ಹುಳಿಯಾರು : ಜಿಲ್ಲೆಯ ಗಡಿಯಲ್ಲಿ ಚೆಕ್‍ಪೋಸ್ಟ್

ಹುಳಿಯಾರು : 

       ಲಾಕ್‍ಡೌನ್ ನಿಯಮ ಪಾಲನೆ ಅನ್ವಯ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿ ಭಾಗವಾದ ಹುಳಿಯಾರು ಹೋಬಳಿಯ ಯಳನಾಡು, ಕೆಂಕೆರೆ ಹಾಗೂ ಹಂದನಕೆರೆ ಹೋಬಳಿಯ ದೊಡ್ಡಎಣ್ಣೇಗೆರೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ತೆರೆಯಲಾಗಿದೆ.

      ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯಿಂದ ಬರುವ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅನಗತ್ಯವಾಗಿ ಓಡಾಡುವವರನ್ನು ಎಚ್ಚರಿಸಿ ಕಳುಹಿಸಲಾಗುತ್ತಿದೆ. ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ 8 ಗಂಟೆಗೆ ಒಂದು ಬ್ಯಾಚ್‍ನಂತೆ ಪಾಳಿಯ ಪ್ರಕಾರ ಈ ಚೆಕ್ ಪೋಸ್ಟ್‍ನಲ್ಲಿ ಕೆಲಸ ಮಾಡಲಿದ್ದಾರೆ.

ಬೆಳಿಗ್ಗೆ 10 ಗಂಟೆ ವರೆವಿಗೂ ವಾಹನಗಳ ಓಡಾಟಕ್ಕೆ ಅವಕಾಶವಿದ್ದು ನಂತರ ಬರುವ ವಾಹನಗಳನ್ನು ತಡೆಹಿಡಿಯಲಾಗುತ್ತದೆ. ಹಾಲು, ಹಣ್ಣು, ಧಾನ್ಯ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ವಾಹನಗಳಿಗೆ ವಿನಾಯಿತಿ ಇದೆ. ತಾಲೂಕಿನ ನಿವಾಸಿಗಳ ಬೈಕ್ ಸಂಚಾರಕ್ಕೆ ಮಾತ್ರ ಅವಕಾಶವಿದ್ದು ಬೇರೆ ತಾಲೂಕಿನ ಬೈಕ್‍ಗಳಿಗೂ ಓಡಾಟಕ್ಕೆ ನಿಷೇಧ ಇದೆ.

      ಇಲ್ಲಿನ ಸಿಬ್ಬಂಧಿಗಳಿಗೆ ಊಟ, ತಿಂಡಿ, ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗಿದೆ. ನೆರಳಿಗೆ ಶಾಮಿಯಾನ, ಕುಳಿತುಕೊಳ್ಳಲು ಚೇರುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಚೆಕ್‍ಪೊಸ್ಟ್ ಮೂಲಕ ಓಡಾಡುವ ಪ್ರತಿಯೊಂದು ವಾಹನಗಳ ಸಂಖ್ಯೆ, ಚಾಲಕನ ಹೆಸರು, ದೂರವಾಣಿ ನಂಬರ್ ಸೇರಿದಂತೆ ವಿವಿಧ ದಾಖಲಾತಿ ಸಂಗ್ರಹಿಸಲಾಗುತ್ತಿದೆ.

(Visited 2 times, 1 visits today)

Related posts

Leave a Comment