ಚಿಕ್ಕನಾಯಕನಹಳ್ಳಿ:

    ಲಾಕ್ಡೌನ್ ಸಡಿಲದ ಸಮದರ್ಭದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳುವಳಿಕೆ ಸಭೆಯನ್ನು ಪಿಎಸ್‍ಐ ಪಿ. ಶಿವಪ್ಪ ನಡೆಸಿದರು.

      ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಭೆಯು ಪಿಎಸೈ ಪಿ. ಶಿವಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ ಕೊರೊನಾ ವೈರಾಣು ವಿರುದ್ದ ಹೋರಾಟದಲ್ಲಿ ಲಾಕ್‍ಡೌನ್ ನಿಯಮ ಜಾರಿಗೆ ಬಂದಿದ್ದು ಈಚೆಗೆ ಇದನ್ನು ಹಂತಹಂತವಾಗಿ ಸಡಿಲಗೊಳಿಸಲಾಗಿದೆ.

      ಇದರ ಮುಂದುವರಿಕೆಯ ಭಾಗದಂತೆ ಆಟೋ ಹಾಗೂ ಟ್ಯಾಕ್ಸಿಗಳಿಗೆ ರಸ್ತೆಯಲ್ಲಿ ಓಡಾಡಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ. ವಾಹನಗಳಲ್ಲಿ ಎಲ್ಲಾ ರೀತಿಯ ದಾಖಲಾತಿಗಳಿರಬೇಕು. ಆಟೋ ಚಾಲಕರಿಗೂ ಹಾಗೂ ಪ್ರಯಾಣಿಕರಿಗೂ ನಡುವೆ ಅಂತರದ ಪಟ್ಟಿಯನ್ನು ಹಾಕಿಕೊಳ್ಳಬೇಕು, ಚಾಲಕ ಹೊರತಾಗಿ ಇಬ್ಬರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ.

      ಎಲ್ಲರೂ ಮಾಸ್ಕ್ ದರಿಸುವುದು ಕಡ್ಡಾಯ, ಪ್ರಯಾಣಿಕರನ್ನು ಆಟೋ ಹಾಗೂ ಟ್ಯಾಕ್ಸಿಗಳಿಗೆ ಹತ್ತಿಸಿಕೊಳ್ಳಬೇಕಾದರೆ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಕೆಲ ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಚಾಲಕರು ನಮಗೆ ಮಾಹಿತಿ ನೀಡಿಬೇಕು ಹಾಗೂ ಸಂಶಯಾಸ್ಪದ ಹಾಗೂ ಹೊಸಬರ ಬಗ್ಗೆಯೂ ಮಾಹಿತಿಯನ್ನು ನಮ್ಮಲ್ಲಿ ವಿನಿಮಯಮಾಡಿಕೊಳ್ಳಬೇಕಿದೆ. ಜೊತೆಗೆ ದಿನವೂ ತಮ್ಮ ವಾಹನಗಳನ್ನು ತೊಳೆಯಬೇಕು ಈ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಕೊರೊನಾ ಸೋಂಕಿನ ಹರಡುವಿಕೆಯ ತಡೆಗೆ ನೀವೆಲ್ಲರೂ ನಮ್ಮೊಂದಿಗೆ ಕೈ ಜೋಡಿಸಬೇಕೆಂದರು. ಗಾರ್ಮೆಂಟ್ಸ್‍ಗಳಿಗೆ ಜನರನ್ನು ಸಾಗಿಸುವ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟ್‍ಗಳನ್ನು ಹಾಕಿಕೊಂಡು ಹೋಗುವ ಅನಿವಾರ್ಯತೆಯುಂಟಾಗಿದ್ದು ಇದನ್ನು ನಿಭಾಯಿಸುವುದು ನಮಗೆ ಹೆಚ್ಚಿನ ಸವಾಲಾಗಿ ಪರಿಣಮಿಸಿದೆ ಎಂದರು.

(Visited 22 times, 1 visits today)