ಕೊರಟಗೆರೆ : 

      ಪಟ್ಟಣದ 4ನೇ ವಾರ್ಡಿನ ಗಿರಿನಗರದಲ್ಲಿ ಮದ್ಯಾಹ್ನ 2 ಗಂಟೆ ಸುಮಾರಿನಲ್ಲಿ ಗುಡಿಸಲುಗಳಿಗೆ ಬೆಂಕಿ ಬಿದ್ದ ಪರಿಣಾಮ ಗುಡಿಸಲು ನಾಲ್ಕು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಡೆದ್ದಿದೆ.

ಗುಡಿಸಲಲ್ಲಿದ್ದ ದವಸ ಧಾನ್ಯ ಪಡಿತರ ಚೀಟಿ, ಆಧಾರ್ ಕಾರ್ಡ್ ಇನ್ನು ಇತರ ದಾಖಲೆ ಪತ್ರಗಳನ್ನು ಬಟ್ಟೆ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ನಾಲ್ಕು ಗುಡಿಸಲುಗಳು ಸೇರಿ ಸುಮಾರು ಎಂಟು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಕರಕಲಾಗಿವೆ ಸುದ್ದಿ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಜತೆ ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿ ತಿಳಿದ ತಕ್ಷಣ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸೇರಿದಂತೆ ಪಟ್ಟಣ ಪಂಚಾಯಿತಿಯ ಸದಸ್ಯರು ಭೇಟಿ ನೀಡಿ ಗುಡಿಸಲುಗಳನ್ನು ಕಳೆದುಕೊಂಡ ನಿರಾಶ್ರಿತರಿಗೆ ಸಮಾಧಾನಪಡಿಸಿ ಅವರಿಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

      ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷಣ್ ಕುಮಾರ್ ಮಾತನಾಡಿ, ನಾಲ್ಕುಗುಡಿಸಲುಗಳು ಭಸ್ಮವಾಗಿವೆ ಗುಡಿಸಲ್ಲಿದ್ದ ಐದು ಕುಟುಂಬಸ್ಥರಿಗೆ ಊಟ ಹಾಗೂ ಬಟ್ಟೆಯ ವ್ಯವಸ್ಥೆಗಾಗಿ ತಲಾ ಐದು ಸಾವಿರಕೊಡಲು ಪಟ್ಟಣ ಪಂಚಾಯಿತಿ ಸದಸ್ಯರ ಜತೆಗೂಡಿ ಚರ್ಚಿಸಿದ್ದೇನೆ ಕೂಡಲೇ ಕೊಡಲು ನಿರ್ಧರಿಸಿದೆ ಎಂದು ತಿಳಿಸಿದರು.

      ಪಟ್ಟಣ ಪಂಚಾಯಿತಿ ಸದಸ್ಯ ನಟರಾಜ್ ಮಾತನಾಡಿ ನಮ್ಮ ಕ್ಷೇತ್ರದ ಶಾಸಕರಾದ ಡಾ. ಜಿ ಪರಮೇಶ್ವರ್ ರವರ ಜೊತೆ ಮಾತನಾಡಿ ಕೂಡಲೇ ಇವರಿಗೆ ಮನೆ ಮಂಜೂರು ಮಾಡಿಕೊಡುವಂತೆ ನಾವು ಚರ್ಚಿಸಿ ಮಾತನಾಡುತ್ತೇವೆ. ಹಾಗೆಯೇ ಇವರಿಗೆ ದಿನಬಳಕೆಯ ವಸ್ತುಗಳಿಗೆ ಆಗುವ ಸಹಾಯವನ್ನು ಈ ಕೂಡಲೆ ಮಾಡುತ್ತೇವೆ ಎಂದು ತಿಳಿಸಿದರು .

(Visited 6 times, 1 visits today)