ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಾನೇ ಮುಖ್ಯಮಂತ್ರಿ: ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಮುಖ್ಯಮಂತ್ರಿಯಾಗುವುದು ಖಚಿತ. ದಾವಣಗೆರೆ ದಕ್ಷಿಣದಿಂದ ಮುಂದೆ ಸ್ಪರ್ಧಿಸೋಕೆ ನನ್ನ ಬಳಿ ಹಣ ಇಲ್ವಾ?, ನನ್ನ ಬಳಿ ಶಕ್ತಿ ಇಲ್ವಾ..? ಮುಂದೆ ಪಕ್ಷ ಅಧಿಕಾರಕ್ಕೆ ಬಂದ್ರೆ ನಾನು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ ಡಿಕೆ ಶಿವಕುಮಾರ್- ಸಿದ್ದರಾಮಯ್ಯ ಜೊತೆ ನನ್ನದೂ ಸ್ಪರ್ಧೆ ಇದೆ. ದಾವಣಗೆರೆ ಉತ್ತರದಿಂದ ಸ್ಪರ್ಧೆ ಮಾಡೋ ಬಗ್ಗೆ ಸಿಎಂ ಬೊಮ್ಮಾಯಿ ನನ್ನ ಜೊತೆ ಮಾತನಾಡಿಲ್ಲ. ಅವರು ವಿರೋಧ ಪಕ್ಷದವರು ನನ್ನ ಜೊತೆ ಯಾಕೆ ಮಾತಾಡ್ತಾರೆ. ಮುಂದಿನ ತಿಂಗಳು ಏಪ್ರೀಲ್ 16ಕ್ಕೆ ಮೊಮ್ಮಗಳ ಮದುವೆಗೆ ಸಿಎಂ ಬರುತ್ತಾರೆ ಊಹಾಪೋಹಕ್ಕೆ ಎಡೆಮಾಡಿಕೊಡದಿರಿ ಎಂದರು.

(Visited 45 times, 1 visits today)

Related posts