ಚಿಕ್ಕನಾಯಕನಹಳ್ಳಿ:

      ದೊಡ್ಡವರ ಬಾಯಿಯ ಮಾತು, ಹುಚ್ಚನ ಕೈನಲ್ಲಿರುವ ಕಲ್ಲು ಯಾರಿಗೆ ಬೇಕಾದರು ಬೀಸಬಹುದು ಎಂಬಂತಾಗಿದೆ ಇಂದು ಸಚಿವ ಜೆ.ಸಿ.ಮಾಧುಸ್ವಾಮಿಯವರ ಹೇಳಿಕೆ ಎಂದು ತಿಮ್ಲಾಪುರ-ಲಕ್ಷ್ಮಗೊಂಡನಹಳ್ಳಿ ಗ್ರಾಮದ ರೈತ ಗಂಗಾಧರಯ್ಯ ನುಡಿದರು.

      ತಾಲೂಕಿನ ಕುಡಿಯುವ ನೀರಿನ ಹೇಮಾವತಿ ಯೋಜನೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪರಿಹಾರ ಕೊಡುವಂತೆ ಒತ್ತಾಯಿಸಿ ಹೇಮಾವತಿ ನಾಲೆಯ ಹತ್ತಿರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

      ಈ ಬಗ್ಗೆ ಸಚಿವರನ್ನು ಕೇಳಲು ಸಂತ್ರಸ್ತ ರೈತರು ಅವರ ಮನೆಗೆ ಹೋದಾಗ ಬಾಯಿಗೆ ಬಂದಂತೆ ಬೈದು ಅಂದು ನೀವು ಎರಡು ಸಾವಿರ ರೂಪಾಯಿಗಳಿಗೆ ಹೇಸಿಗೆ ತಿಂದಿದ್ದೀರಿ, ಇಂದು ಅದರ ಪರಿಣಾಮವನ್ನು ಅನುಭವಿಸಿ. ಎಂದು ಹೀನಾಯವಾಗಿ ರೈತರನ್ನು ನಿಂದಿಸಿ ಮನೆಯಿಂದ ಹೊರಗೆ ಅಟ್ಟಿದರು ಎಂದು ಸುಮಾರು 40 ವರ್ಷಗಳಿಂದ ಜೆ.ಸಿ.ಮಾಧುಸ್ವಾಮಿಯವರ ಕಟ್ಟಾ ಬೆಂಬಲಿಗರಾಗಿದ್ದ ಗಂಗಾಧರಯ್ಯ ತಮ್ಮ ಆಕ್ರೋಶವನ್ನು ಹೊರಹಾಕಿದರು.

      2011 ರಲ್ಲಿ ಆರಂಭವಾದ ಹೇಮಾವತಿ ಕಾಮಗಾರಿಗೆ, ಮೊದಲು ಬಿಟ್ಟುಕೊಟ್ಟದ್ದೆ ನಮ್ಮ ಜಮೀನು, 34/2. ಇವತ್ತಿನ ಈ ಘಟನೆಗೆ ಕಾರಣ, ಮಾನ್ಯ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರ ಮನೆಗೆ ಹೋಗಿ 6 ತಿಂಗಳ ಮುಂಚೆಯೇ ನಾನು ಇನ್ನು ಸಹ 8-10 ಜನರ ಪರಿಹಾರದ ಹಣ ಬರಬೇಕಾಗಿದೆ, ಕೊಡಿಸಿ ಕಾಮಗಾರಿಯನ್ನು ಮುಂದುವರೆಸಿ ಎಂದಿದ್ದಕ್ಕೆ, ಕಾಮಗಾರಿ ನಡೆಸಲು ಬಿಡದಿದ್ದರೆ, ಪೊಲೀಸ್ ಕರೆಸಿ ಕೆಲಸ ಮಾಡಿಸುತ್ತೇವೆ, ಬಿಡದಿದ್ದರೆ ನಿಮ್ಮನ್ನು ಒದ್ದು ಒಳಗೆ ಹಾಕಿಸುತ್ತೇವೆ ಎಂದರು. ನಾವು ಇವರಿಗೆ ಅಧಿಕಾರ ಕೊಡುವುದು ಜನಗಳ ಮೇಲೆ ದಬ್ಬಾಳಿಕೆ ನಡೆಸಲು ಅಲ್ಲ ಎಂದು ಅವರು ಖಂಡಿಸಿದರು.

