ಮಧುಗಿರಿ:

      ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಲಯದ ವಾರೆಂಟ್‍ನಿಂದ ಬಂಧಿತನಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಕರೆತಂದ ಕಾರಣ ಕೊಡಗೇನಹಳ್ಳಿ ಪೊಲೀಸ್ ಠಾಣೆ ಮತ್ತು ಮಧುಗಿರಿಯಲ್ಲಿರುವ ಡಿಎಸ್ಪಿ ಕಚೇರಿಯನ್ನು ಶುಕ್ರವಾರ ಸಿಲ್ ಡೌನ್ ಮಾಡಲಾಗಿದೆ.

      ಮಧುಗಿರಿ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಜ್ ಗೋಪಾಲ್ ಫೆಬ್ರವರಿ- ಇಪ್ಪತ್ತು ರಂದು ಪುರವರ ಹೋಬಳಿಯ ಪೂಜಾರಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಎಸ್ಡಿಪಿ ಯೋಜನೆಯಡಿ ನಿರ್ಮಾಣವಾಗುತ್ತಿದ್ದ ಸಿಸಿ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದಿದ್ದಾಗ ಅದೇ ಹೋಬಳಿ ಹುಣಸವಾಡಿ ಗ್ರಾಮದ ವಿಎಸ್ಸೆಸ್ಸೆನ್ ನಿರ್ದೇಶಕ ಅಶ್ವತ್ಥಪ್ಪ ಮತ್ತು ಅವರ ಹಿಂಬದಿ ಸವಾರ ಕೃಷ್ಣಮೂರ್ತಿ ದ್ವಿಚಕ್ರ ವಾಹನದಲ್ಲಿ ಬಂದು ಜಾತಿ ನಿಂದನೆ ಮಾಡುವುದರ ಜೊತೆಗೆ ಹಲ್ಲೆ ಮಾಡಿದ್ದರೆಂದು ಆರೋಪಿಸಿ ಎಂಜಿನಿಯರ್ ರಾಜ್ ಗೋಪಾಲ್ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .

      ಈ ಪ್ರಕರಣದಲ್ಲಿ ನ್ಯಾಯಾಲಯ ಬಂಧನ ವಾರಂಟ್ ನೀಡಿದ್ದರಿಂದ ಶನಿವಾರ ಜುಲೈ ನಾಲ್ಕರಂದು ಆರೋಪಿಯನ್ನು ಕೊಡಗಿನಲ್ಲಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಮಧುಗಿರಿ ಡಿವ್ಯೆಎಸ್‍ಪಿ ಕಚೇರಿಗೆ ಕರೆತರಲಾಗಿತ್ತು. ಈ ಸಂಬಂಧ ಆರೋಪಿಯನ್ನು ತುಮಕೂರಿನ ಜೈಲಿನಲ್ಲಿ ಬಂಧಿಸಲಾಗಿತ್ತು. ಆರೋಪಿಗೆ ಕೊರೊನಾ ಪರೀಕ್ಷೆ ಗೊಳಪಡಿಸಲಾಗಿತ್ತು. ಸೋಂಕು ದೃಢಪಟ್ಟಿದ್ದರಿಂದ ಎರಡು ಪೊಲೀಸ್ ಇಲಾಖೆ ಕಚೇರಿಯನ್ನು ಸಿಲ್ ಡೌನ್ ಮಾಡಲಾಗಿದೆ.

(Visited 57 times, 1 visits today)