BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ
  • ಹೆಚ್ಚು ಹಾಲು ಕರಿದ ರೈತರಿಗೆ ೩೦,೦೦೦ ನಗದು ಪ್ರಥಮ ಬಹುಮಾನ
  • ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ
  • ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು
  • ಸಂಸಾರ ಸರಿದೂಗಿಸುವ ಮಹಿಳೆಯು ಸಾಧಕಿಯೇ
  • ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ
  • ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ
  • ಸರ್ಕಾರವು ಪರವಾಗಿ ಭೂಮಾಪಕರ ಹೆಸರಿನಲ್ಲಿ ರೈತಗೆ ಅನ್ಯಾಯ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಧನ್ಯವಾದ ತಿಳಿಸಲು ತಡವಾಗಿ ಬಂದಿದ್ದೇನೆ ನನ್ನನ್ನು ಕ್ಷಮಿಸಿ -ಹೆಚ್.ಡಿ.ದೇವೇಗೌಡ
Trending

ಧನ್ಯವಾದ ತಿಳಿಸಲು ತಡವಾಗಿ ಬಂದಿದ್ದೇನೆ ನನ್ನನ್ನು ಕ್ಷಮಿಸಿ -ಹೆಚ್.ಡಿ.ದೇವೇಗೌಡ

By News Desk BenkiyabaleUpdated:October 03, 2019 7:01 pm

ತುಮಕೂರು:

      ಚುನಾವಣೆಯಲ್ಲಿ ಸೋಲುಗೆಲುವು ಸಾಮಾನ್ಯ, ಕಳೆದ ಲೋಕಸಭಾ ಚುನಾವಣೆಯಲ್ಲಿ 6.5ಲಕ್ಷ ಮತಗಳನ್ನು ನೀಡಿದ ಮತದಾರರಿಗೆ ಧನ್ಯವಾದವನ್ನು ತಿಳಿಸಬೇಕಿತ್ತು, ತಡವಾಗಿ ಬಂದಿದ್ದೇನೆ ನನ್ನನ್ನು ಕ್ಷಮಿಸಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮನವಿ ಮಾಡಿದರು.

      ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಜಿಲ್ಲೆ ಮತದಾರರು ಹಾಗೂ ಮುಖಂಡರು ಸಹಕಾರ ನೀಡಿದ್ದೀರಿ, ಸೋಲನ್ನು ಸ್ಪೂರ್ತಿಯಾಗಿ ಸ್ವೀಕರಿಸಿ, ಪ್ರತಿ ತಾಲ್ಲೂಕಿಗೆ ಹೋಗಿ ಧನ್ಯವಾದ ಹೇಳಬೇಕು ಅದಕ್ಕಾಗಿ ಕಾರ್ಯಕ್ರಮ ರೂಪಿಸುವಂತೆ ಗುಬ್ಬಿ ಶಾಸಕ ವಾಸುಗೆ ಹೇಳಿದ್ದೇ ಏಳು ತಿಂಗಳ ನಂತರ ಜಿಲ್ಲೆಗೆ ಬಂದಿದ್ದೇನೆ, ಪ್ರತಿ ತಾಲ್ಲೂಕಿಗೆ ಹೋಗಿ ಮತದಾರರ ಕಷ್ಟ ಸುಖ ಆಲಿಸುತ್ತೇನೆ ಎಂದು ಹೇಳಿದರು.

       ಮೂರು ವರ್ಷಗಳ ಹಿಂದೆಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದೆ, ಆದರೆ ವಿಧಿ ಇಲ್ಲಿಗೆ ಬಂದು ನಿಲ್ಲುವಂತೆ ಮಾಡಿತು, ಸೋತೆ ಎನ್ನುವ ಸಿಟ್ಟು ನನಗಿಲ್ಲ, ಪಕ್ಷದಲ್ಲಿ ಸಮರ್ಥ ಯುವ ಮುಖಂಡರಿದ್ದಾರೆ, ಪಕ್ಷವನ್ನು ಸಂಘಟಿಸುವ ಮೂಲಕ ಮತ್ತೆ ಅಧಿಕಾರಕ್ಕೆ ತರಬೇಕಿದೆ, ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಜನರು ನಮ್ಮೊಂದಿಗೆ ಇದ್ದಾರೆ, ಪಕ್ಷವನ್ನು ಕಟ್ಟುವ ಕೆಲಸವನ್ನು ಮುಖಂಡರು ಮಾಡಬೇಕಿದೆ ಎಂದರು.

