ಸಾಹಿತ್ಯ ಮಾಂತ್ರಿಕ ಚಿ.ಉದಯಶಂಕರ್ ಜನಿಸಿದ್ದು ಚಟ್ನಿಳ್ಳಿ ಗ್ರಾಮದಲ್ಲಿ

ಗುಬ್ಬಿ:

      ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸಂಗೀತ ಇತಿಹಾಸವನ್ನು ನಿರ್ಮಿಸಿದ ಚಿ.ಉದಯಶಂಕರ್ ಕನ್ನಡ ಹಾಗೂ ಧಾರ್ಮಿಕ ಚಿತ್ರಗೀತೆಗಳಿಗೆ ಸಾಕಷ್ಟು ಸಾಹಿತ್ಯವನ್ನು ಬರೆಯುವ ಮೂಲಕ ಆ ಕಾಲದಲ್ಲಿ ತನ್ನದೇ ಆದ ಹವಾ ಸೃಷ್ಟಿಸಿಕೊಂಡಿದ್ದವರು.

      ಚಿ.ಉದಯಶಂಕರ್ ಡಾ|| ರಾಜ್ ಕುಮಾರ್‍ರವರ ಪ್ರತಿ ಚಿತ್ರಕ್ಕೂ ಕೂಡ ತನ್ನದೇ ಆದ ಸಂಗೀತದ ಮೂಲಕ ಗಮನ ಸೆಳೆದವರು. ಇವರು ಗುಬ್ಬಿ ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಚಿಟ್ನಳ್ಳಿ ಗ್ರಾಮದವರು ಎಂಬುದು ಬಹಳ ವಿಶೇಷವಾಗಿದೆ. ಗ್ರಾಮೀಣ ಭಾಗದ ಪ್ರತಿಯೊಂದು ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮೈಲಿಗಲ್ಲನ್ನ ಸೃಷ್ಟಿಸಿತು.

ತಂದೆ ಸದಾಶಿವಯ್ಯನವರು ಕೂಡ ಕನ್ನಡದ ಸಾಹಿತಿಯಾಗಿದ್ದು, ಮಗ ಚಿ.ಉದಯಶಂಕರ್‍ರವರಿಗೂ ಸಾಹಿತ್ಯದ ಕೃಷಿ ಮುಂದುವರೆಯಿತು ಕನ್ನಡದ ಸುಮಾರು 3ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಂತಹ ಏಕೈಕ ಸಾಹಿತಿ ಎಂದರೆ ಅದು ಚಿ.ಉದಯಶಂಕರ್. ಎಲ್ಲಾ ಸಾಹಿತಿಗಳಂತೆ ಅವರೂ ಕೂಡ ಗಾಂಧಿನಗರದಲ್ಲಿ ಕಷ್ಟ ಬಿದ್ದವರೇ ನಂತರ ಡಾ|| ರಾಜ್‍ಕುಮಾರ್‍ರವರ ಸಂತ ತುಕಾರಾಮ ಚಿತ್ರದ ಮೂಲಕ ಅವರ ಬರೆದ ಸಾಹಿತ್ಯ ಇಡೀ ಕನ್ನಡ ನಾಡಿನ ಗಮನ ಸೆಳೆಯಿತು.ಕೇವಲ ಸಾಹಿತ್ಯ ಮಾತ್ರವಲ್ಲದೆ ಡಾ|| ರಾಜ್‍ಕುಮಾರ್‍ರವರ ಹಲವು ಚಿತ್ರಗಳಿಗೆ ಸಂಭಾಷಣೆಯನ್ನು ನೀಡಿದಂತಹ ಕೀರ್ತಿ ಚಿ.ಉದಯಶಂಕರ್ ಅವರದ್ದು ಡಾ|| ರಾಜ್‍ಕುಮಾರ್‍ರವರ ಸುಮಾರು ಎಂಬತ್ತೆಂಟು ಚಿತ್ರಗಳಿಗೆ ಉದಯಶಂಕರ್ ಅವರು ಸಂಭಾಷಣೆಯನ್ನೂ ಬರೆದಿರುವುದು ಬಹಳ ವಿಶೇಷ ಎನಿಸಿದೆ. ಅವರ ಸಾಹಿತ್ಯ ಸಾಕಷ್ಟು ಸರಳತೆಯಿಂದ ಕೂಡಿದ್ದರಿಂದ ಹಳ್ಳಿಯಿಂದ ನಗರದ ಜನರಿಗೂ ಕೂಡ ಅದರ ಸಾಹಿತ್ಯ ಬಹಳ ಪ್ರೀತಿಯನ್ನ ತರುತ್ತಿತ್ತು.

