ತುಮಕೂರು: ರೈತರು ತಮ್ಮ ರಾಸುಗಳಿಗೆ ತಪ್ಪದೇ ಕಾಲು ಬಾಯಿ ರೋಗ ಲಸಿಕೆಯನ್ನು ಹಾಕಿಸಬೇಕೆಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಎ.ನಂಜೇಗೌಡ ಮನವಿ ಮಾಡಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ತುಮಕೂರು ಹಾಲು ಒಕ್ಕೂಟದ ಸಹಯೋಗದಲ್ಲಿ ತುಮಕೂರು ತಾಲ್ಲೂಕು ಕೆಸರಮಡು ಗ್ರಾಮದಲ್ಲಿ ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ೭ನೇ ಸುತ್ತಿನ ರಾಷ್ಟಿçÃಯ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ(ಎನ್.ಎ.ಡಿ.ಸಿ.ಪಿ.)ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ: ವೈ.ಜಿ.ಕಾಂತರಾಜು ಮಾತನಾಡಿ ಕಾಲುಬಾಯಿ ರೋಗದ ನಿರ್ಮೂಲನೆಯ ಮಹತ್ವವನ್ನು ತಿಳಿಸಿದರು. ರೋಗ ನಿರ್ಮೂಲನೆ ಮಾಡಲು ಲಸಿಕೆಯೊಂದೇ ಮಾರ್ಗವಾಗಿದ್ದು, ಎಲ್ಲಾ ರೈತರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ರೋಗ ನಿರ್ಮೂಲನೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ: ಜಿ.ಮಲ್ಲೇಶಪ್ಪ, ಡಾ: ಎಂ. ಸುರೇಶ್, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಪ್ಪ, ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ದಿಲೀಪ್, ಕೆಸರುಮಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಹೆಚ್.ಗಂಗಾಧರ್,…
Author: News Desk Benkiyabale
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದ ಜನರ ಸಮಸ್ಯೆಗಳ ನಿವಾರಣೆಗೆ ‘ಮನೆಬಾಗಿಲಿಗೆ ಮನೆಮಗ’ ಕಾರ್ಯಕ್ರಮ ಒಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು. ಅವರು ಪಟ್ಟಣದ ತೀನಂಶ್ರೀ ಭವನದಲ್ಲಿ ನೂತನ ಕಾರ್ಯಕ್ರಮದ ಮನೆ ಬಾಗಿಲಿಗೆ ಮನೆಮಗ ಶೀರ್ಷಿಕಾ ಫಲಕವನ್ನು ಬಿಡುಗಡೆ ಗೊಳಿಸಿ ಮಾತನಾಡಿ ಈಗಾಗಲೇ ಎರಡುವರ್ಷದಿಂದ ಪ್ರತಿವಾರ ತಾಲ್ಲೂಕು ಕೇಂದ್ರದಲ್ಲಿ ಜನಸ್ಪಂದನ ಸಭೆ ಯಶಸ್ವಿಯಾಗಿ ನಡೆದಿದೆ. ಈವರೆಗೆ ೧೦ ಸಾವಿರ ರೈತರಿಗೆ ಬಗರ್‌ಹುಕುಂ ನಲ್ಲಿ ಹಕ್ಕುಪತ್ರ ನೀಡಲಾಗಿದೆ. ಇದರ ಮುಂದುವರೆದ ಭಾಗದಂತೆ ವರ್ಷದೊಳಗೆ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನೊಳಗೊಂಡ ಗ್ರಾಮ ಸಭೆ ನಡಸಲಾಗುವುದು. ಇದರಿಂದ ಅಲ್ಲಿನ ಜನರ ಸಮಸ್ಯೆಯನ್ನು ಅಲ್ಲಿಯೇ ಭಗೆಹರಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ, ಇದರಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆಯ ವಾರ್ಡ್ಗಳಲ್ಲೂ ಸಹ ಸಭೆ ನಡೆಸಲಾಗುವುದೆಂದರು. ನಾನು ಜನರೊಟ್ಟಿಗಿದ್ದು ಕೆಲಸ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿ ನಡೆಸುವ ಸದುದ್ದೇಶಹೊಂದಿದ್ದೇನೆ ಎಂದರು. ಸದರಿ ಯೋಜನೆ ಮೇ.೨ರಿಂದ ಆರಂಭಗೊಳ್ಳಲಿದೆ…
