BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್
  • ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ
  • ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ
  • ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ
  • ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ
  • ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ
  • ದೇಶದ ಶಿಕ್ಷಣ ವ್ಯವಸ್ಥೆ ರಾಜಕಾರಣದಷ್ಟೇ ಕಲುಷಿತಗೊಂಡಿದೆ
  • ಕೊಲ್ಲಾಪುರದಮ್ಮ, ಕರುಗಲ್ಲಮ್ಮ ಜಾತ್ರಾ ಮಹೋತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಯಶಸ್ವಿನಿ ಯೋಜನೆ ಪುನಾರಂಭ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
Trending

ಯಶಸ್ವಿನಿ ಯೋಜನೆ ಪುನಾರಂಭ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

By News Desk BenkiyabaleUpdated:November 14, 2019 6:39 pm

 

 ತುಮಕೂರು:

      ಯಶಸ್ವಿನಿ ಯೋಜನೆ ಇನ್ನೊಂದು ತಿಂಗಳೊಳಗಾಗಿ ಪುನಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

      ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 66ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಶಸ್ವಿನಿ ಯೋಜನೆ ಜಾರಿಗೆ ಬಂದರೆ ಸುಮಾರು 25 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಅವರು ಪ್ರಸ್ತಾವನೆ ನೀಡಿದ್ದಾರೆ. ಈಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಇನ್ನೊಂದು ತಿಂಗಳಲ್ಲಿ ಅನುಷ್ಟಾನಕ್ಕೆ ತರಲಾಗುವುದು ಎಂದರು.

      ಹಾಲು ಒಕ್ಕೂಟದಡಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮೆಗಾಡೈರಿ ನಿರ್ಮಿಸಲು ಚಿಂತನೆ ನಡೆಸಲಾಗುವುದು. ಅಲ್ಲದೇ ತಿಪಟೂರಿನಲ್ಲಿ 100 ಎಕರೆ ಭೂಮಿಯಲ್ಲಿ ತೋಟಗಾರಿಕಾ ಕಾಲೇಜನ್ನು ಆರಂಭ ಮಾಡತ್ತೇನೆಂದು ಅವರು ಭರವಸೆ ನೀಡಿದರಲ್ಲದೇ ಜಿಲ್ಲೆಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವುದು ನನ್ನ ಮೊದಲ ಆದ್ಯತೆ ಎಂದರು.

      ಜಿಲ್ಲೆಯ 3 ತಾಲೂಕುಗಳು ಬರದ ಪಟ್ಟಿಯಿಂದ ಬಿಟ್ಟುಹೋಗಿದ್ದು, ಅದೇ ರೀತಿ ರಾಜ್ಯದಲ್ಲಿ ಬರದ ಪರಿಸ್ಥಿತಿಗೆ ಒಳಗಾದ ತಾಲೂಕುಗಳನ್ನು ಸೇರಿಸಿ ಬರಗಾಲ ಪೀಡಿತ ತಾಲೂಕುಗಳು ಎಂದು ಶೀಘ್ರದಲ್ಲಿ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

      ಕರ್ನಾಟಕದಲ್ಲಿ ಸಹಕಾರಿ ಕಾಯ್ದೆ ಜಾರಿಯಾದ ನಂತರ ಹಲವಾರು ತಿದ್ದುಪಡಿಗಳನ್ನು ಮಾಡಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಅನುಕೂಲ ಮಾಡಿಕೊಡಲಾಗಿದೆ. ರಾಜ್ಯದಲ್ಲಿ ಸುಮಾರು 44 ಸಾವಿರ ಸಹಕಾರಿ ಸಂಘಗಳಿವೆ. ಸರ್ಕಾರದಿಂದ 6.9 ಲಕ್ಷ ರೈತರಿಗೆ 249 ಕೋಟಿ ರೂ.ಗಳನ್ನು ಸಹಕಾರಿ ಬ್ಯಾಂಕ್‍ಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

      ಸಾಲಮನ್ನಾ ಯೋಜನೆಯಡಿ ಸಹಕಾರಿ ಸಂಘದಲ್ಲಿ ಬೆಳೆ ಸಾಲಪಡೆದ ರೈತರಿಗೆ ಗರಿಷ್ಠ 1 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತಿದೆ. 2.85 ಲಕ್ಷ ರೈತರಿಗೆ 2000 ಕೋಟಿ ರೂ. ಬಿಡುಗಡೆ ಮಾಡಿದೆ. ನಗರದ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿದೆ ಎಂದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಸಂಘಟನೆ ಎಂಬುದು ಬಹಳ ದೊಡ್ಡದಾದ ಸಹಕಾರಿ ಸಂಘ. ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮೊದಲ ಬಾರಿಗೆ ಪ್ರತಿ ಲೀಟರ್‍ಗೆ 2 ರೂ.ಗಳ ಪೋತ್ಸಾಹಧನ ನೀಡಿದರು. ಅದು ಇದೀಗ 5 ರೂ. ಆಗಿದೆ ಎಂದು ಅವರು ತಿಳಿಸಿದರು.

      ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಮಾತನಾಡಿ ಮಣಪುರಂ, ಮುತ್ತೂಟ್ ಫೈನಾನ್ಸ್ ಕಂಪನಿಗಳು ರೈತರ ಆಭರಣಗಳನ್ನು ಅಡವಿಟ್ಟುಕೊಂಡು ಅಧಿಕ ಬಡ್ಡಿದರವನ್ನು ವಿಧಿಸುತ್ತಿವೆ. ಈ ಕಂಪನಿಗಳಿಗೆ ಕಡಿವಾಣ ಹಾಕಿ ರೈತರನ್ನು ರಕ್ಷಿಸಬೇಕು ಎಂದು ಅವರು ತಿಳಿಸಿದರು.

      ಕಾರ್ಯಕ್ರಮದಲ್ಲಿ ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಬಸವರಾಜು, ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ಜಯರಾಮ್, ಬಿ.ಸಿ ನಾಗೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಂಸದ ಸಿ.ಪಿ ಮೂಡಲಗಿರಿಯಪ್ಪ, ಮಾಜಿ ಶಾಸಕ ಸುರೇಶ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ತುಮಕೂರು ಮರ್ಚಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಎಸ್ ಜಯಕುಮಾರ್, ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ ಮಹಾಲಿಂಗಯ್ಯ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಆರ್. ರಾಜೇಂದ್ರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಂಜನೀಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಸಿಇಓ ಶುಭಾ ಕಲ್ಯಾಣ್, ಪಾಲಿಕೆ ಮೇಯರ್ ಲಲಿತ ರವೀಶ್, ಜಂಟಿ ನಿರ್ದೇಶಕ ಎಂ.ಡಿ ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

(Visited 41 times, 1 visits today)
Previous Articleಮಕ್ಕಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿ – ಸಚಿವ.ಜೆ.ಸಿ.ಮಾಧುಸ್ವಾಮಿ
Next Article ಮಧುಗಿರಿ : ಹೆಣ್ಣು ಚಿರತೆ ಸೆರೆ!!
News Desk Benkiyabale

Related Posts

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

July 31, 2026 5:01 pm news

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm news

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm news
ತಾಜಾ ಸುದ್ಧಿಗಳು
news

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

July 31, 2026 5:01 pm
news

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm
news

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm
news

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm
news

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm
news

ಶನಿವಾರ, ಭಾನುವಾರವೂ ಎಸ್‌ಐಆರ್ ಪ್ರಕ್ರಿಯೆ

July 31, 2026 4:50 pm
Our Youtube Channel
Our Picks

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

July 31, 2026 5:01 pm

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm

ನಾಲ್ಕು ದಿನಕ್ಕೊಮ್ಮೆ ನೀರು: ಶಾಲೆಯ ಬಿಸಿಯೂಟಕ್ಕೂ ತಟ್ಟಿದ ಸಂಕಷ್ಟ

July 31, 2026 4:52 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ ಪಡೆಯಲು ಇಂದಿನ ಜನರು ಉತ್ಸುಕರಾಗಿದ್ದಾರೆ: ಹೆಚ್.ಕೆ.ಪಾಟೀಲ್

By News Desk BenkiyabaleJuly 31, 2026 5:01 pm

ತುಮಕೂರು: ಐತಿಹಾಸಿಕ ಮತ್ತು ಚಾರಿತ್ರಿಕ ವಿಷಯಗಳ ಬಗ್ಗೆ ಸಂಶೋಧನೆಗಳು ಕಡಿಮೆ. ಸಾವಿರಾರು ವರ್ಷಗಳ ಹಿಂದೆ ನಡೆದಿರುವ ಕೌತುಕಗಳ ಬಗ್ಗೆ ಮಾಹಿತಿ…

ಮಕ್ಕಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೌಶಲ್ಯಯುಕ್ತರನ್ನಾಗಿ ಪರಿರ್ವತಿಸಿ

July 31, 2026 4:58 pm

ಎಂಪ್ರೆಸ್ ಕಾಲೇಜಿನಲ್ಲಿ ಕ್ರೀಡೆ ಹಾಗೂ ಇತರ ಯೋಜನೆಗಳ ಉದ್ಘಾಟನೆ

July 31, 2026 4:55 pm

ಮಾನವ ಕಳ್ಳ ಸಾಗಾಣಿಕೆ, ಹಕ್ಕುಗಳ ಉಲ್ಲಂಘನೆ: ನ್ಯಾ.ಹವಲೆ

July 31, 2026 4:53 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.