      ನಾನು ಮುಖ್ಯಮಂತ್ರಿಯಾಗಲೂ ತುಮಕೂರು ಜಿಲ್ಲೆಯ ಕೊಡುಗೆ ಜಾಸ್ತಿ ಇದೆ, 9 ಮಂದಿ ಶಾಸಕರನ್ನು ಪಕ್ಷದಿಂದ ಆರಿಸಿ ಕಳುಹಿಸಿದ್ದರಿಂದ ನಾನು ಮುಖ್ಯಮಂತ್ರಿಯಾದೇ, ಯಾವುದೇ ಜಾತಿಗೆ ಸೀಮಿತವಾಗಿ ನಾನು ಕೆಲಸ ಮಾಡಿಲ್ಲ, ಆದರೂ ನನ್ನನ್ನು ಜಾತಿಗೆ ಸೀಮಿತಮಾಡಲಾಗಿದೆ, ಪಕ್ಷದ ಕಾರ್ಯಕರ್ತರ ಕಷ್ಟಗಳಿಗೆ ಮುಖಂಡರು ಸ್ಪಂದಿಸಬೇಕು, ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ದುಡಿದರೆ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಜನರು ಮನಸ್ಸು ಮಾಡಿದರೆ ಯಾವ ದುಡ್ಡು, ಯಾವ ಸುಳ್ಳು ನಡೆಯೋದಿಲ್ಲ, ಸತ್ಯ ನಾಶ ಮಾಡಲು ಆಗುವುದಿಲ್ಲ, ದೇವರ ಆಟ ಚುನಾವಣೆ ಯಾವಾಗಲಾದರೂ ಬರಬಹುದು, ಕಾರ್ಯಕರ್ತರು ಮತ್ತು ಮುಖಂಡರು ಸಜ್ಜಾಗಿರುವಂತೆ ಸೂಚಿಸಿದ ಅವರು, ಎಲ್ಲ ಟೀಕೆಗಳಿಗೆ ಉತ್ತರಿಸಲು ಹೋಗಬೇಡಿ, ಕಾಲ ಬಂದಾಗ ತಕ್ಕ ಉತ್ತರವನ್ನು ನೀಡೋಣ, ಇನ್ನೊಂದು ಚುನಾವಣೆ ಬರುವುದು ಗ್ಯಾರೆಂಟಿ, ಎಲ್ಲ ಕ್ಷೇತ್ರಗಳಿಗೆ ತೆರಳಿ ಪಕ್ಷವನ್ನು ಸಂಘಟಿಸೋಣ ಎಂದರು.

      ದೇಶದಲ್ಲಿ ಆರ್ಥಿಕ ಸಂಕಷ್ಟವಿದೆ, ನೆರೆ ಬಂದು ಎರಡು ತಿಂಗಳಾದರೂ ರಾಜ್ಯಕ್ಕೆ ಪರಿಹಾರ ನೀಡಲಿಲ್ಲ, ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕಿನಿಂದ ಹಣ ಪಡೆದು ಆಡಳಿತ ನಡೆಸುತ್ತಿದೆ, ರಾಜ್ಯದಲ್ಲಿ ಉಂಟಾಗಿರುವ ನೆರೆ ಹಾನಿ ಪರಿಹಾರಕ್ಕಾಗಿ 5 ಸಾವಿರ ಕೋಟಿ ಮಧ್ಯಂತರ ಪರಿಹಾರವನ್ನು ನೀಡುವಂತೆ ಮೋದಿ ಅವರಿಗೆ ಪತ್ರ ಬರೆದರೂ ಉತ್ತರ ಬರಲಿಲ್ಲ, ರಾಜ್ಯಕ್ಕೆ ನೆರೆ ಪರಿಹಾರವನ್ನು ನೀಡದೇ ಹೋದರೆ ಅಧಿವೇಶನವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಮುಖಂಡರಿಗೆ ಕರೆ ನೀಡಿದರು, ಪ್ರತಿಭಟನೆಗೆ ಸ್ಪಂಧಿಸದೇ ಹೋದರೆ ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗುವುದು ಎಂದರು.

      ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ ಪಕ್ಷದ ಕಥೆ ಮುಗಿದು ಹೋಯಿತು ಎನ್ನುವ ಕಷ್ಟದಲ್ಲಿದ್ದಾಗಲೇ ಮತ್ತೆ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ, ಸೋತಾಗ ಕುಗ್ಗದೆ ಹಳ್ಳಿ ಹಳ್ಳಿಗೂ ತೆರಳಿ ಪಕ್ಷವನ್ನು ಸಂಘಟಿಸಿದ್ದರಿಂದಲೇ ರಾಜ್ಯದಲ್ಲಿ ಜೆಡಿಎಸ್ ಉಳಿದು ಕೊಂಡಿದೆ, ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ನಾಶವಾಗುವುದಿಲ್ಲ ಎಂದು ಹೇಳಿದರು.

      ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಎರಡೇ ತಿಂಗಳಲ್ಲಿ ತನ್ನ ಜನವಿರೋಧಿ ನೀತಿಯನ್ನು ತೋರಿಸಿದೆ, ನೆರೆಗೆ ಪರಿಹಾರ ನೀಡಿ ಎಂದರೆ ಸಬೂಬು ಹೇಳಿಕೊಂಡು ತಿರುಗಾಡುತ್ತಿದ್ದಾರೆ, ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿಕೊಂಡು ರಾಜ್ಯವನ್ನು ಅನಾಥವಾಗಿಸಿದ್ದೇವೆ, ದೇವೇಗೌಡರು ಗೆದ್ದಿದ್ದರೆ ಚಿತ್ರಣವೇ ಬದಲಾಗುತ್ತಿತ್ತು ಎಂದ ಅವರು, ಪಕ್ಷದ ಭವಿಷ್ಯದ ದೃಷ್ಠಿಯಿಂದ ಸಂಘಟನೆಗೆ ಮುಂದಾಗುವಂತೆ ಕರೆ ನೀಡಿದರು.

      ಮಾಜಿ ಸಚಿವ ಶ್ರೀನಿವಾಸ್ ಮಾತನಾಡಿ ನೆರೆಗೆ ತುತ್ತಾಗಿ ರಾಜ್ಯ ಸಂಕಷ್ಟದಲ್ಲಿದ್ದರೆ ಕೇಂದ್ರ ಸರ್ಕಾರ ಇತ್ತ ಕಡೆ ಗಮನಕೊಡುತ್ತಿಲ್ಲ, ರಾಜ್ಯದ ಪ್ರತಿನಿಧಿಗಳಾಗಿ 25 ಸಂಸದರನ್ನು ಗೆಲ್ಲಿಸಿ ನಮ್ಮ ಜವಾಬ್ದಾರಿಯನ್ನು ಮರೆತಿದ್ದರಿಂದಲೇ ರಾಜ್ಯಕ್ಕೆ ಇಂದು ಇಂತಹ ಪರಿಸ್ಥಿತಿ ಎದುರಾಗಿದೆ, ಮೋದಿ, ಅಮಿತ್ ಶಾ ಮುಂದೆ ಹೋಗಿ ಮಾತನಾಡಲು ಆಗದವರನ್ನು ಗೆಲ್ಲಿಸಿ ರಾಜ್ಯ ಇಂದು ಕೈಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ, ಜಿಲ್ಲೆಯಿಂದ ದೇವೇಗೌಡರು ಗೆದ್ದಿದ್ದರೆ ರಾಜ್ಯದ ಪರಿಸ್ಥಿತಿ ಇಂದು ಬೇರೆಯೇ ಇರುತ್ತಿತ್ತು ಎಂದರು.

