BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ
  • ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ
  • ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ
  • ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನ ಆಚರಣೆ
  • ತುಮಕೂರು ದಸರಾ-ಸನ್ಮಾನಕ್ಕೆ ಸ್ಥಳೀಯ ಉತ್ಪನ್ನಗಳ ಖರೀದಿಗೆ ಆದ್ಯತೆ: ಸೋನಿಯಾ ವರ್ಣೇಕರ್
  • ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ
  • ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ
  • ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತದೆ – ಸಚಿವ ಸುರೇಶ್ ಕುಮಾರ್
Trending

ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತದೆ – ಸಚಿವ ಸುರೇಶ್ ಕುಮಾರ್

By News Desk BenkiyabaleUpdated:April 22, 2020 6:18 pm

 ತುಮಕೂರು:

      ಮೇ 3ರ ನಂತರ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆ ಬರೆಯಲು ನಿರಂತರ ಅಧ್ಯಯನಶೀಲರಾಗಿರಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

      ಅವರು ಇಂದು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ದರ್ಶನ ಮಾಡಿ ವಸತಿ ಶಾಲೆಯಲ್ಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

      ಶ್ರೀ ಮಠದಲ್ಲಿ 1320 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇರುವುದನ್ನು ಖಚಿತಪಡಿಸಿಕೊಂಡು ಈ ವಿದ್ಯಾರ್ಥಿಗಳಲ್ಲಿರುವ ಸಂಶಯ ಮತ್ತು ಸಂದೇಹಗಳಿಗೆ ಪರಿಹಾರ ಸೂಚಿಸುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಉತ್ಸಾಹದಿಂದ ಓದಿನಲ್ಲಿ ಪ್ರವೃತ್ತರಾಗುವಂತೆ ಮನವೊಲಿಸುವ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದೇನೆಂದು ಅವರು ತಿಳಿಸಿದರು.

      ವಿಶ್ವಕ್ಕೆ ಅಂಟಿಕೊಂಡಿರುವ ಪ್ರಾಣಾಂತಿಕ ಕೋವಿಡ್-19 ಸೋಂಕಿನಿಂದ ಮುಕ್ತರಾಗಲು ದೇಶ ಮತ್ತು ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಮಾರ್ಚ್ 27 ರಿಂದ ಪ್ರಾರಂಭವಾಗಿ ಏಪ್ರಿಲ್ 9ಕ್ಕೆ ಮುಗಿಯಬೇಕಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಾಗೂ ಪಿ.ಯು.ಸಿ.ಯ ಒಂದು ವಿಷಯದ ಪರೀಕ್ಷೆಯು ಈ ವೇಳೆಗಾಗಲೆ ಮುಗಿದು ವಿದ್ಯಾರ್ಥಿಗಳು ರಜೆಯಲ್ಲಿ ಇರುತ್ತಿದ್ದರು. ಆದರೆ ದೇಶದಲ್ಲಿ ಕೊರೋನಾ ವೈರಸ್ ಹರಡದಂತೆ ಲಾಕ್‍ಡೌನ್ ಜಾರಿಯಿಂದ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷೆ ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ತಿಳಿಸಿದರು.

      ರಾಜ್ಯದಲ್ಲಿ 8.50ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವವರಿದ್ದು, ಅವರೊಂದಿಗೆ ಪೋನ್‍ಇನ್ ಕಾರ್ಯಕ್ರಮದ ಮೂಲಕ ನೇರವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಪರೀಕ್ಷೆ ನಡೆಯುವವರೆಗೆ ಸಂಯಮ ಕಾಪಾಡಿಕೊಳ್ಳಲು ಧೈರ್ಯ ಹೇಳಲಾಗುತ್ತಿದೆ. ತಡವಾದರೂ ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಿ ಹಾಗೂ ಪರೀಕ್ಷೆಯ ಮುನ್ನ ಪುನರ್‍ಮನನ ತರಗತಿಗಳನ್ನು ನಡೆಸಿ ಪರೀಕ್ಷೆ ನಡೆಸುವ ದಿನವನ್ನು ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಪ್ರಕಟಿಸಲಿದೆ ಎಂದು ಅವರು ತಿಳಿಸಿದರು.

      ದೂರದರ್ಶನ ಚಂದನವಾಹಿನಿಯಲ್ಲಿ 2-3 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಕುರಿತು ವಿಷಯಾಧಾರಿತ ಸರಣಿ ಮಾಲೆಯಲ್ಲಿ ಪ್ರಸಾರಪಡಿಸಲಾಗುವುದು. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಅವುಗಳಿಗೆ ಉತ್ತರಿಸುವ ಅಭ್ಯಾಸ ಮಾಡುತ್ತಿರಬೇಕೆಂದು ಅವರು ಸಲಹೆ ಮಾಡಿದರು.