      ಹಿಂದಿನ ಶಾಸಕರಾದ ಸಿ.ಬಿ.ಸುರೇಶ್ ಬಾಬುರನ್ನು ಸಹ ಭೇಟಿ ಮಾಡಿ ವಿನಂತಿಸಿದ್ದೆವು, ಅವರು ಪರಿಹಾರ ಕೊಡಿಸುವ ಭರವಸೆ ಕೊಟ್ಟಿದ್ದರು. ನಾವು ನಮ್ಮ ಸ್ವಂತ ಪರಿಶ್ರಮದಿಂದ ಪರಿಹಾರ ಪಡೆದುಕೊಂಡಿದ್ದೇವೆಯೇ ಹೊರತು ಇದು ಮಾಧುಸ್ವಾಮಿಯವರ ಭಿಕ್ಷೆಯಲ್ಲ. ಇನ್ನು ಉಳಿದಿರುವ ನಮ್ಮ ರೈತ ಬಂಧುಗಳ ಪರಿಹಾರದ ಹಣಕ್ಕಾಗಿ ಈ ಹೋರಾಟ ಎಂದರು. ಈ ವಿಷಯವಾಗಿ ಸಚಿವರನ್ನು ಭೇಟಿ ಮಾಡಿದರೆ, ಅಂದು 2 ಸಾವಿರ ರೂಪಾಯಿಗೆ ಹೇಸಿಗೆ ತಿಂದ ನೀವು ಇಂದು ನನ್ನ ಬಳಿ ಹಣಕ್ಕಾಗಿ ಬಂದಿದ್ದೀರಿ ಎಂದು ಹೀಯಾಳಿಸಿದರು.

      ನಾವು ಪ್ರಾಮಾಣಿಕ ರೈತರು, ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಕುತ್ತಿಗೆ ಕತ್ತರಿಸಿಕೊಂಡು ಸಾಯುತ್ತೇವೆ, ಹೊರತು ಸಚಿವರು ಹೇಳಿದ ಹಾಗೆ ಬೇರೆಯವರ ದುಡ್ಡಿಗೆ ಆಸೆ ಪಡುವುದಿಲ್ಲ. ಕಾಮಗಾರಿಗಾಗಿ ಬಿಟ್ಟುಕೊಟ್ಟಿರುವ ಜಮೀನುಗಳು ನಮ್ಮ ರೈತರದ್ದು, ಪರಿಹಾರದ ಹಣ ಸರ್ಕಾರದ್ದು, ಯಾರಪ್ಪನ ಮನೆಯ ಹಣವನ್ನೇನು ನಾವು ಕೇಳುತ್ತಿಲ್ಲ. ಶಾಸಕರು ಇದನ್ನು ವೈಭವೀಕರಿಸಿ ಹೇಳುವ ಅಗತ್ಯವೇನಿದೆ?
ನಮ್ಮ ರೈತರ ಪರಿಹಾರದ ಸಮಸ್ಯೆ ಇನ್ನು ಬಗೆಹರಿದಿಲ್ಲ, ರೈತರ ಜಮಿನನ್ನು ತೆಗೆದುಕೊಂಡು ಹೋಗಿದ್ದಾರೆ. ವಾಪಸ್ ಕೊಡಿಸಿ ಎಂದು ಕೇಳಿಕೊಂಡಿದ್ದಕ್ಕೆ, ನಮಗೆ ಅದು ಗೊತ್ತಿಲ್ಲ, ಇದು ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು. ಅವರು ಜಮೀನು ತೆಗೆದುಕೋಂಡಾಗ ನೀವೂ ಕೂಡ ಹಣತಿಂತಿದ್ದೀರಿ ಎಂದು ನಿಯತ್ತಾಗಿರುವ ನಮಗೆ ಹೇಳಿದರೆ ನಮ್ಮನ್ನೇನು ಇವರು ನಾಯಿಗಳನ್ನಾಗಿ ಮಾಡಿಕೊಂಡಿದ್ದಾರೆಯೇ?

