ಮಧುಗಿರಿ:

      ಚಿತ್ರನಟ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವುದಕ್ಕೆ ತಾಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ.
ಪ್ರತೀ ವರ್ಷವೂ ಜಾತ್ರೆ ಬರುತ್ತಿದ್ದರು : ಪ್ರತೀ ವರ್ಷ ಮಾರ್ಚ್ ಮಾಹೆಯಲ್ಲಿ ನಡೆಯುತ್ತಿದ್ದ ಜಾತ್ರಾ ಉತ್ಸವಕ್ಕೆ ಒಂದು ದಿನ ಮುಂಚಿತವಾಗಿ ಅರ್ಜುನ್ ಸರ್ಜಾ, ದೃವ ಸರ್ಜಾ ಕುಟುಂಬ ಸಮೇತ ಚಿರಂಜೀವಿ ಸರ್ಜಾ ಆಗಮಿಸಿ ಜಾತ್ರಾ ಉತ್ಸವಗಳಲ್ಲಿ ಭಾಗವಹಿಸುತ್ತಿದ್ದರು. ಈ ವರ್ಷವೂ ಮಾರ್ಚಿ. 9 ರಂದು ನಡೆದ ಜಾತ್ರಾ ಉತ್ಸವದಲ್ಲಿ ಪತ್ನಿ ಮೇಘನಾ ರಾಜ್ ರೊಂದಿಗೆ ಭಾಗವಹಿಸಿದ್ದರು.

ಭಾವುಕರಾದ ಅಜ್ಜಿ :

      ಜಕ್ಕೇನಹಳ್ಳಿ ದೇವಸ್ಥಾನ ನೇತೃತ್ವವನ್ನು ವಹಿಸಿ ಕೊಂಡಿರುವ ಚಿರಂಜೀವಿ ಸರ್ಜಾ ಅಜ್ಜಿ ಲಕ್ಷ್ಮೀ ದೇವಮ್ಮ ಜಕ್ಕೇನಹಳ್ಳಿಯಲ್ಲಿ ವಾಸವಾಗಿದ್ದು, ಮೊಮ್ಮೊಗನ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ಬೆಂಗಳೂರಿನಲ್ಲಿ ನೆಲೆಸಿದ್ದ ಇವರು ಜೂ. 8 ರಂದು ಸರ್ಕಾರ ದೇವಸ್ಥಾಗಳನ್ನು ತೆರೆಯಲು ಅನುಮತಿ ನೀಡಿರುವುದರಿಂದ ಭಾನುವಾರವಷ್ಟೇ ತಮ್ಮ ಸ್ವಗ್ರಾಮಕ್ಕೆ ವಾಪಾಸಾಗುತ್ತಿದ್ದರು.

       ಆದರೆ ಮೊಮ್ಮೊಗನ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದು, ಮತ್ತೆ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ

ಗ್ರಾಮದಲ್ಲಿ ಶೋಕದ ವಾತಾವರಣ :

      ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದಿಂದಾಗಿ ಜಕ್ಕೇನಹಳ್ಳಿ ಗ್ರಾಮಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದು, ಎರಡು ತಿಂಗಳ ಹಿಂದೆ ಗ್ರಾಮದಲ್ಲಿ ನಡೆದ.ಅಹೋಬಲ ಲಕ್ಷ್ಮಿ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ತಮ್ಮ ಪತ್ನಿ ಮತ್ತು ಕುಟುಂಬದವರೊಂದಿಗೆ ಉತ್ಸಾಹದಿಂದ ಪಾಲ್ಗೊಂಡಿದ್ದರು.

      ಪ್ರತಿ ವರ್ಷ ಜಾತ್ರೆ ಸಮಯದಲ್ಲಿ ಅಗಮಿಸಿ ಕಳಸಹೊರುವ ಮುಲಕ. ತೇರು ಎಳೆಯುತಿದ್ಗರು ನಿಧನವಾರ್ತೆ ಕೇಳಿ ಬಂದಿದ್ದು, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿಯುತ್ತಾರೆ ಗ್ರಾಮಸ್ಥರು.

(Visited 16 times, 1 visits today)