      ಸರ್ಕಾರ ನಿರ್ಧಾರ ಪ್ರಕಟಿಸುವ ಮೊದಲು ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳುವುದು ಅಥವಾ ಶುಲ್ಕ ಪಡೆಯುವುದು ಸಮಂಜಸವಲ್ಲವೆಂದು ಅವರು ತಿಳಿಸಿದರು. ಪ್ರಸಕ್ತ ಸಮಯದಲ್ಲಿ ಸಮಾಜದ ಎಲ್ಲಾ ತರಹದ ಜನರ ಆರ್ಥಿಕ ಸ್ಥಿತಿ ಜರ್ಜರಿತವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶುಲ್ಕ ವಿಧಿಸುವ ಬಗ್ಗೆ ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಂಡು ಪ್ರಕಟಿಸಲಿದೆ ಎಂದು ಸಚಿವರು ಹೇಳಿದರು.

      ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ನಮ್ಮ ವೇಳೆಯಲ್ಲಿಯೇ ಕೊರೋನಾ ಬಂದಿದೆ ಎಂದು ಬೇಜಾರು ಮಾಡಿಕೊಳ್ಳದೆ ಸಂಯಮದಿಂದ ಇದ್ದು, ಜೀವನ ಪರೀಕ್ಷೆಯಾಗಿರುವ ಕೊರೋನಾ ಮಾರಿಯನ್ನು ಸಮರೋಪಾದಿಯಲ್ಲಿ ಗೆದ್ದು, ನಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅಣಿಯಾಗಬೇಕೆಂದು ಅವರು ಸಲಹೆ ಮಾಡಿದರು.

      ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯದ ಬಗ್ಗೆಯೂ ಸಹ ಗಮನಹರಿಸಬೇಕು. ಪುಣ್ಯಕ್ಷೇತ್ರವಾದ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೀವೇ ಧನ್ಯರು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಅವಕಾಶ ನೀಡಿ ಅವರಲ್ಲಿರುವ ಸಂದೇಹ, ಸಂಶಯಗಳಿಗೆ ಸಚಿವರು ಉತ್ತರಿಸಿದರು.

      ಶಿಕ್ಷಣ ಇಲಾಖೆ ಆಯುಕ್ತರಾದ ಡಾ: ಜಗದೀಶ್ ಅವರು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪ್ರಶ್ನೆಪತ್ರಿಕೆಗಳಿಗೆ ಸೀಮಿತವಾಗಿ ಅಧ್ಯಯನ ಮಾಡದೇ ಇಡೀ ಪಠ್ಯಪುಸ್ತಕವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಅಭ್ಯಾಸ ನಡೆಸಿ ಪರೀಕ್ಷೆ ಯಾವಾಗಲಾದರೂ ನಡೆಯಲಿ ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎಂಬ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು.

      ಸಮಾರಂಭದ ಸಾನಿಧ್ಯವಹಿಸಿದ್ದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಉಪನಿರ್ದೇಶಕರುಗಳಾದ ಕಾಮಾಕ್ಷಮ್ಮ ಹಾಗೂ ರೇವಣಸಿದ್ಧಪ್ಪ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 11 times, 1 visits today)
Previous Articleಹೊರರಾಜ್ಯಕ್ಕೆ ಹುಣಸೆ ಮತ್ತು ಕೊಬ್ಬರಿ : ಸಚಿವ ಮಾಧುಸ್ವಾಮಿ
Next Article ಗುಬ್ಬಿ : ಕೆ.ಎಂ.ಎಫ್. ಪಶು ಆಹಾರ ಘಟಕದಲ್ಲಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು!!
News Desk Benkiyabale

Related Posts

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm news

ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ

September 18, 2026 5:37 pm news

ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ

September 18, 2026 5:36 pm news
ತಾಜಾ ಸುದ್ಧಿಗಳು
news

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm
news

ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ

September 18, 2026 5:37 pm
news

ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ

September 18, 2026 5:36 pm
news

ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನ ಆಚರಣೆ

September 18, 2026 5:34 pm
news

ತುಮಕೂರು ದಸರಾ-ಸನ್ಮಾನಕ್ಕೆ ಸ್ಥಳೀಯ ಉತ್ಪನ್ನಗಳ ಖರೀದಿಗೆ ಆದ್ಯತೆ: ಸೋನಿಯಾ ವರ್ಣೇಕರ್

September 18, 2026 5:33 pm
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm
Our Youtube Channel
Our Picks

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm

ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ

September 18, 2026 5:37 pm

ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ

September 18, 2026 5:36 pm

ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನ ಆಚರಣೆ

September 18, 2026 5:34 pm

ತುಮಕೂರು ದಸರಾ-ಸನ್ಮಾನಕ್ಕೆ ಸ್ಥಳೀಯ ಉತ್ಪನ್ನಗಳ ಖರೀದಿಗೆ ಆದ್ಯತೆ: ಸೋನಿಯಾ ವರ್ಣೇಕರ್

September 18, 2026 5:33 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

By News Desk BenkiyabaleSeptember 18, 2026 5:39 pm

ತುಮಕೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‌ಆರ್‌ಪಿ, ಕೆಎಸ್‌ಐಎಫ್‌ಎಸ್ ಹಾಗೂ ಭಾರತೀಯ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ…

ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ

September 18, 2026 5:37 pm

ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ

September 18, 2026 5:36 pm

ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನ ಆಚರಣೆ

September 18, 2026 5:34 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.