ಹುಳಿಯಾರು : 

      ಚಿಕ್ಕನಾಯಕನಹಳ್ಳಿ ತಾಲೂಕಿನ ಇಬ್ಬರು ಶಿಕ್ಷಕಿಯರಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಯಿತು.

      ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಳಿಯಾರು ಹೋಬಳಿಯ ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಚ್.ಡಿ.ತೇಜಾವತಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಹಾಗೂ ಹಂದನಕೆರೆ ಹೋಬಳಿಯ ಮಲ್ಲಿಗೆರೆ ಕ್ಲಷ್ಟರ್ ವ್ಯಾಪ್ತಿಯ ಬಂದ್ರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಲಾವತಿ ಅವರಿಗೆ ‘ಗುರುಭೂಷಣ’ ರಾಜ್ಯ ಪ್ರಶಸ್ತಿ ನೀಡಲಾಯಿತು.

      ಶಿಕ್ಷಕಿ ತೇಜಾವತಿ ಅವರು ಕತೆ, ಚುಟುಕು, ಗಜಲ್, ಕವಿತೆ, ಅಂಕಣಗಳನ್ನು ಕರ್ಮವೀರ, ಜನಮಿಡಿತ, ನಂದಿವಿಜಯ, ಕವಿವಾಣಿ, ಪಂಜು, ಶಾಲ್ನುಡಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ‘ಕಾಲಚಕ್ರ’ ಮತ್ತು ‘ಮಿನುಗುವ ತಾರೆ’ ಎಂಬ ಎರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಇದರ ಜತೆ ಕೊರೊನಾ ಸಮಯದಲ್ಲಿ ವಿಡಿಯೋ ಪಾಠ ತಯಾರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.

      ಶಿಕ್ಷಕಿ ಕಲಾವತಿ ಅವರು ಭಾಷಣ, ನಿರೂಪಣೆ, ಏಕಪಾತ್ರಾಭಿನಯ, ಭಾವಗೀತೆಗಳಲ್ಲಿ ಆಸಕ್ತರಾಗಿದ್ದು ಅನೇಕ ಬಹುಮಾನಗಳನ್ನು ಪಡೆದಿದ್ದಾರೆ. ವಿಭಿನ್ನವಾಗಿ ಶಾಲೆಯ ನಲಿಕಲಿಯ ಕೊಠಡಿ ನಿರ್ಮಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಕೊರೊನಾ ಸಂದರ್ಭದಲ್ಲಿ ವಿಡಿಯೋ ಪಾಠ ಮಾಡಿದ್ದಾರಲ್ಲದೆ ಶಿಕ್ಷಕರಿಗೆ ತರಬೇತಿ ಸಹ ಕೊಟ್ಟಿದ್ದಾರೆ.  ಇವರಿಬ್ಬರ ಈ ಕಲೆ, ಸಾಹಿತ್ಯ, ಸಂಸ್ಕøತಿಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

 

(Visited 89 times, 1 visits today)