ಮಧುಗಿರಿ ಪೊಲೀಸ್ ಠಾಣೆ : ಮೂರು ನಾಪತ್ತೆ ಪ್ರಕರಣ ದಾಖಲು

 ತುಮಕೂರು :

      ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ-ಮಗಳು, ಓರ್ವ ಯುವಕ ನಾಪತ್ತೆಯಾಗಿರುವ ಮೂರು ಪ್ರಕರಣಗಳು ದಾಖಲಾಗಿವೆ.

ತಾಯಿ-ಮಗಳು ಕಾಣೆ:

      ಮಧುಗಿರಿಯ 28 ವರ್ಷದ ಅನಿತಲಕ್ಷ್ಮಿ ಹಾಗೂ 5 ವರ್ಷದ ಮಗಳು ಬೃಂದಾ ಜನವರಿ 19ರಂದು ಕಾಣೆಯಾಗಿದ್ದಾರೆ ಎಂದು ಅನಿತಲಕ್ಷ್ಮಿ ತಾಯಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಅನಿತಲಕ್ಷ್ಮಿ 150 ಸೆ.ಮೀ. ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿದ್ದರು.

     ಕಾಣೆಯಾದ ಮಗಳು ಬೃಂದಾ 91 ಸೆ.ಮೀ. ಎತ್ತರ, ಎಣ್ಣೆ ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ.

ಯುವಕ ಕಾಣೆ;

       ಜನವರಿ 9ರಂದು ಮಧುಗಿರಿಯ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ ಕುರಿ ಕಾಯುವ ಸುಮಾರು 19 ವರ್ಷದ ಗೋವಿಂದರಾಜು ಕುರಿ ಕಾಯಲು ತೆರಳಿದ್ದ ವೇಳೆ ಕಾಣೆಯಾಗಿದ್ದಾರೆ ಎಂದು ಸಂಬಂಧಿ ಶಿವರಾಜು ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿ 152 ಸೆ.ಮೀ. ಎತ್ತರ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೊರಟಾಗ ಬಿಳಿ ಅಂಗಿ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

      ಕಾಣೆಯಾಗಿರುವವರ ಬಗ್ಗೆ ಸುಳಿವು ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ದೂ.ಸಂ. 08137-282381/282313, 0816-2272451/22264412ನ್ನು ಸಂಪರ್ಕಿಸಬಹುದು ಎಂದು ಸಬ್‍ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.

 

(Visited 8 times, 1 visits today)

Related posts

Leave a Comment