     ಚಿ.ಉದಯಶಂಕರ್ ಅವರಿಗೆ ಸಾಹಿತ್ಯ ರತ್ನ ಅನ್ನುವ ಬಿರುದು ಕೂಡ ಆಯ್ತು ಮಹಾಸತಿ ಅನುಸೂಯಾ ಸತಿ ಸಾವಿತ್ರಿ ಭಾಗ್ಯದ ಬಾಗಿಲು ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಾ ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ.

      ಚಿ.ಉದಯಶಂಕರ್ ಅವರು ಶಾರದಮ್ಮನವರನ್ನು ಮದುವೆ ಮಾಡಿಕೊಂಡಿದ್ದು 3ಜನ ಮಕ್ಕಳಿದ್ದಾರೆ. ಅದರಲ್ಲಿ ಗುರುದತ್ ಒಬ್ಬ ಕನ್ನಡದ ಒಬ್ಬ ಖ್ಯಾತ ಚಿತ್ರನಟ ಎಂಬುದು ಕೂಡ ಇಲ್ಲಿ ಸ್ಮರಿಸಬೇಕಾಗಿದೆ. ಕನ್ನಡ ಸಿನಿಮಾ ಸಾಹಿತ್ಯ ಕ್ಷೇತ್ರದಲ್ಲಿ ಚಿ.ಉದಯಶಂಕರ್ ಅವರು ಯಾರು ಮುಟ್ಟಲಾಗದ ಎತ್ತರವನ್ನು ಏರಿದರು ಕನ್ನಡದ ಮನಸ್ಸುಗಳನ್ನು ತಮ್ಮ ಸಾಹಿತ್ಯದಿಂದ ತಣಿಸಿದರು. ಸರ್ವಮಾನವ ಸಂಭ್ರಮವೂ ಜುಲೈ ಮೂರರಂದು ಭೌತಿಕವಾಗಿ ಅವರು ನಮ್ಮನ್ನು ಅಗಲಿದರು ಅವರು ಬಿಟ್ಟು ಹೋದ ಸಾವಿರಾರು ಗೀತೆಗಳ ಮೂಲಕ ನಮ್ಮ ನಡುವೆ ಇಂದಿಗೂ ಜೀವಂತವಾಗಿದ್ದಾರೆ ಚಿ.ಉದಯಶಂಕರ್ ಇಂಥ ಮಹಾನುಭಾವ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿಯ ಚಿಟ್ನಳ್ಳಿ ಈಗಿನ ಚಂದ್ರಶೇಖರಪುರದವರು ಎಂದು ಹೇಳಲು ಹೆಮ್ಮೆಯಾಗುತ್ತದೆ ಇತ್ತ ಸಾಧಕನ ಜನ್ಮ ದಿನಾಚರಣೆಯನ್ನು 18-02-2021ರಂದು ಗುಬ್ಬಿ ತಾಲೂಕಿನ ಸಿಎಸ್ ಪುರದಲ್ಲಿ ಅವರ ಪುತ್ಥಳಿ ಅನಾವರಣ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನ ಆಚರಣೆ ಮಾಡಲು ಕನ್ನಡ ರಕ್ಷಣಾ ವೇದಿಕೆ ಹಾಗೂ ಇನ್ನಿತರೆ ಸಂಘಟನೆಗಳು ಮತ್ತು ಅವರ ಅಭಿಮಾನಿಗಳು ಸಿದ್ಧರಾಗಿದ್ದಾರೆ.

 

(Visited 11 times, 1 visits today)

Related posts

Leave a Comment