ಶ್ರೀನಗರ: ತಡ ರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಹಿಝ್‌ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಶನಿವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಗೆ ಬಲಿಯಾಗಿದ್ದಾರೆ. ಖುಡ್ಪೋರಾದಲ್ಲಿ ಭಯೋತ್ಪಾದಕರು ಅಡಗಿದ್ದಾರೆಂದು ದೊರೆತ ವರ್ತಮಾನದ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿತ್ತು. ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಆಗ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಇಬ್ಬರು ಭಯೋತ್ಪಾದಕರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಇಬ್ಬರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳನ್ನು ಗುರಿಯಗಿಸಿ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರು ತನ್ನ ಸಾವನ್ನು ತಾವೇ ತಂದುಕೊಂಡಿದ್ದಾರೆ. ಮೃತಪಟ್ಟವರನ್ನು ಮುಹಮ್ಮದ್ ಇರ್ಫಾನ್ ಬಟ್ ಮತ್ತು ಶಾಹೀದ್ ಮಿರ್ ಎಂದು ತಿಳಿದು ಬಂದಿದೆ. ಇವರು ಕಳೆದ ವರ್ಷ ಉಗ್ರ ಸಂಘನೆಗೆ ಸೇರಿದ್ದರು…
Author: News Desk Benkiyabale
ಬೆಂಗಳೂರು : 5 ಕ್ಷೇತ್ರಗಳ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. 3 ಲೋಕಸಭಾ ಕ್ಷೇತ್ರ ಮತ್ತು 2 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 65.57ರಷ್ಟು ಮತದಾನ ನಡೆದಿದೆ. ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನವೆಂಬರ್ 3ರ ಶನಿವಾರ ನಡೆಯಿತು. ಶಾಂತಿಯುತವಾಗಿ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಜಮಖಂಡಿಯಲ್ಲಿ ಅತಿ ಹೆಚ್ಚು ಅಂದರೆ 81.58 ಮತ್ತು ಮಂಡ್ಯದಲ್ಲಿ ಅತಿ ಕಡಿಮೆ ಎಂದರೆ 53.93 ರಷ್ಟು ಮತದಾನವಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಈಗ ಯಾರು ಗೆಲ್ಲುತ್ತಾರೆ?, ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ? ಎಂದು ಲೆಕ್ಕಾಚಾರ ಆರಂಭವಾಗಿದೆ. ಮತದಾನದ ವಿವರ : ಜಮಖಂಡಿ ವಿಧಾನಸಭಾ ಕ್ಷೇತ್ರ – 81.58 ರಾಮನಗರ ವಿಧಾನಸಭಾ ಕ್ಷೇತ್ರ – 73.71 ಬಳ್ಳಾರಿ ಲೋಕಸಭಾ ಕ್ಷೇತ್ರ 63.85 ಶಿವಮೊಗ್ಗ ಲೋಕಸಭಾ ಕ್ಷೇತ್ರ 61.05 ಮಂಡ್ಯ ಲೋಕಸಭಾ…
ಲಕ್ನೋ: ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಶ್ರೀರಾಮಚಂದ್ರನ ಪ್ರತಿಮೆ ಸ್ಥಾಪಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ಸುಮಾರು 151 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿದ್ದಾರೆ. ಸಂತ ತುಳಸೀದಾಸ್ ಘಾಟ್ ಬಳಿ ಸುಮಾರು 330 ಕೋಟಿ ರು ವೆಚ್ಚದಲ್ಲಿ 151 ಮೀಟರ್ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ, ದೀಪಾವಳಿ ಸಂದರ್ಭದಲ್ಲಿ ಈ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಅಯೋಧ್ಯ ನಗರದ ಮೇಯರ್ ಋಷಿಕೇಶ್ ಉಪಾಧ್ಯಾಯ್ ಅವರು ಹೇಳಿದ್ದಾರೆ. ‘ಈ ಬಾರಿ ದೀಪವಾಳಿಗೆ ರಾಮನಿಗಾಗಿ ದೀಪ ಬೆಳಗುತ್ತೇವೆ. ಕೆಲಸ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ದೀಪಾವಳಿ ನಂತರ ಈ ಕಾರ್ಯ ಆರಂಭವಾಗಲಿದೆ,” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ತಿಪಟೂರು : ತಾಲ್ಲೂಕು ಆಡಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲ್ಲಿನ ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ತಮ್ಮ ಹಿಂಬಾಲಕರಿಗೆ ನೀಡಿದ್ದು, ಪ್ರಶಸ್ತಿ ಆಯ್ಕೆಯಲ್ಲಿ ಸರಿಯಾದ ಮಾನದಂಡ ಬಳಕೆಯಾಗಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾ. ಅಧ್ಯಕ್ಷ ಬಿ.