      ದಾಖಲೆ ಎಲ್ಲವೂ ಸರಿ ಇದೆ, ಒಬ್ಬ ವ್ಯಕ್ತಿಯದ್ದು ನಾಲಕ್ಕು ಕುಂಟೆ ಇದೆ, ಪಶ್ಚಿಮ ಮತ್ತು ಉತ್ತರ ಎರಡಕ್ಕು ಅಕ್ವೈರ್ ಅಗಿದೆ. ಬ್ರಿಡ್ಜ್ ಹತ್ತಿರ ಇದೆ, ಒಂದೂವರೆ ಗುಂಟೆಯನ್ನು ಸೇರಿಸಿಕೊಳ್ಳಿ ಎಂದರೆ ಬೇಕಾದರೆ ಸೇರಿಸಿಕೊಳ್ಳುತ್ತೇವೆ, ಇಲ್ಲದಿದ್ದರೆ ಇಲ್ಲ. ನಮಗೆ ಕಿತ್ತುಕೊಳ್ಳುವ ಅಧಿಕಾರ ಕಾನೂನಿನಲ್ಲಿ ಇದೆ ಎಂದರು. ಅವರ ಮನೆಯಲ್ಲಿ ಕುಳಿತು ಕೇಳಿಸಿಕೊಂಡು ಬಂದಿರುವ ಮಾತಿದು. ಒಂದೂವರೆ ಗುಂಟೆ ಇಟ್ಟುಕೊಂಡು ಎಲ್ಲಿ ಹೋಗಬೇಕು ಆ ವ್ಯಕ್ತಿ. ನಿಮಗೆ ಬೇಕಿದ್ದರೆ ಕೋರ್ಟಿಗೆ ಹೋಗಿ, 20 ವರ್ಷವಾಗಲಿ, ನಾನು ಛಾಲೆಂಜ್ ಮಾಡುತ್ತೇನೆ, ನೀವು ಅದು ಹೇಗೆ ಹಣ ತಗೆದುಕೊಳ್ಳುತ್ತೀರೆಂದು. ನಾವು ಹಿಂದೆ ಒಂದು ಮುಂದೆ ಒಂದು ಮಾತನಾಡುವುದಿಲ್ಲ, ಮಾಧುಸ್ವಾಮಿಯವರನ್ನು ಕರೆಸಿ, ಅವರ ಮುಂದೆಯೇ ಈ ಮಾತನ್ನು ಹೇಳುತ್ತೇನೆ. ರೈತರ ಮೇಲಿನ ಈ ತರದ ಅತಿಕ್ರಮಣ ಸರಿಯೇ ಎಂದು ಪ್ರಶ್ನಿಸಿತ್ತೇವೆ ಎಂದರು.
     ಸೌಭಾಗ್ಯಮ್ಮ- 27 ಕುಂಟೆ (10 ಗುಂಟೆಗೆ ಮಾತ್ರಪರಿಹಾರ ಸಿಕ್ಕಿದೆ), ಚನ್ನಬಸವಯ್ಯ- 1.5 ಗುಂಟೆ,,ಜಯಾನಂದಯ್ಯ- 10
ಗುಂಟೆ (ನಿವೃತ್ತ ಪ್ರಾಧ್ಯಾಪಕರು):-
      ಹಳೆಯ ಪರಿಹಾರದ ಮೊತ್ತವನ್ನು ನಾವು ಒಪ್ಪುವುದಿಲ್ಲ, 2-3 ವರ್ಷಗಳಿಗೆ ಕಂಟ್ರಾಕ್ಟರ್‍ಗಳಿಗೆ ಕೊಡುವ ಹಣವನ್ನು ಹೆಚ್ಚುಮಾಡುತ್ತೀರಿ, ಮಾರ್ಕೆಟ್ ವ್ಯಾಲ್ಯೂ ಎಷ್ಟಿದೆಯೋ ನಮಗೆ ಅಷ್ಟೇ ಹಣ ನೀಡಬೇಕು, ನೇರ ಖರೀದಿ, ಮಾತುಕತೆಯ ಮೂಲಕ ಮಾಡುತ್ತೇವೆ ಎಂದಿದ್ದರು.
ಸದಾಶಿವಯ್ಯ- 22 ಗುಂಟೆ, ಟಿ.ಪಿ. ಶಂಕರಪ್ಪ- 5 ಗುಂಟೆ, ಸಿದ್ದಪ್ಪ- ನಿಂಗಣ್ಣ- 7 ಗುಂಟೆ, ಸಿದ್ದಬಸವಯ್ಯ- 18 ಗುಂಟೆ, ಶಂಕರಯ್ಯ- 2.5 ಗುಂಟೆ,ಗಂಗಾಧರಯ್ಯ ಪ್ರತಿಭಟನೆಯಲ್ಲಿ ಟಿ.ಪಿ.ಶಂಕರಲಿಂಗಯ್ಯ, ಚನ್ನಬಸವಯ್ಯ, ಗಂಗಾಧರಯ್ಯ, ಪಂಚಾಕ್ಷರಯ್ಯ, ಚಂದನ್, ದಿನೇಶ್, ಸೌಭಾಗ್ಯಮ್ಮ, ಪ್ರಭುಸ್ವಾಮಿ, ಆತ್ಮಾನಂದ ಜೆ.ಸಿ.ಪುರ, ಟಿ.ಶಂಕರಲಿಂಗಯ್ಯ ಮುಂತಾದವರಿದ್ದರು.

 

 

(Visited 8 times, 1 visits today)