ತುಮಕೂರು :

      ಜಿಲ್ಲೆಯಲ್ಲಿ ಇಂದು ಒಂದೇ ದಿನ ಹೊಸದಾಗಿ‌ 9 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು ಸೊಂಕಿತರ ಸಂಖ್ಯೆ 25 ಕ್ಕೆರಿದೆ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಮುಂಬೈ ನಿಂದ ತುರುವೆಕೆರೆಗೆ ವಾಪಾಸಾಗಿರುವ ನಾಲ್ಕು ಜನರಿಗೆ ಕೋವಿಡ್ 19 ದೃಡಪಟ್ಟಿದ್ದು ಪಿ 1611 ಹೆಣ್ಣು 29 ವರ್ಷ, ಪಿ 1612 ಗಂಡು 39 ವರ್ಷ, ಪಿ1613 ಗಂಡು 10 ವರ್ಷ, ಪಿ 1614 ಗಂಡು 21 ವರ್ಷ ಎಂದು ಗುರುತಿಸಲಾಗಿದೆ. ನಾಲ್ವರನ್ನ ತುರುವೆಕೆರೆಯಲ್ಲಿ ಕ್ವಾರೈಂಟೈನ್ ಮಾಡಲಾಗಿತ್ತು ನೆನ್ನೆ ತುಮಕೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

      ಮುಂಬೈ ಮಹಾರಾಷ್ಟ್ರದಿಂದ ತುಮಕೂರಿಗೆ ಬಂದಿದ್ದ ಇಬ್ಬರಿಗೆ ಪಾಸಿಟಿವ್ ಬಂದಿದ್ದು ಪಿ 1615 ಗಂಡು 08 ವರ್ಷ, ಪಿ 1623 ಗಂಡು 60 ವರ್ಷ ಎಂದು ಗುರುತಿಸಲಾಗಿದೆ. ಕ್ವಾರೈಂಟೈನ್ ನಲ್ಲಿದ್ದ ಇವರಿಗೆ ಇಂದು ಪಾಸಿಟಿವ್ ಬಂದಿದ್ದು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

      ತುಮಕೂರಿನ ಸದಾಶಿವನಗರದ 24 ವರ್ಷದ ಗರ್ಭಿಣಿ ಮಹಿಳೆಗೆ ಕೋವಿಡ್ 19 ಸೊಂಕು ಕಾಣಿಸಿಕೊಂಡಿದೆ‌. ನೆನ್ನೆ ರಾತ್ರಿ ಅವರನ್ನ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು ಹೆರಿಗೆಯಾಗಿದೆ ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

      ಇನ್ನೂ ತುಮಕೂರು ತಾಲ್ಲೂಕಿನ ಹೆಬ್ಬೂರಿನ 66 ವರ್ಷದ ವೃದ್ದ ಪಿ1685 ಉಸಿರಾಟ ಸಮಸ್ಯೆ ಯಿಂದ ಸಿದ್ದಗಂಗಾ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು ಅವರನ್ನ ಜಿಲ್ಲಾಸ್ಪತ್ರೆ ದಾಖಲಿಸಿ ಕೋವಿಡ್ 19 ತಪಾಸಣೆಗೆ ಒಳಪಡಿಸಲಾಗಿದ್ದು ಇಂದು ಪಾಸಿಟಿವ್ ಬಂದಿದೆ.

      ಮತ್ತೊಬ್ಬರು ದಾಬಸ್ ಪೇಟೆ ಮೂಲದ 55 ವರ್ಷದ ವೃದ್ದೆ ಪಿ 1686 ತುಮಕೂರು ಕೋವಿಡ್ ಆಸ್ಪತ್ರೆ ಬಂದು ದಾಖಲಾಗಿದ್ದು ಕೋವಿಡ್ 19 ಪಾಸಿಟಿವ್ ದೃಡಪಟ್ಟಿದೆ.

      ತುಮಕೂರಿನಲ್ಲಿ ಸದಾಶಿವನಗರ ಹಾಗೂ ಹೆಬ್ಬೂರು ಗ್ರಾಮದಲ್ಲಿ ಸೊಂಕಿತರು ವಾಸವಿದ್ದ ಪ್ರದೇಶಗಳನ್ನು ಕಂಟೇನ್ ಮೆಂಟ್ ಝೋನ್ ಮಾಡಲಾಗಿದೆ.

      ಹೊರ‌ಜಿಲ್ಲೆ ಹಾಗೂ ರಾಜ್ಯದಿಂದ ಜಿಲ್ಲೆಗೆ ಆಗಮಿಸುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ 19 ಪಾಸಿಟಿವ್ ಕಂಡುಬರುತ್ತಿದ್ದು ಜನರು ಅಕ್ಕ ಪಕ್ಕದ ಮನೆಗಳಲ್ಲಿ ಹೊರಜಿಲ್ಲೆಗಳಿಂದ ಬಂದವರಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು, ಸಾರ್ವಜನಿಕರು ಅನಾವಶ್ಯಕವಾಗಿ ಹೊರಗೆ ಬರಬಾರದು ಅವಶ್ಯಕತೆಯಿದ್ದಲ್ಲಿ ಮಾತ್ರ ಮಾಸ್ಕ್ ಧರಿಸಿ‌ ಬರಬೇಕು‌ ಎಂದು ಜಿಲ್ಲಾಧಿಕಾರಿ‌ಗಳು‌ ಮನವಿ ಮಾಡಿದ್ದಾರೆ.

(Visited 205 times, 1 visits today)