       ದೇವೇಗೌಡರನ್ನು ಬಿಟ್ಟರೆ ಬೇರೆಯವರು ಗೆಲ್ಲೋದಿಲ್ಲ ಎಂಬ ಹುಂಬ ಭರವಸೆಯಿಂದ ಮಾಜಿ ಪ್ರಧಾನಿ ಅವರನ್ನು ಸೋಲಿಸಿದ ಅಪಕೀರ್ತಿಗೆ ಜಿಲ್ಲೆಯ ಮತದಾರರು ಹಾಗೂ ಪಕ್ಷದ ಮುಖಂಡರು ಹೊತ್ತುಕೊಂಡಿದ್ದೇವೆ, ದೇವೇಗೌಡರು ಗೆದ್ದಿದ್ದರೆ ಜಿಲ್ಲೆ ಅಭಿವೃದ್ಧಿಯಾಗುತ್ತಿತ್ತು, ಮುಂದಿನ ಚುನಾವಣೆಯಲ್ಲಿ ದೇವೇಗೌಡರನ್ನು ನಿಲ್ಲಿಸಿ ಗೆಲ್ಲಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ, ಛಲವಾದಿ ದೇವೇಗೌಡರು ಪಕ್ಷವನ್ನು ಮತ್ತೆ ಕಟ್ಟುತ್ತಾರೆ, ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

      ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ ಜೆಡಿಎಸ್ ಪಕ್ಷ ಭದ್ರವಾಗಿದ್ದು, ಜಿಲ್ಲೆಯಲ್ಲಿ ಯಾರು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ, ಕಾರ್ಯ ಕರ್ತರು ಯಾವುದೇ ಗೊಂದಲಕ್ಕೆ ಒಳಗಾಗದೇ ಪಕ್ಷವನ್ನು ಸಂಘಟಿಸಬೇಕು ಎಂದ ಅವರು ಮುಂದಿನ 15 ದಿನದೊಳಗಾಗಿ ಎಲ್ಲ ತಾಲ್ಲೂಕು ಘಟಕಗಳನ್ನು ಪುನರ್‍ರಚಿಸುವ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದರು ಅವರು ಚುನಾವಣೆ ಯಾವಾಗ ಬಂದರೂ ಎದುರಿಸುವಷ್ಟು ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎಲ್ಲ ಮುಖಂಡರೊಂದಿಗೆ ಪಕ್ಷವನ್ನು ಸಂಘಟಿತಗೊಳಿಸುವುದಾಗಿ ತಿಳಿಸಿದರು.

      ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ಶಾಸಕ ಸತ್ಯನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಚೌಡರೆಡ್ಡಿ, ತಿಪ್ಪೇಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಸುಧಾಕರ್ ಲಾಲ್, ಜಿ.ಪಂ ಅಧ್ಯಕ್ಷೆ ಲತಾ, ಮೇಯರ್ ಲಲಿತಾ, ತುಮುಲ್ ಅಧ್ಯಕ್ಷ ಮಹಾಲಿಂಗಪ್ಪ, ಮುಖಂಡರಾದ ಗೋವಿಂದರಾಜು, ಬೋರೇಗೌಡ, ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಉಪಾಧ್ಯಕ್ಷ ದೇವರಾಜು, ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಎಸ್‍ಸಿ ಘಟಕದ ಅಧ್ಯಕ್ಷ ಶಿವಕುಮಾರ್, ಸಿ.ಆರ್.ಉಮೇಶ್, ಬೆಳ್ಳಿ ಲೋಕೇಶ್, ಹಾಲನೂರು ಅನಂತ್ ಕುಮಾರ್, ಸಾಯಿರಾಭಾನು, ಲಕ್ಷ್ಮಮ್ಮ ವೀರಣ್ಣಗೌಡ, ಲೀಲಾವತಿ ಸೇರಿದಂತೆ ಇತರರಿದ್ದರು.

      ಕಾರ್ಯಕ್ರಮದ ಉದ್ಘಾಟನೆ ವೇಳೆ ಮಳೆ ಆಗಮಿಸಿದ್ದರಿಂದ ಕಾರ್ಯಕರ್ತರು ಹಾಗೂ ಮುಖಂಡರುಗಳು ಕುರ್ಚಿಗಳ ಆಶ್ರಯ ಪಡೆದರು, ಮಾಜಿ ಪ್ರಧಾನಿ ದೇವೇಗೌಡ ಅವರು ಛತ್ರಿ ಆಶ್ರಯ ಪಡೆದರು.

