ದಲಿತ ಮುಖಂಡನ ಕೊಲೆ: 13 ಮಂದಿ ಆರೋಪಿಗಳ ಬಂಧನ!


ತುಮಕೂರು:


ಜಿಲ್ಲೆಯ ಗುಬ್ಬಿ ಪಟ್ಟಣದ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿ ಕೊಲೆ ಪ್ರಕರಣದ 13 ಮಂದಿಯನ್ನು ಗುಬ್ಬಿ ಪೆÇಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜೂನ್ 15 ರಂದು ಹಾಡು ಹಗಲೇ ರಸ್ತೆಯಲ್ಲಿ ಕುರಿ ಮೂರ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ಕೊಲೆಗಾರರು ತಲೆಮರೆಸಿಕೊಂಡಿದ್ದರು.
ಏಳು ಮಂದಿ ಆರೋಪಿಗಳು ಗುಬ್ಬಿ ಪಟ್ಟಣದ ವರಾಗಿದ್ದು ಉಳಿದ ಆರು ಮಂದಿ ವಿವಿಧ ಜಿಲ್ಲೆಗಳವರೆಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಿಯಲ್ ಎಸ್ಟೇಟ್ ವಿವಾದವೇ ಘಟನೆಗೆವೆನ್ನಲಾಗಿದೆ. ಶಿರಾ ಡಿವೈಎಸ್ಪಿ ಕುಮಾರಪ್ಪ ಇನ್ಸ್ ಪೆಕ್ಟರ್ ಗಳಾದ ನದಾಫ್, ಅವಿನಾಶ್, ರವಿಕುಮಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಆರು ಮಂದಿ ಆರೋಪಿಗಳು ರೌಡಿಶೀಟರ್ ಗಳೆಂದು ಹೇಳಲಾಗಿದೆ.
ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿ ಕೊಲೆ ಪ್ರಕರಣ ಬೆಳಕಿಗೆ ತರುವಲ್ಲಿ ಶ್ರಮಿಸಿದ ಡಿವೈಎಸ್ಪಿ ಕುಮಾರಪ್ಪ ಮತ್ತು ಸಿಬ್ಬಂದಿ ವರ್ಗದ ಕಾರ್ಯವೈಕರಿ ಬಗ್ಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

(Visited 2 times, 1 visits today)

Related posts