ಕೊರಟಗೆರೆ:

     ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಪ್ರತಿಕಾರಂಗ ಆಧುನಿಕತೆಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳಿಗೆ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ ಎಂದು ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.

     ತಾಲ್ಲೂಕಿನ ಸಿದ್ದರಬೆಟ್ಟ ಕ್ಷೇತ್ರದ ರಂಭಾಪುರಿ ಖಾಸಾಶಾಖಾ ಮಠದ ಜಗತ್ ಗುರು ಶ್ರೀ ರೇಣುಕಾಚಾರ್ಯ ಮಂದಿರದಲ್ಲಿ ತಾಲೂಕು ಕಾರ್ಯಾನಿರತ ಪತ್ರಕರ್ತರ ಸಂಘ ವತಿಯಿಂದ ನಡೆದ ಕಾರ್ತಿಕ ದೀಪೋತ್ಸವ ಮತ್ತು ರಾಜ್ಯೋತ್ಸವ ಪುರಸ್ಕøತರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.

      ಜಾತಿ ಮತ್ತು ರಾಜಕೀಯ ಒತ್ತಡಗಳಿಂದ ನೈಜ, ವಾಸ್ಥವ ಹಾಗೂ ಸತ್ಯ ಸುದ್ದಿಗಳನ್ನು ಪ್ರಚಾರ ಮಾಡುವುದು ಕಷ್ಟವಾಗುತ್ತಿದ್ದು, ಕೊರಟಗೆರೆ ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗಗಳಲ್ಲಿ ಪತ್ರಿಕಾರಂಗವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ.   

      ಪ್ರತಿ ವರ್ಷವು ಶ್ರೀ ಮಠದಿಂದ ಪತ್ರಿಕಾ ರಂಗದಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಿಗೆ ಗೌರವಿಸಿಕೊಂಡು ಬರುತ್ತಿದ್ದು ಇಂದು ಜಿಲ್ಲಾ ಪ್ರಜಾಟಿವಿ ವರದಿಗಾರರು ನಮ್ಮ ತಾಲ್ಲೂಕಿನವರಾದ ಕೆ.ಪಿ.ಯಶಸ್ಸ್ ರವರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

      ಕರ್ನಾಟಕ ಕಾರ್ಯ ನಿರತ ಸಂಘದ ತಾ.ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಹಲವು ವರ್ಷಗಳಿಂದ ಶ್ರೀಮಠದಲ್ಲಿ ಸಂಘದ ವತಿಯಿಂದ ಕಾರ್ತಿಕದೀಪೋತ್ಸವ ಪೂಜೆಯೊಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಮತ್ತು ವಿವಿಧ ಸಾಧನೆ ಮಾಡಿದ ಪತ್ರಕರ್ತರುಗಳಿಗೆ ಶ್ರೀಮಠದಿಂದ ಗೌರವ ಸಲ್ಲಿಸಲಾಗುತ್ತಿದೆ.

      ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಸ್ವಾಮೀಜಿಯವರ ನೇತೃತ್ವದಲ್ಲಿ ಫ್ರೇಂಡ್ಸ್‍ಗ್ರೂಪ್ ಸೇವಾಸಮಿತಿ ಸೇರಿದಂತೆ ಇನ್ನಿತರ ಸಂಘಟನೆಗಳ ಜೊತೆಗೂಡಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಕಾರ್ಯಕ್ರಮ, ಕೊರೋನಾ ಸಮಯದಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡುವ ಸೇವೆ ಸೇರಿದಂತೆ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಇದು ಹೀಗೆ ಮುಂದುವರೆಯುತ್ತದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ಪತ್ರಕರ್ತರಾದ ಎನ್.ಪದ್ಮನಾಭ್, ಡಿ.ಎಂ.ರಾಘವೇಂದ್ರ, ಎನ್.ಮೂರ್ತಿ, ನಾಗರಾಜು, ಬಿ.ಹೆಚ್ ಹರೀಶ್‍ಬಾಬು, ರಾಜು, ದೇವರಾಜು, ಕೆ.ಬಿ.ಲೋಕೇಶ್, ತಿಮ್ಮರಾಜು, ಲಕ್ಷ್ಮೀಶ್, ನರಸಿಂಹಮೂರ್ತಿ, ಮುಖಂಡರಾದ ಶಿವಣ್ಣ, ಸಿದ್ದಣ್ಣ, ಪ್ರಕಾಶಚಾರ್, ಶ್ರೀಕಾಂತ್ ಸೇರಿದಂತೆ ಇತರರು ಇದ್ದರು.

(Visited 10 times, 1 visits today)