(Visited 28 times, 1 visits today)
Previous Articleಮೊದಲು ನಾವು ಬದಲಾಗಿ, ದೇಶ ಬದಲಾಯಿಸೋಣ-ಶಾಸಕ ಜ್ಯೋತಿಗಣೇಶ್
Next Article ಅದ್ಧೂರಿಯಾಗಿ ಜರುಗಿದ 43ನೇ ವರ್ಷದ ಸಿದ್ಧಿ ವಿನಾಯಕ ವಿಸರ್ಜನಾ ಮಹೋತ್ಸವ!
News Desk Benkiyabale

Related Posts

ಹೆಚ್ಚು ಹಾಲು ಕರಿದ ರೈತರಿಗೆ ೩೦,೦೦೦ ನಗದು ಪ್ರಥಮ ಬಹುಮಾನ

March 28, 2026 3:43 pm ತುಮಕೂರು ಜಿಲ್ಲಾ ಸುದ್ಧಿಗಳು

ಸಂಸಾರ ಸರಿದೂಗಿಸುವ ಮಹಿಳೆಯು ಸಾಧಕಿಯೇ

March 28, 2026 3:33 pm ತುಮಕೂರು ಜಿಲ್ಲಾ ಸುದ್ಧಿಗಳು

ಬದುಕಿನ ಜಟಕಬಂಡಿಗೆ ಡಿವಿಜಿ ಕಗ್ಗವೇ ದಾರಿದೀಪ

March 25, 2026 4:58 pm ತುಮಕೂರು ಜಿಲ್ಲಾ ಸುದ್ಧಿಗಳು
ತಾಜಾ ಸುದ್ಧಿಗಳು
ಇತರೆ ಸುದ್ಧಿಗಳು

ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ

March 28, 2026 4:00 pm
ತುಮಕೂರು ಜಿಲ್ಲಾ ಸುದ್ಧಿಗಳು

ಹೆಚ್ಚು ಹಾಲು ಕರಿದ ರೈತರಿಗೆ ೩೦,೦೦೦ ನಗದು ಪ್ರಥಮ ಬಹುಮಾನ

March 28, 2026 3:43 pm
ಇತರೆ ಸುದ್ಧಿಗಳು

ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ

March 28, 2026 3:41 pm
ಇತರೆ ಸುದ್ಧಿಗಳು

ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು

March 28, 2026 3:35 pm
ತುಮಕೂರು ಜಿಲ್ಲಾ ಸುದ್ಧಿಗಳು

ಸಂಸಾರ ಸರಿದೂಗಿಸುವ ಮಹಿಳೆಯು ಸಾಧಕಿಯೇ

March 28, 2026 3:33 pm
ಇತರೆ ಸುದ್ಧಿಗಳು

ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ

March 27, 2026 5:01 pm
Our Youtube Channel
Our Picks

ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ

March 28, 2026 4:00 pm

ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ

March 28, 2026 3:41 pm

ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು

March 28, 2026 3:35 pm

ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ

March 27, 2026 5:01 pm

ಪುನಶ್ಚೇತನಗೊಂಡ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ

March 27, 2026 4:19 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ಇತರೆ ಸುದ್ಧಿಗಳು

ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ

By News Desk BenkiyabaleMarch 28, 2026 4:00 pm

ತುಮಕೂರು: ನಗರದಲ್ಲಿ ಶುಕ್ರವಾರ ಬೆಳಗ್ಗೆ ೧೧ ಕ್ಕೆ ನಾಟಕಮನೆ ತುಮಕೂರುರವರು ಆಯೋಜಿ ಸಿದ್ದ ವಿಶ್ವ ರಂಗಭೂಮಿ ದಿನಾಚರಣೆ-೨೦೨೬ ನಗರದ ಡಾ.…

ಹೆಚ್ಚು ಹಾಲು ಕರಿದ ರೈತರಿಗೆ ೩೦,೦೦೦ ನಗದು ಪ್ರಥಮ ಬಹುಮಾನ

March 28, 2026 3:43 pm

ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ

March 28, 2026 3:41 pm

ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು

March 28, 2026 3:35 pm
News by Date
March 2026
M T W T F S S
 1
2345678
9101112131415
16171819202122
23242526272829
3031  
« Feb    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.