ಟಿ. ಕುಮಾರ್ ಗಂಭೀರ ಆರೋಪ ಮಾಡಿದರು. ಈ ಸಂಬಂಧ ನಗರದಲ್ಲಿ ಗುರುವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಎಲ್ಲಾ ಕ್ಷೇತ್ರಗಳನ್ನು ಗುರುತಿಸಿ ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಆದರೆ ಈ ಬಾರಿ ಕ್ರೀಡೆ, ಪತ್ರಿಕೋದ್ಯಮ, ವೈದ್ಯಕೀಯ, ಕನ್ನಡಪರ ಹೋರಾಟಗಾರ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಬಿಟ್ಟು ಕೇವಲ ಜಾತಿ ರಾಜಕಾರಣದ ಆಧಾರದ ಮೇಲೆ ತಾ. ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಆಯ್ಕೆ ಸಂದರ್ಭದಲ್ಲಿ ಶಾಸಕರು ತಮಗೆ ಬೇಕಾದವರ ಹೆಸರನ್ನು ಸೇರಿಸಿ ಪ್ರಶಸ್ತಿ ನೀಡಲು ಸಹಕರಿಸಿದ್ದಾರೆ. ಪ್ರಶಸ್ತಿ ಪಡೆದವರು ಬಹುತೇಕ ಶಾಸಕರ ಹಿಂಬಾಲಕರಾಗಿದ್ದಾರೆ. ಶಾಸಕರೇ ಸಾಧನೆ ಮಾಡದ ಹಾಗೂ…
ಹುಳಿಯಾರು: ಪಟ್ಟಣದ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ 63 ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ರಾಜ್ ಕುಮಾರ್ ಹೆಬ್ಬಾಗಿಲು ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಪಿಎಸ್‍ಐ ವಿಜಯಕುಮಾರ್ ಹೆಬ್ಬಾಗಿಲು ಉದ್ಘಾಟಿಸಿ ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಿಗರಲ್ಲಿ ಕನ್ನಡಾಭಿಮಾನ ಬೆಳೆಯುತ್ತಿದೆ. ರಾಜ್ಯೋತ್ಸವವೂ ಇಲ್ಲದಿದ್ದರೆ ಕನ್ನಡವೂ ಇಲ್ಲ ಅಭಿಮಾನವೂ ಇಲ್ಲ ಅನ್ನುವಂತಾಗುತ್ತಿತ್ತು. ನವೆಂಬರ್ ಮಾಹೆಯಲ್ಲಿ ಭಾಷೆ ಮೇಲೆ ಉಕ್ಕುವ ಪ್ರೀತಿ ವರ್ಷ ಪೂರ್ತಿ ಇದ್ದರೆ ಕನ್ನಡಕ್ಕೆ ಎಂದೆಂದೂ ಧಕ್ಕೆಯಾಗದು ಎಂದರಲ್ಲದೆ ಹುಳಿಯಾರಿನಲ್ಲಿ ಟೀ ಅಂಗಡಿ ಪರಪ್ಪ ಅವರಿಗಿರುವ ಕನ್ನಡಾಭಿಮಾನ ಇತರರಿಗೆ ಮಾಧರಿಯಾಗಿದೆ ಎಂದರಲ್ಲದೆ ರಾಜ್‍ಕುಮಾರ್ ಅಭಿಮಾನಿ ಬಳಗ ರಚಿಸಿಕೊಂಡು ದಾನಿಗಳ ನೆರವಿನಿಂದ ಹೆಬ್ಬಾಗಿಲು ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಡಾ.ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಪರಪ್ಪ, ಉಪಾಧ್ಯಕ್ಷ ಈರುಳ್ಳಿ ಹೊನ್ನಪ್ಪ, ಪರಮೇಶ್, ಕಂಪನಹಳ್ಳಿ ರಂಗಸ್ವಾಮಿ, ಅರ್ಚಕ ರಾಜಣ್ಣ,…
ಬೆಂಗಳೂರು: ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು ಶನಿವಾರ ಹೇಳಿದ್ದಾರೆ. ಇಂದು ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತು ಸಭೆ ನಡೆಯಿತು. ಸಚಿವ ಜಮೀರ್ ಅಹಮದ್ ಕೂಡ ಸಭೆಯಲ್ಲಿ ಪಾಲಗೊಂಡಿದ್ದರು, ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸಿಎಂ ಗೃಹ ಕಚೇರಿ ಕೃಷ್ಣಾಗೆ ತೆರಳಿ ಸಲ್ಲಿಸಲಾಯಿತು. ನಿನ್ನೆಯಷ್ಟೇ ಕುಮಾರಸ್ವಾಮಿ ಟಿಪ್ಪು ಜಯಂತಿ ವಿಚಾರದ ಕುರಿತು ಮಾತನಾಡಿದ್ದು ಕಾಂಗ್ರೆಸ್ ಸರ್ಕಾರದಲ್ಲಿ ಆರಂಭಗೊಂಡು ಭಾರಿ ವಿವಾದ ಸೃಷ್ಠಿಸಿದ್ದ ಟಿಪ್ಪು ಜಯಂತಿಯನ್ನು ಕುಮಾರಸ್ವಾಮಿ ಸರ್ಕಾರ ಕೈಬಿಡುವುದಿಲ್ಲವೆಂದು ಮುಖ್ಯಮಂತ್ರಿ ಅವರೇ ಸ್ಪಷ್ಟಪಡಿಸಿದ್ದರು. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕ ಟಿಪ್ಪು ಆಚರಣೆ ಒಂದು ರೂಪ ಪಡೆದುಕೊಳ್ಳಲಿದೆ.
