ಮಧುಗಿರಿ : ಜೂ.12 ಎಪಿಎಂಸಿ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ!

ಮಧುಗಿರಿ:

      ಇಲ್ಲಿನ ಎಪಿಎಂಸಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿರುವ ಯಾವುದೇ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಚುನಾವಣೆ ಪ್ರಕ್ರಿಯೆ ಜೂನ್ -12 ರಂದಿ ನಡೆಯಲಿದೆ.

      ಈ ಎಪಿಎಂಸಿಯಲ್ಲಿ ಕೃಷಿ ಕ್ಷೇತ್ರದಿಂದ ಹನ್ನೊಂದು, ವರ್ತಕರ ಕ್ಷೇತ್ರದಿಂದ ಒಬ್ಬರು, ಟಿಎಪಿಸಿಎಂಎಸ್ ನಿಂದ ಒಬ್ಬರು ಹಾಗೂ ಕೆಒಎಫ್ ನಿಂದ ಒಬ್ಬರು ಸದಸ್ಯರು ಆಯ್ಕೆ ಯಾಗಿದ್ದು, ಚುನಾವಣೆಯಲ್ಲಿ ಹದಿನಾಲ್ಕು ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಇಬ್ಬರು ಸದಸ್ಯರು ಮಾತ್ರ ಜೆಡಿ ಎಸ್ ನಿಂದ ಆಯ್ಕೆಯಾಗಿದ್ದು ಉಳಿದವರೆಲ್ಲ ಕಾಂಗ್ರೆಸನ್ನು ಬೆಂಬಲಿಸಿರುವುದರಿಂದ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಸಿದ್ದಾಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ಚಿಕ್ಕ ರಂಗಪ್ಪನವರ ಮೃತಪಟ್ಟ ಹಿನ್ನೆಲೆಯಲ್ಲಿ ಹದಿಮೂರು ಸದಸ್ಯರು ಮತದಾನ ಮಾಡಬಹುದಾಗಿದೆ.

      ಕಾಂಗ್ರೆಸ್ ಸದಸ್ಯರುಗಳು ಇಂತಿದ್ದಾರೆ: ಎಂ.ಬಿ .ಮರಿಯಣ್ಣ (ಮಧುಗಿರಿ) ಕೆ.ಬಿ. ರಾಜಕುಮಾರ್ (ಬ್ಯಾಲ್) ಪಿ.ಸಿ. ಕೃಷ್ಣಾರೆಡ್ಡಿ (ಕೊಡಿಗೇನಹಳ್ಳಿ) ರಮಾಬಾಯಿ (ಪುರವರ) ಪಿ.ಟಿ. ಗೋವಿಂದಯ್ಯ (ಐ.ಡಿ.ಹಳ್ಳಿ) ಅಶ್ವತಮ್ಮ (ಕಡಗತ್ತೂರು) ದೊಡ್ಡೀರಪ್ಪ ಶ್ರೀನಿವಾಸ್ (ಮಿಡಿಗೇಶಿ) ತಿಮ್ಮರಾಜು (ಹೊಸಕೆರೆ) ಜೆಡಿಎಸ್ ಡಿ.ಆರ್. ಬಸವರಾಜು (ದೊಡ್ಡೇರಿ) ಅರ್.ಎನ್.ಚಂದ್ರಕುಮಾರ್ (ದಬ್ಬೇಘಟ್ಟ ) ವ್ಯಾಪಾರಗಾರರ ಕ್ಷೇತ್ರದಿಂದ ಜಿ.ಆರ್ .ಶ್ರೀನಾಥ್, ತಾಲ್ಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘ (ಟಿಎಪಿಎಂಎಸ್ )ನಿಂದ ಎನ್. ಸಂಜೀವ ಗೌಡ, ಕೃಷಿ ಹುಟ್ಟುವಳಿ ಸಹಕಾರ ಸಂಘಕ್ಕೆ(ಕೆಒ ಎಫ್) ನಿಂದ ಜಿ. ಕೆ. ತಿಪ್ಪೇಸ್ವಾಮಿ ಈ ಮೂವರು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಇದೆ.

      ಅಧ್ಯಕ್ಷ ಸ್ಥಾನಕ್ಕೆ ಡಿ .ಶ್ರೀನಿವಾಸ್,ಪಿ.ಸಿ. ಕೃಷ್ಣಾರೆಡ್ಡಿ ,ತಿಮ್ಮರಾಜು ಮತ್ತು ರಮಾಬಾಯಿ ಅವರ ಹೆಸರುಗಳು ಪ್ರಬಲವಾಗಿ ಕೇಳಿಬರುತ್ತಿದೆ .ಈ ನಾಲ್ವರಲ್ಲೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆಯಾಗುವ ಸಂಭವವಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಯ ಬಗ್ಗೆ ಮಾಜಿ ಶಾಸಕ ಕೆ.ಎನ್. ರಾಜಣ್ಣನವರ ತೀರ್ಮಾನವೇ ಅಂತಿಮವಾಗಿರುತ್ತದೆ. ಅನುಭವವೋ ,ಪಾರ್ಟಿಯೊ, ಮಹಿಳೆಯೊ, ಕ್ಯಾಸ್ಟ್ರೋ ಯಾವುದು ಮಾನದಂಡವಾಗಲಿದೆ ಕಾದು ನೋಡಬೇಕಾಗಿದೆ.

      ಚುನಾವಣಾ ವೇಳಾಪಟ್ಟಿ: ಜೂನ್ -12 ರಂದು ನಾಮಪತ್ರವನ್ನು ಬೆಳಿಗ್ಗೆ ಹತ್ತರಿಂದ ಹನ್ನೊಂದರವರೆವಿಗೆ ಮಧುಗಿರಿ ಎಪಿಎಂಸಿ ಕಚೇರಿಯಲ್ಲಿ ಸಲ್ಲಿಸಬೇಕು. ಮಧ್ಯಾಹ್ನ ಒಂದು ಗಂಟೆಗೆ ಸಭೆ ಆರಂಭ, ಒಂದರಿಂದ ಒಂದು ಹದಿನೈದಕ್ಕೆ ನಾಮಪತ್ರ ಪರಿಶೀಲನೆ , ಒಂದು ಹದಿನೈದರಿಂದ ಎರಡು ಮೂವತ್ತರವರೆವಗೂ ನಾಮಪತ್ರ ವಾಪಸ್ ಪಡೆಯಲು ಸಮಯ ನಿಗದಿ, ಮದ್ಯಹ್ನಾ ಎರಡು ಮೊವತ್ತಕ್ಕೆ ಅವಶ್ಯವಿದ್ದಲ್ಲಿ ಮತದಾನ, ಮತದಾನ ಮುಕ್ತಾಯದ ನಂತರ ಮತಗಳ ಎಣಿಕೆ, ನಂತರ ಫಲಿತಾಂಶ ಘೋಷಣೆಯಾಗಲಿದೆ.

(Visited 5 times, 1 visits today)

Related posts

Leave a Comment