗಿ ಬಸ್ಸಿನಲ್ಲಿದ್ದ ಐದು ಜನ ಮೃತ ಪಟ್ಟಿದ್ದಾರೆ.

      ಇನ್ನುಳಿದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕೈಕಾಲು ಮುರಿದು ತೀವ್ರ ತರಹದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಬುಧವಾರ ನಡೆದಿದೆ.

      ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಜೆಟ್ಟಿಅಗ್ರಹಾರದ ಸರಕಾರಿ ಪ್ರೌಢಶಾಲೆಯ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಜಗನ್ನಾಥಪುರ ಕಡೆಯಿಂದ ಅಗ್ರಹಾರದ ಮುಖ್ಯರಸ್ತೆಗೆ ಸೇರಲು ಬಂದಂತಹ ಆಟೋ ವೇಗವಾಗಿ ಬರುತ್ತಿದ್ದ ವಿಜಯಲಕ್ಷ್ಮೀ ಎಂಬ ಖಾಸಗಿ ಬಸ್ಸನ್ನು ನೋಡಿಯೂ ಮುನ್ನುಗ್ಗಿದ್ದಾನೆ. ಅಪಘಾತ ತಡೆಯಲು ಯತ್ನಿಸಿದ ಬಸ್ಸು ನಿಯಂತ್ರಣಕ್ಕೆ ಬರದೇ ಪಲ್ಟಿ ಹೊಡೆದು ಅಪಘಾತವಾಗಿದೆ.

       ಅಪಘಾತದಲ್ಲಿ ಕೊರಟಗೆರೆ ತಾಲೂಕಿನ ಗೇರಹಳ್ಳಿ ಗ್ರಾಮದ ಇಮ್ರಾನ್(18), ಹೊಳವನಹಳ್ಳಿಯ ಅಕ್ರಂಪಾಷ(28), ಕೊರಟಗೆರೆ ಪಟ್ಟಣದ ಮೊಹಮ್ಮದ್ ಸಾಜದ್(19), ಪುಲಮಾಚೀಹಳ್ಳಿಯ ಶಿವಕುಮಾರ್(27) ಮತ್ತು ಮಧುಗಿರಿ ತಾಲೂಕು ಕೋಡಿಗೇನಹಳ್ಳಿಯ ಶ್ರೀನಿವಾಸ್(40) ಎಂಬ ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

      ಅಪಘಾತವಾಗಿ ಪಲ್ಟಿ ಹೊಡೆದ ಬಸ್ಸಿನಿಂದ ಹೊರಗೆ ಬರಲು ಯತ್ನಿಸುತ್ತಿದ್ದ 30ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಕೊರಟಗೆರೆ, ತುಮಕೂರು ಮತ್ತು ಬೆಂಗಳೂರು ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದೆ. ಕೈಕಾಲು ಮುರಿದಿರುವ ಗಾಯಾಳು ಮತ್ತು ಮೃತಪಟ್ಟ ಪ್ರಯಾಣಿಕರ ಕುಟುಂಬದ ಸದಸ್ಯರು ತಮ್ಮ ಗೋಳಿನ ಜೊತೆ ಅಪಘಾತ ತಡೆಯಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕಾಲಿಗೆ ಬಿದ್ದಿರುವ ಘಟನೆ ನಡೆದಿದೆ.

ಸ್ಥಳೀಯರ ಆಕ್ರೋಶ:

      ಪಾವಗಡ-ತುಮಕೂರು ಕೇಶಿಪ್ ರಾಜ್ಯ ಹೆದ್ದಾರಿಯೇ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಖಾಸಗಿ ಬಸ್ಸು ಮತ್ತು ಆಟೋಗಳ ಹಾವಳಿ ಹೆಚ್ಚಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ಶಾಲಾ ವಿದ್ಯಾರ್ಥಿಗಳಿಗೆ ಭದ್ರತೆ ನೀಡುವುದೇ ಕಷ್ಟವಾಗಿದೆ. ವಾಹನದ ಪರವಾನಗಿ ಮತ್ತು ದಾಖಲೆ ಇಲ್ಲದೇ ಸಾಕಷ್ಟು ವಾಹನ ಚಲಿಸುತ್ತಿವೆ. ಸಾರಿಗೆ ಇಲಾಖೆ ಕಾಣೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ಅಪಘಾತವಾದ ಸ್ಥಳಕ್ಕೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಧುಗಿರಿ ಶಾಸಕ ವೀರಭದ್ರಯ್ಯ, ತುಮಕೂರು ಜಿಲ್ಲಾಧಿಕಾರಿ ರಾಕೇಶಕುಮಾರ, ಮಧುಗಿರಿ ಎಸಿ ಡಾ.ನಂದಿನಿದೇವಿ, ಬೆಂಗಳೂರು ಐಜಿ ಶರತಚಂದ್ರ, ಪೊಲೀಸ್ ಅಧಿಕ್ಷಕ ಡಾ.ಕೋನವಂಶಿಕೃಷ್ಣ, ಡಿವೈಎಸ್ಪಿ ಧರಣೀಶ್, ಸಿಪಿಐ ನದಾಪ್, ಪಿಎಸೈ ಮಂಜುನಾಥ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 49 times, 1 visits today)
Previous Articleಬೈಕ್ ತೊಳೆಯಲು ಹೋಗಿದ್ದ ಬಾಲಕರು ನೀರುಪಾಲು!!
Next Article ಬಸ್ ಅಪಘಾತ : ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಮಾಧುಸ್ವಾಮಿ
News Desk Benkiyabale

Related Posts

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm news

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm news

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm news
ತಾಜಾ ಸುದ್ಧಿಗಳು
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm
news

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm
news

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm
news

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm
news

ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು

November 14, 2026 5:34 pm
news

ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆಯುವಂತಾಗಬೇಕು: ಡಿಸಿ

November 13, 2026 5:09 pm
Our Youtube Channel
Our Picks

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

November 14, 2026 5:39 pm

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm

ಭಾಷೆಯನ್ನು ಮಾತನಾಡುವುದಲ್ಲ ಅದನ್ನು ಆಸ್ವಾದಿಸಬೇಕು

November 14, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ZP CEO ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನ್ಯಾಯ ಪಡೆಯಲು ಹಣಕಾಸಿನ ಅಡಚಣೆ ಎಂದೂ ಇರಬಾರದು

By News Desk BenkiyabaleNovember 14, 2026 5:39 pm

ತುಮಕೂರು: ನ್ಯಾಯವು ಕೇವಲ ಆರ್ಥಿಕವಾಗಿ ಸಬಲರಾದವರಿಗೆ ಮಾತ್ರ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಹಾಗೂ ನ್ಯಾಯ ಪಡೆಯಲು ಹಣಕಾಸಿನ…

ದೇಶದ ಅಭ್ಯುದಯಕ್ಕೆ ಭದ್ರ ಬುನಾಧಿ ಹಾಕಿದ ಮಹಾನಾಯಕ ನೆಹರು

November 14, 2026 5:38 pm

ಕನ್ನಡದ ಬೆಳವಣಿಗೆಗೆ ಜಾತಿ, ಧರ್ಮಗಳ ಗಡಿಗಳಿಲ್ಲ

November 14, 2026 5:36 pm

ತುಮಕೂರು ಜಿಲ್ಲೆಯ ರೇಷ್ಮೆ ಕೃಷಿ ಪ್ರಗತಿಗೆ ಸಚಿವರ ಮೆಚ್ಚುಗೆ

November 14, 2026 5:35 pm
News by Date
November 2026
M T W T F S S
 1
2345678
9101112131415
16171819202122
23242526272829
30  
« Oct    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.