ಸಿದ್ದಗಂಗಾ ಮಠಕ್ಕೆ ದೇವೇಗೌಡರ ಭೇಟಿ !

ತುಮಕೂರು:

      ತುಮಕೂರು ಲೋಕಸಭೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸೋಮವಾರ ಮಧ್ಯಾಹ್ನ 2.15 ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ತಿಳಿಸಿದ್ದಾರೆ.

       ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದರು.

       ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುಮಕೂರಿನಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಇತ್ತು. ಡಿಸಿಎಂ ಜಿ. ಪರಮೇಶ್ವರ್, ಮಾಜಿ‌ ಸಚಿವ ಟಿ.ಬಿ. ಜಯಚಂದ್ರ‌ ಸೇರಿ ಜೆಡಿಎಸ್ ಮುಖಂಡರು ನಾನು ತುಮಕೂರುನಿಂದ ಸ್ಪರ್ಧೆ ಮಾಡುವಂತೆ ತೀರ್ಮಾನ ಮಾಡಿದ್ದಾರೆ. ಪರಮೇಶ್ವರ್​ ಅವರು ಮನೆಗೇ ಬಂದು ನೀವು ತುಮಕೂರಿನಿಂದ ಸ್ಪರ್ಧಿಸಬೇಕು, ನಿಮಗೆ‌ ಬಿಟ್ಟಿರುವ ಸೀಟು ನೀವೆ ನಿಂತು ಕೊಳ್ಳಬೇಕು. ನಾವೆಲ್ಲ ಬೆಂಬಲಿಸುತ್ತೇವೆ ಎಂದಿದ್ದರು ಹಾಗಾಗಿ ನಾಳೆ ನಾಮಪತ್ರ ಸಲ್ಲಿಸುವೆ ಎಂದರು.

 

(Visited 12 times, 1 visits today)

Related posts

Leave a Comment