ಚಿಕ್ಕನಾಯಕನಹಳ್ಳಿ:

      ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸೂಕ್ತ ಸಲಹೆ ನೀಡಿದರು.

      ಪಟ್ಟಣದ ಹೊಸಬೀದಿ ಬಳಿಯ ಹಿರಿಯಣ್ಣನ ಹಟ್ಟಿವಾಸಿ ಮಹಿಳೆಯೊಬ್ಬರಿಗೆ ಕೊರೊನಾ ಧೃಡಪಟ್ಟ ಹಿನ್ನಲೆಯಲ್ಲಿ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಸದರಿ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಭೇಟಿ ನೀಡಿ ಸ್ಥಳಪರೀಶೀಲಿಸಿದರು. ನಂತರ ತಹಸೀಲ್ದಾರ್, ಆರೋಗ್ಯ ಸಿಬ್ಬಂದಿ, ಪುರಸಭಾ ಅಧಿಕಾರಿವರ್ಗ ಹಾಗೂ ಪೊಲೀಸ್ ಸಿಬ್ಬಂದಿಗೆ ಹಲವು ನಿರ್ದೇಶನ ನೀಡಿದರು.

     ಮೊದಲ ಪ್ರಕರಣದಿಂದ ಪಟ್ಟಣದ ಜನತೆ ಭಯಭೀತಗೊಂಡಿರುವ ಹಿನ್ನಲೆಯಲ್ಲಿ ಜನರಿಗೆ ಸೂಕ್ತ ತಿಳುವಳಿಕೆ ಅಗತ್ಯವಿದೆ, ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗ್ರತೆ ಹಾಗೂ ರಕ್ಷಣಾತ್ಮಕ ಕ್ರಮಗಳ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಜನರನ್ನು ಭಯ ಹಾಗೂ ಭೀತಿಯಿಂದ ಮುಕ್ತಗೊಳಿಸಬೇಕಿದೆ ಎಂದರು.

      ಈವರೆಗೂ ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿರುವ 16 ಮಂದಿಯ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರಪೈಕಿ 14 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಸೋಕಿತ ಮಹಿಳೆಯು ಗಾರೆ ಕೆಲಸಕ್ಕೆ ಬೇರೆ ಬೇರೆ ಪ್ರದೇಶಕ್ಕೆ ಹೋಗಿಬರುತ್ತಿದ್ದ ಕಾರಣ ಆ ಪ್ರದೇಶದಲ್ಲಿನ ಕೆಲವರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ, ಆಕೆಯ ಮಗಳು ಗಾರ್ಮೆಂಟ್‍ಗೆ ತೆರಳುತ್ತಿದ್ದ ಕಾರಣ ಆಟೋ ಸಹಪ್ರಯಾಣಿಕರ ತಪಾಸಣೆ ನಡೆಸಲಾಗಿದೆ. ಸೋಂಕಿತ ಮನೆಗೆ ಈಚೆಗೆ ಹೊರಗಿನಿಂದ ಬಂದು ಹೋಗಿರುವವರ ವಿವರಗಳನ್ನು ಕಲೆ ಹಾಕುಲಾಗುತ್ತಿದೆ.

      ಕಂಟೊನ್ಮೇಟ್ ವಲಯದಲ್ಲಿ ಸರ್ವೆ:

      ಕೊರೊನಾ ಸೋಂಕು ತಗುಲಿದ ಮಹಿಳೆಯ ಮನೆಯ ಸುತ್ತಲಿನ ಪ್ರದೇಶದಲ್ಲಿ ಮನೆಗಳು, ಸದಸ್ಯರುಗಳ ವಿವರಗಳನ್ನು ಆರೋಗ್ಯ ಸಿಬ್ಬಂದಿ ಕಲೆ ಹಾಕಲಾಗುತ್ತಿದೆ. ಈ ಭಾಗದಲ್ಲಿನ 10 ವರ್ಷದ ಕೆಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ದರು ಮತ್ತು ವಿವಿಧ ರೋಗಲಕ್ಷಣದಿಂದ ಬಳಲುತ್ತಿರುವವರ ವಿವರಗಳನ್ನು ಎರಡು ತಂಡದೊಂದಿಗೆ ಕಲೆಹಾಕಲಾಗುತ್ತಿದೆ. ಆರೋಗ್ಯದ ತೊಂದರೆಯಿರುವವರಿಗೆ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

     ದೆಹಲಿಯಿಂದ ಬಂದ ಐವರನ್ನು ಕ್ವಾರಂಟೈನ್: ಪಟ್ಟಣದ ಧರ್ಮಾವರ ಬೀದಿಯಲ್ಲಿ ಐವರು ದೆಹಲಿಯಿಂದ ಆಗಮಿಸಿರುವ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆಯವರು ಅವರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

      ಮಾಧ್ಯಮದವರಿಗೆ ಮಾಹಿತಿಯಿಲ್ಲ: ಜಿಲ್ಲಾಧಿಕಾರಿಯವರ ಭೇಟಿಯ ಬಗ್ಗೆ ತಾಲ್ಲೂಕು ಆಡಳಿತದಿಂದ ಯಾವುದೇ ಮಾಧ್ಯಮದವರಿಗೆ ಮಾಹಿತಿಯಿಲ್ಲದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತಾಲ್ಲೂಕು ಆಡಳಿತ ಪ್ರಮುಖ ಘಟ್ಟಗಳಲ್ಲಿ ಮಾಧ್ಯಮದರವನ್ನು ದೂರವಿಡುವ ಪರಿಪಾಟದಿಂದ ಸಮಾಜಕ್ಕೆ ಸ್ಪಷ್ಟ ಮಾಹಿತಿ ರಮಾನೆಯಾಗದೆ ಗೊಂದಲ ಸೃಷ್ಠಿಯಾಗುತ್ತಿದೆ. ಊಹಾಪೋಹಗಳು ವಿಜೃಂಭಿಸುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ, ದೂರವಾಣಿಯ ಮೂಲಕ ಸ್ಪಷ್ಣಣೆ ನೀಡಿದ ಅವರು ಮುಂದೆ ಇಂತಹ ತಪ್ಪುಗಳಾಗದಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡುವುದಾಗಿ ಭರವಸೆಯಿತ್ತರು.

      ಆದರೆ ಜಿಲ್ಲಾಧಿಕಾರಿಯವರು ಆದೇಶ ನೀಡಿ ಎರಡುದಿನ ಕಳೆದರೂ ತಾಲ್ಲೂಕು ಆಡಳಿತದಿಂದ ಸಾರ್ವಜನಿಕರಿಗೆ ಭಯಮುಕ್ತ ವಾತಾವರಣ ನಿರ್ಮಿಸುವ ಯಾವುದೇ ಪ್ರÀಯತ್ನ ನಡೆದಿಲ್ಲ. ಡಿಸಿಯವರ ಆದೇಶಕ್ಕೂ ಬೆಲೆಯಿಲ್ಲದಂತಾಗಿರುವುದು ಸ್ಥಳೀಯ ಆಡಳಿತದ ಹೆಜ್ಜೆಯ ಬಗ್ಗೆ ಜನರಲ್ಲಿ ಸಂದೇಹ ಮೂಡಿಸಿದೆ.

(Visited 12 times, 1 visits today)