ನವದೆಹಲಿ: ಹನ್ನೆರಡು ಕೋಟಿ ಫೇಸ್ ಬುಕ್ ಬಳಕೆದಾರರ ಖಾಸಗಿ ಚಾಟ್ ಮಾಹಿತಿ ಸಹಿತ ಹಲವಾರು ವಿವರಗಳನ್ನು ಹ್ಯಾಕ್ ಮಾಡಿ ಅವುಗಳನ್ನು ಅಂತರ್ಜಾಲದಲ್ಲಿ ಮಾರಾಟಕ್ಕಿಡಲಾಗಿತ್ತು ಎಂದು ಬಿಬಿಸಿ ರಷ್ಯನ್ ಸರ್ವಿಸ್ ವರದಿ ಮಾಡಿದೆ. ಹ್ಯಾಕರ್ ಗಳು ಫೇಸ್ ಬುಕ್‍ನ 81,000 ಬಳಕೆದಾರರ ಖಾಸಗಿ ಮಾಹಿತಿಗಳನ್ನು ಬಿಡುಗಡೆಗೊಳಿಸಿದ್ದಾರೆಂದು ಹೇಳಲಾಗಿದೆ. ಈ ಹ್ಯಾಕ್ ಆದ ವಿಚಾರ ಸೆಪ್ಟೆಂಬರ್ ತಿಂಗಳಲ್ಲಿ ಎಫ್‍ಬಿ ಸೇಲರ್ ಎಂಬ ಬಳಕೆದಾರ ಆಂಗ್ಲ ಭಾಷೆಯ ಅಂತರ್ಜಾಲ ವೇದಿಕೆಯಲ್ಲಿ ಜಾಹೀರಾತನ್ನು ಹಾಕಿ ಒಂದು ಫೇಸ್ ಬುಕ್ ಖಾತೆಯ ಡಾಟಾ ಮಾಹಿತಿಯನ್ನು ಹತ್ತು ಸೆಂಟ್ಸ್ ಗೆ ಒದಗಿಸುವುದಾಗಿ ಹೇಳಿದಾಗ ಬಹಿರಂಗಗೊಂಡಿತ್ತು. ಆದರೆ ಆ ಜಾಹೀರಾತು ಈಗ ಅಂತರ್ಜಾಲದಲ್ಲಿ ಕಾಣಿಸುತ್ತಿಲ್ಲ. ತನ್ನ ಸೆಕ್ಯುರಿಟಿ ಫೀಚರ್ಸ್ ಸುರಕ್ಷಿತವಾಗಿದ್ದು, ಕೆಲವು ಶಂಕಾಸ್ಪದ ಬ್ರೌಸರ್ ಎಕ್ಸ್‍ಟೆನ್ಶನ್‍ಗಳ ಮುಖಾಂತರ ಈ ಮಾಹಿತಿಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಫೇಸ್ ಬುಕ್ ಬಿಬಿಸಿಗೆ ಹೇಳಿದೆ. ಇನ್ನಷ್ಟು ಫೇಸ್‍ಬುಕ್ ಖಾತೆಗಳು ಬಾಧಿತವಾಗದೇ ಇರುವಂತೆ ತಾನು ಕ್ರಮ…
ನವದೆಹಲಿ: ಅಕ್ಟೋಬರ್ನಲ್ಲಿ ಒಟ್ಟು 67.45 ಲಕ್ಷ ವ್ಯಾಪಾರಸ್ಥರು ಜಿಎಸ್ಟಿ ರಿಟರ್ನ್ಸ್ ಸಲ್ಲಿಸಿದ್ದು, 1,00,710 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಹೇಳಿದೆ. ತೆರಿಗೆ ವಂಚನೆಗೆ ಅಂಕುಶ, ಹಲವು ವಸ್ತುಗಳ ತೆರಿಗೆ ಇಳಿಕೆ, ದೇಶಾದ್ಯಂತ ಏಕ ತೆರಿಗೆ ಜತೆಗೆ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಲಗಾಮು ಹಾಕಲಾದ ಕಾರಣ ಜಿಎಸ್ಟಿ ಸಂಗ್ರಹ ಕೋಟಿ ಲಕ್ಷ ದಾಟಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ಜಿಎಸ್ಟಿ ಸಂಗ್ರಹದಲ್ಲಿ ಕೇರಳ ಅಸಾಧಾರಣ ಬೆಳವಣಿಗೆ (ಶೇ. 44) ದಾಖಲಿಸಿದೆ. ರಾಜಸ್ಥಾನದಲ್ಲಿ ಸಂಗ್ರಹ ಶೇ. 14 ಏರಿಕೆ ಕಂಡರೆ, ಉತ್ತರಾಖಂಡದಲ್ಲಿ ಶೇ. 13 ಮತ್ತು ಮಹಾರಾಷ್ಟ್ರದಲ್ಲಿ ಶೇ. 11 ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಲಕ್ಷ ಕೋಟಿ ರೂ. ಜಿಎಸ್ಟಿಯಲ್ಲಿ ಕೇಂದ್ರ ತೆರಿಗೆ 16,464 ಕೋಟಿ ರೂ., ರಾಜ್ಯ ತೆರಿಗೆ 22,826 ಕೋಟಿ ರೂ., ಐಜಿಎಸ್ಟಿ 53,419 ಕೋಟಿ ರೂ. ಮತ್ತು 8…
ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟವನ್ನು ಶೀಘ್ರವೇ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರ ಸ್ವೀಕರಿಸುವ ಮುಂಚೆ, ಹಿಂದಿನ ಸರ್ಕಾರ ಆನ್‌ಲೈನ್ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಈ ಅದನ್ನು ನಿಲ್ಲಿಸುವಂತೆ ಸೂಚಿಸಿದ್ದೇನೆ. ಹಿಂದೆ ಅನುಮತಿ ಕೊಟ್ಟಿರುವ ಫೈಲ್ ಹಿಡಿದು ಕೊಂಡು ಬರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಫೈಲ್ ಪರಿಶೀಲಿಸಿ ಆನ್‍ಲೈನ್ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆನ್‌ಲೈನ್ ಮದ್ಯ ಮಾರಾಟವನ್ನು ಅಧಿಕಾರಿಗಳು ಜಾರಿಗೊಳಿಸಿದ್ದಾರೆ . ಇದು ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ನಿಲ್ಲಿಸಲು ಸೂಚನೆ ನೀಡಿದ್ದೇನೆ, ಯಾವ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುಬ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನಗರ : ರಾಮನಗರ ಕ್ಷೇತ್ರದ ಉಪ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಹಿಂದೆ ಸರಿದಿದ್ದಾರೆ. ಆದರೆ, ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನಲ್ಲಿ ಅವರ ಹೆಸರು ಇರುತ್ತದೆ. ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದರು. ನವೆಂಬರ್ 3ರ ಶನಿವಾರ ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ. ಎಲ್.ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದರೂ ಅವರ ಹೆಸರು ಮತಯಂತ್ರದಲ್ಲಿ ಇರಲಿದೆ. ಹಿಂದೆಯೂ ಈ ರೀತಿಯ ಹಲವಾರು ಪ್ರಕರಣಗಳು ನಡೆದಿವೆ ಎಂದು ಚುನಾವಣಾ ಆಯೋಗ ಹೇಳಿದೆ. ನಾಮಪತ್ರ ವಾಪಸ್ ಪಡೆಯಲು ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಉಳಿಯುವ ಎಲ್ಲಾ ಅಭ್ಯರ್ಥಿಗಳ ಹೆಸರು ಮತಯಂತ್ರದಲ್ಲಿ ಇರಲಿದೆ. ಕೆಲವು ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಇಲ್ಲದಿದ್ದರೂ ಮತವನ್ನು ಬಿಜೆಪಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ. ದೇಶದ ಹಿತಕ್ಕಾಗಿ ಬಿಜೆಪಿಗೆ ಮತ ಹಾಕಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. …











