ತುಮಕೂರು:

      ಕೊವೀಡ್-19 2ನೇ ಅಲೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್, ವ್ಯಾಕ್ಸೀನೇಷನ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

       ಕೋವಿಡ್ ಸೋಂಕಿತರು ಆಸ್ಪತ್ರೆಗೆ ದಾಖಲಾದ ಕೂಡಲೇ ಚಿಕಿತ್ಸೆ ನೀಡಲು ಟ್ರೈಯೆಜ್ ಮಾಡಬೇಕು. ಇದರಿಂದ ಸೋಂಕಿತರ ಆರೋಗ್ಯ ಸ್ಥಿತಿ ಹಾಗೂ ಅವರಿಗೆ ಅಗತ್ಯವಿರುವ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದರು.
ಟ್ರೈಯೆಜ್ ಅಡಿಯಲ್ಲಿ ರೋಗಿಗಳು ಬಯಸಿದರೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಬೆಡ್, ಐಸಿಯು ಸಿಗದೇ ಇರುವ ಸಂದರ್ಭದಲ್ಲಿ ಕೋವಿಡ್ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ರೋಗಿಯ ಆರೋಗ್ಯ ಸ್ಥಿತಿ ತಿಳಿಯಲು ಅನುಕೂಲವಾಗುವುದು. ಇದನ್ನು ಇಂದಿನಿಂದಲೇ ಜಾರಿಗೆ ಬರುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

        ಜಿಲ್ಲೆಯಲ್ಲಿ ಪ್ರತಿದಿನ 4000 ಕೋವಿಡ್ ಸ್ಯಾಂಪಲ್ ಟೇಸ್ಟ್ ನಡೆಸಬೇಕು. ಚಿಕಿತ್ಸೆಗೆ ಅಗತ್ಯವಿರುವ ಸಲಕರಣೆಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಆರ್‍ಟಿಪಿಸಿಆರ್ ಲ್ಯಾಬ್‍ಗಳನ್ನು ಉನ್ನತೀಕರಿಸಿ ಟೆಸ್ಟ್ ಸ್ಯಾಂಪಲ್ ಹೆಚ್ಚಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಶೇಕಡ 20%ರಷು ಹಾಸಿಗೆ ಮೀಸಲಿಡಬೇಕು. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳನ್ನು ಖಾಯಂ ಆಗಿ ಮೀಸಲಿಡಲು ಕ್ರಮವಹಿಸಿ ಎಂದರು.

       ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜಿಲ್ಲಾ ಅಧಿಕಾರಿ ಡಾ|| ನಾಗೇಂದ್ರಪ್ಪ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 200 ಹಾಸಿಗೆಗಳಿದ್ದು ಈಗಾಗಲೇ 115 ರೋಗಿಗಳು ದಾಖಲಾಗಿದ್ದಾರೆ. 85 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿರಿಸಲಾಗಿದೆ ತಾಲ್ಲೂಕು ಆಸ್ಪತ್ರೆಗಳಲ್ಲೂ ಹಾಸಿಗೆ ಮೀಸಲಿಡುವ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ, ಐಸಿಯು ಸಮಸ್ಯೆ ಎದುರಾದರೆ ಎಬಿಆರ್‍ಕೆ ಕಾರ್ಯಕ್ರಮದ ಅಡಿಯಲ್ಲಿ ನೋಂದಾಯಿಸಿ ಕೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲು ರೇಫರೆಲ್ ಮಾಡಬೇಕು. ಸರ್ಕಾರದ ಆದೇಶದನ್ವಯ ಕೋವಿಡ್ ರೋಗಿಗಳಿಗೆ ಶೇಕಡಾವಾರು ಹಾಸಿಗೆ ಮೀಸಲಿಡಬೇಕು ಮತ್ತು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಇದರಿಂದ ಜಿಲ್ಲಾಸ್ಪತ್ರೆಗೆ ಹೊರೆ ಕಡಿಮೆಯಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

 

(Visited 4 times, 1 visits today)