ಕೊರಟಗೆರೆ: ಪಟ್ಟಣದ ೧೫ ನೇ ವಾರ್ಡಿನ ವಾಲ್ಮೀಕಿ ನಗರಕ್ಕೆ ಎರಡು ಕರಡಿಗಳು ಆಹಾರ ಹರಸಿ ಬಂದಿದ್ದು, ಕರಡಿಗಳನ್ನು ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ನಗರದ ರಸ್ತೆಯನ್ನು ಕರಡಿ ದಾಟುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾ ಣದಲ್ಲಿ ವೈರಲ್ ಆಗುತ್ತಿದೆ. ಕರಡಿಗಳ ದೃಶ್ಯ ನೋಡಿದ ಕೊರಟಗೆರೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ. ಕರಡಿ ದಾಳಿಯ ಭೀತಿಯಿಂದ ಮನೆಯಿಂದ ಹೊರಗಡೆ ಬರಲು ಜನ ಭಯ ಪಡುವಂತಾಗಿದೆ. ಕರಡಿಗಳು ಪಟ್ಟಣಕ್ಕೆ ಬರದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕರಡಿ ಗಳನ್ನು ಹಿಡಿಯಲು ಮುಂದಾಗಿದೆ.
ತುಮಕೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಾವತಿಯನ್ನಾಗಿಸಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ ಪೋಕೋ ನ್ಯಾಯಾಲಯ ೪೦ ವರ್ಷಗಳ ಜೈಲು ಶಿಕ್ಷೆ ಹಾಗೂ ೨ ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಕುಮಾರ್ ಅಲಿಯಾಸ್ ಕುಮಾರಸ್ವಾಮಿ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ತುಮಕೂರು ಮಹಿಳಾ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಘಟನೆ ನಡೆದಿತ್ತು. ನೊಂದ ಬಾಲಕಿ ಒಬ್ಬಳೇ ಇದ್ದ ವೇಳೆ ಆಕೆಯ ಮನೆಗೆ ತೆರಳಿದ್ದ ಈತ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಜನವರಿ ೩, ೨೦೨೩ರಂದು ಬಾಲಕಿ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಈ ಸಂಬAಧ ದಾಖಲಾದ ದೂರಿನಂತೆ ಡಾ.ನವೀನ್ ಕುಮಾರ್ ಅವರು ಪ್ರಕರಣದ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ನ್ಯಾಯಾಲಯದ ವಿಚಾರಣೆಯಲ್ಲಿ ಅಭಿಯೋಜನೆಯ ಪರವಾಗಿ ಮಾಡಲಾದ ಸಾಕ್ಷಿಗಳು ಮತ್ತು ದಾಖಲೆಗಳಿಂದ ಕುಮಾರಸ್ವಾಮಿಯ ಮೇಲಿನ…
ತುಮಕೂರು: ವಿದ್ಯುತ್ ಸ್ಪರ್ಶಿಸಿ ಗೆ ೯ ವರ್ಷದ ಬಾಲಕ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸೋಮ ನಹಳ್ಳಿಯಲ್ಲಿ ನಡೆದಿದೆ. ಮಹೇಶ್ ಎಂಬುವರ ಪುತ್ರ ಕುಶಾಲ್ (೯) ಮೃತ ಬಾಲಕನಾಗಿದ್ದಾನೆ. ಹಳೆಯ ತಂತಿಗಳನ್ನ ಬದಲಾಯಿಸದೆ ಇರುವುದೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಮಗ ನನ್ನು ಕಳೆದುಕೊಂಡ ತಂದೆ ತಾಯಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕನಾ ಯಕನಹಳ್ಳಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಾಸಕ ಸುರೇಶ್ ಬಾಬು ಭೇಟಿ ನೀಡಿ ಸಾಂತ್ವನ ಹೇಳಿದರು. ಸ್ಥಳದಲ್ಲೇ ಬೆಸ್ಕಾಂ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ತಿಳಿಸುವಂತೆ ಸೂಚನೆ ನೀಡಿದ್ದಾರೆ.
