ತುಮಕೂರು: 

      ಇತಿಹಾಸ ಪ್ರಸಿದ್ಧ ಗೂಳೂರು ಮಹಾಗಣಪತಿ ವಿಸರ್ಜನಾ ಮಹೋತ್ಸವ ಡಿ.11ರಂದು ಶನಿವಾರ ರಾತ್ರಿ 10 ಗಂಟೆಗೆ ನಡೆಯಲಿದೆ. ವಿದ್ಯುದ್ದೀಪಗಳಿಂದ ಅಲಂಕೃತವಾದ ಭವ್ಯ ಹೂಲಿನ ಮಂಟಪದಲ್ಲಿ ಶ್ರೀ ಮಹಾಗಣಪತಿ ಉತ್ಸವ ನಡೆಯಲಿದ್ದು, ತುಮಕೂರಿನ ಶುಭಂ ಶ್ರೀನಿವಾಸನ್ ಜಿ.ವಿ. ಇಂಟರ್ ನ್ಯಾಷನಲ್ ನಾದಸ್ವರ ಮತ್ತು ತುಮಕೂರಿನ ದಿ.ಹೆಚ್.ಆರ್.ಜಯಣ್ಣ ಮತ್ತು ಸಂಗಡಿಗರಿಂದ ಕರಡಿ ಮಜಲು ಮತ್ತು ನಾಸಿಕ್ ಡೋಲು, ಕರ್ನಾಟಕ ಫೈರ್ ವರ್ಕ್ ಅವರಿಂದ ಬಾಣಬಿರುಸು, ಮದ್ದಿನಮರ, ಕರಡಿ ವಾದ್ಯ ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

      ರಾಣೆಬೆನ್ನೂರಿನ ಶ್ರೀ ಹನುಮಾನ್ ನಾಸಿಕ್ ಡೋಲ್, ಹನುಮಂತ ಹಾಗೂ ಚಿಕ್ಕಮಂಗಳೂರಿನ ಶ್ವೇತ ತಂಡದವರಿಂದ ವೀರಗಾಸೆ, ನಂದಿ, ನವಿಲು, ಜಿರಾಫೆ, ಕವಾಡ ಡ್ಯಾನ್ಸ್, ನಕ್ಕಲು ನಲಿಸುವ ಚಾರ್ಲಿ ಡ್ಯಾನ್ಸ್ ಮತ್ತು, ನಂದಿಧ್ವಜ ಕುಣಿತ ವೀರಗಾಸೆ, ಕೀಲುಕುದುರೆ ಡೊಳ್ಳು ಕುಣಿತ ಸೇರಿದಂತೆ ಅನೇಕ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ರಾತ್ರಿ 2 ಗಂಟೆಗೆ 500 ಅಡಿ ಉದ್ದದ ಜೋಗ್‍ಫಾಲ್ಸ್, ನೂರು ಬಾರಿ ಒಡೆಯುವ ಔಟ್ಸ್ ಮತ್ತು ಪ್ಯಾರಾಚೂಟ್‍ಗಳನ್ನು ಏರ್ಪಡಿಸಲಾಗಿದೆ ಎಂದು ಶ್ರೀ ಮಹಾಗಣಪತಿ ಭಕ್ತ ಮಂಡಲಿ ಅಧ್ಯಕ್ಷ ಜಿ.ಎಸ್.ಶಿವಕುಮಾರ್ ತಿಳಿಸಿದ್ದಾರೆ.

(Visited 12 times, 1 visits today)