ತುಮಕೂರು: ಪಹಲ್ಗಾಮ್, ಅನಂತನಾಗ್ ಜಿಲ್ಲೆ, ಜಮ್ಮು ಕಾಶ್ಮೀರದಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತಾ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ಸಂಘ (ರಿ), ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿAದ ನಗರದ ಬಿ.ಜಿ.ಎಸ್.ವೃತ್ತ (ಟೌನ್ ಹಾಲ್ ವೃತ್ತ)ದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಮೇಣದಬತ್ತಿ ಹಚ್ಚಿಯನ್ನು ಕೃತ್ಯದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇ ಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಬಷೀರ್ ಅಹಮದ್ ರವರು ಮಾತನಾಡುತ್ತಾ ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿನ ಪೆಹೆಲ್ಗಾಂ ಎಂಬ ಪಟ್ಟಣದಲ್ಲಿ ಇತ್ತೀಚೆಗೆ ಕೆಲವು ಭಯೋತ್ಪಾದಕರಿಂದ ನಡೆದಂತಹ ಭಯೋತ್ಪಾದಕ ಕೃತ್ಯಯುವು ಅತ್ಯಂತ ಖಂಡನೀಯವಾದದ್ದು. ಇಂಥಹ ಹೀನ ಕೃತ್ಯ ವನ್ನು ಎಸಗಿ ಅಮಾಯಕ ಜೀವಗಳನ್ನು ಬಲಿ ಪಡೆದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಭಯೋತ್ಪಾದನೆಯ ನಿರ್ಮೂಲನೆಗೆ ಪಣತೊಟ್ಟಿರುವ ಭಾರತದ ಪ್ರಧಾನ ಮಂತ್ರಿಗಳ ಕಾರ್ಯಕ್ಕೆ ತುಮಕೂರು ಜಿಲ್ಲೆಯ ಕರ್ನಾಟಕ…
ತುಮಕೂರು: ನಗರದ ೧೦ ಕೇಂದ್ರಗಳಲ್ಲಿ ಮೇ ೪ರಂದು ನಡೆಯಲಿರುವ ನೀಟ್(ಓಇಇಖಿ)-೨೦೨೫ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರಿನಲ್ಲಿ ನೀಟ್ ಪರೀಕ್ಷೆಗೆ ಒಟ್ಟು ೪೮೦೦ ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದು, ಯಾವುದೇ ಲೋಪದೋಷಗಳಾಗದಂತೆ ಪರೀಕ್ಷೆಯನ್ನು ಸುಗಮವಾಗಿ ನಡೆಸಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅನುಕೂಲವಾಗುವಂತೆ ನಗರದ ವ್ಯಾಪ್ತಿಯಲ್ಲಿ ವಿಶೇಷ ಸಾರಿಗೆ ವ್ಯವಸ್ಥೆ, ನಿರಂತರ ವಿದ್ಯುತ್ ವ್ಯವಸ್ಥೆ, ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಚಿಕಿತ್ಸಾ ವಾಹನ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರಲ್ಲದೆ, ಪ್ರಶ್ನೆ ಪತ್ರಿಕೆ ಪಡೆಯುವ ಹಾಗೂ ಉತ್ತರ ಪತ್ರಿಕೆಗಳನ್ನು ತಲುಪಿಸುವ ಸಂದರ್ಭದಲ್ಲಿ ಮಾರ್ಗಾಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದರು. ನೀಟ್ ಪರೀಕ್ಷೆಗೆ ಸಂಬAಧಿಸಿದAತೆ ಯಾವುದೇ ಸಂದರ್ಶನ ಹಾಗೂ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪ್ರತಿ…
ತುಮಕೂರು: ಜನಪದ ಕಲೆಗಳನ್ನು ಯುವಜನತೆ ಮೈಗೂಡಿಸಿಕೊಂಡಾಗ ಮಾತ್ರ ಕಲೆ ಮುಂದಿನ ಪೀಳಿಗೆಗೂ ಉಳಿಯುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜನಪದ ಉತ್ಸವವನ್ನು ರಾಶಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಬೈಲ್ ಗೀಳಿಗೆ ಒಳಗಾಗಿ ನಾಡಿನ ಸಾಹಿತ್ಯ, ಕಲೆ, ಸಂಸ್ಕöÈತಿಯನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಕಲೆ, ಸಾಹಿತ್ಯ, ಜನಪದದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಅತಿಥಿಯಾಗಿ ಭಾಗವಹಿಸಿದ್ದ ತಮಟೆ ನರಸಮ್ಮ ಅವರು, ತಮಟೆಯ ಕಲೆ, ಅದರ ವಿಶೇಷತೆ ಹಾಗೂ ಗಸ್ತುಗಳನ್ನು ಕುರಿತು ವಿವರಿಸಿದರು. ಆರತಿ ಪಟ್ರಮೆ ಮಾತನಾಡಿ, ಯಕ್ಷಗಾನ ಕಲೆ ಕರಾವಳಿಯಲ್ಲಿ ಹುಟ್ಟಿ ನಾಡಿನಾದ್ಯಂತ ವಿಸ್ತರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಂಸ್ಕöÈತಿಕ ಸಂಚಾಲಕರಾದ ಡಾ. ಮುದ್ದಗಂಗಯ್ಯ ಕೆ.ಸಿ., ಕಲೆ ಮನುಷ್ಯರನ್ನು ನಿಜ ಮನುಷ್ಯರನ್ನಾಗಿ ಮಾಡುತ್ತದೆ ಎಂದರು.…
ತುಮಕೂರು: ಕಾಶ್ಮೀರದ ಫಹಲ್ಗಾಮ್ ನಲ್ಲಿ ಮರಣ ಹೊಂದಿದ ೨೭ ಜನರ ಪೈಕಿ ೩ ಜನ ಕರ್ನಾಟಕದವರು,ಯಾವುದೇ ತಪ್ಪು ಮಾಡದೆ ಉಗ್ರರ ದಾಳಿಗೆ ತುತ್ತಾಗಿ ಮರಣ ಹೊಂದಿರುವುದು ದುರದೃಷ್ಟಕರ,ಇಡೀ ದೇಶವೇ ಸತ್ತವರ ಕುಟುಂಬದ ಜೊತೆ ನಿಂತಿದೆ,ಉಗ್ರರ ಧಮನವನ್ನು ನಮ್ಮ ಭಾರತ ಸರ್ಕಾರ,ಸೈನಿಕರು ಮಾಡಲಿದ್ದಾರೆ ಉಗ್ರರಿಗೆ ಯಾವುದೇ ದಯೆ ಇಲ್ಲ,ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ದೇಶ ಅಭಿವೃದ್ಧಿ ಆಗುತ್ತದೆ,ಹೊರಗಿನ ಶತೃಗಳಿಂದ ನಮ್ಮ ದೇಶಕ್ಕೆ ಅಪಾಯವಿದೆ,ಈ ನಿಟ್ಟಿನಲ್ಲಿ ಎಲ್ಲರೂ ದೇಶದ ಪರ ಹೋರಾಟ ಮಾಡಬೇಕು,ಪ್ರಧಾನಿ,ಗೃಹ,ರಕ್ಷಣಾ ಸಚಿವರ ಕೈ ಬಲಪಡಿಸಬೇಕು,ಸತ್ತವರ ಕುಟುಂಬ ಸದಸ್ಯರ ಕಥೆ ಏನಾಗಬೇಕು?ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ಪ್ರೀತಿ ವಿಶ್ವಾಸದಿಂದ ಇದ್ದರೆ ಹೊರಗಿನ ಶತೃಗಳನ್ನು ಹೊಡೆದು ಎದುರಿಸಬಹುದು ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಕಾರ್ಯದರ್ಶಿ ಮತ್ತು ನಿರ್ಭಯ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಗೀತಾನಾಗೇಶ್ ರವರು ತಿಳಿಸಿದರು. ಅವರು ಇಂದು ನಗರದ ಜಯನಗರ ಸರ್ಕಲ್ ನಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ, ನಿರ್ಭಯ ಮಹಿಳಾ ಜಾಗೃತಿ ವೇದಿಕೆ,ಜಯನಗರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಆಯೋಜಿಸಿದ್ದ…
ತುಮಕೂರು: ಮೂವತ್ತು ವರ್ಷಗಳ ಸುದೀರ್ಘ ಕ್ಷೇತ್ರಕಾರ್ಯದ ಫಲವಾಗಿ ಹುಟ್ಟಿಕೊಂಡಿರುವ ‘ದೇವುಗಾನಿಕೆ’ ಕೃತಿಯಲ್ಲಿ ಹೆಣ್ಣು- ಗಂಡು ಇಬ್ಬರನ್ನೂ ಸಮಾನವಾಗಿ ಕಾಣಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ವಿಶ್ರಾಂತ ಕಾರ್ಯದರ್ಶಿ ಡಾ. ಅಗ್ರಹಾರ ಕೃಷ್ಣಮೂರ್ತಿ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಡಿ. ವಿ. ಜಿ. ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಡಾ.ಪಿ.ಎಂ ಗಂಗಾಧರಯ್ಯ ಅವರ ‘ದೇವುಗಾನಿಕೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮೌಖಿಕ ಕಾವ್ಯಗಳು, ಕಥೆಗಳು, ನಮ್ಮ ಚರಿತ್ರೆಯನ್ನು ಇಂದಿಗೂ ಹಿಡಿದಿಟ್ಟುಕೊಂಡಿರುವ ಪರಿಯನ್ನು ದೇವುಗಾನಿಕೆ ಪರಿಚಯಿಸುತ್ತದೆ. ಅಂಚಿಗೆ ಸರಿದ ಅನೇಕ ಸಮುದಾಯಗಳ ಚರಿತ್ರೆಗಳನ್ನು ಹೊರ ತರುವುದರಲ್ಲಿ ಕೃತಿಕಾರರು ಮಾಡಿರುವ ಕಾರ್ಯ ಶ್ಲಾಘನೀಯ ಎಂದರು. ಕರ್ನಾಟಕದಲ್ಲಿ ೩೦- ೩೫ ವರ್ಷಗಳ ಹಿಂದೆ ಜಾನಪದದ ಹೆಚ್ಚು ಚಟುವಟಿಕೆಗಳು ನಡೆಯುತ್ತಿದ್ದವು. ಇತ್ತೀಚಿಗೆ ಆಧುನೀಕರಣಗೊಂಡು ಎಲ್ಲವೂ ಮರೆಯಾಗುತ್ತಿದೆ. ಪ್ರಸ್ತುತ ಕೃತಿ ಇವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು. ಈ ಕೃತಿಯಲ್ಲಿ ದೇವತೆಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಒಟ್ಟು ಏಳು ಮಾತೃ ದೇವತೆಗಳ ಗುಂಪನ್ನು…