ಕೊರಟಗೆರೆ:

       ತುಮಕೂರಿನ ಎವಿಎಲ್ ರಾಕ್ ಡ್ರೀಲ್ಸ್ ಬೊರ್‍ವೇಲ್ ವಾಹನದ ಕಾರ್ಮಿಕರಿಗೆ ಚಾಕು ತೊರಿಸಿ ಕೂಲೆ ಮಾಡುವ ಬೆದರಿಕೆಯೊಡ್ಡಿ ಲಕ್ಷಾಂತರ ರೂ ಮೌಲ್ಯದ ಬೀಟ್‍ಗಳ ಜೊತೆ 2ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

      ಕೊರಟಗೆರೆ ಪಟ್ಟಣದ ಬೈಪಾಸ್-ಮಲ್ಲೇಶಪುರ ರಸ್ತೆಯ ಬಳಿ ಮಂಗಳವಾರ ತಡರಾತ್ರಿ ಸಿನಿಮೀಯ ರೀತಿಯಲ್ಲಿ ಕಳ್ಳರತಂಡ ಕಳ್ಳತನ ಮಾಡಿದ್ದಾರೆ. ಕಾರಿನಲ್ಲಿ ಬಂದಿದ್ದ ಮೂರು ಜನ ಕಳ್ಳರತಂಡ ಕೆಲಸಗಾರರಿಗೆ ಚಾಕು ತೊರಿಸಿ ಮಾತನಾಡಿದರೇ ಕೂಲೆ ಮಾಡುವ ಬೇದರಿಕೆ ಹಾಕಿದ್ದಾರೆ.

        ತುಮಕೂರು ನಗರದ ಎವಿಎಲ್ ರಾಕ್ ಡ್ರೀಲ್ಸ್‍ಗೆ ಸೇರಿದ ಬೋರ್‍ವೇಲ್ ವಾಹನದಲ್ಲಿದ್ದ ಸುಮಾರು 6ಲಕ್ಷ ಮೌಲ್ಯದ ಡ್ರೀಲ್ಲಿಂಗ್ ಬೀಟ್ ಮತ್ತು ಸಹಾಯಕ ವಾಹನದಲ್ಲಿದ್ದ 2ಲಕ್ಷ ನಗದು ಹಣ ಕಳ್ಳತನ ಆಗಿದೆ. ಕಳ್ಳರತಂಡ ಕೆಲಸಗಾರರ ದ್ವೀಚಕ್ರ ವಾಹನದ ವೈರ್‍ಗಳನ್ನು ಕಡಿತಗೊಳಿಸಿ ಪರಾರಿ ಆಗಿದ್ದಾರೆ.

      ವ್ಯವಸ್ಥಾಪಕ ಸುನೀಲ್‍ಕುಮಾರ್ ಮಾತನಾಡಿ ಕಳೆದ ಎರಡು ವರ್ಷದಿಂದ ಬೈಪಾಸ್ ರಸ್ತೆಯಲ್ಲಿ ಈಗಾಗಲೇ ಐದಾರು ಕಳ್ಳತನ ಪ್ರಕರಣ ನಡೆದಿವೆ. ಈಗ ನಮ್ಮ ಕಾರ್ಮಿಕರಿಗೆ ಕೊಲೆ ಮಾಡುವ ಬೇದರಿಕೆ ಹಾಕಿ 6ಲಕ್ಷ ಮೌಲ್ಯದ ಬೀಟ್ ಮತ್ತು 2ಲಕ್ಷ ನಗದು ಹಣವನ್ನು ದೂಚಿದ್ದಾರೆ. ಬೈಪಾಸ್ ರಸ್ತೆಯಲ್ಲಿ ಭದ್ರತೆಯೇ ಮರೀಚಿಕೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರಿನಲ್ಲಿ ಆಗಮಿಸಿದ್ದ ಕಳ್ಳರತಂಡ ಸೆರೆ ಹಿಡಿಯಲು ದೂರು ನೀಡಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

 

(Visited 14 times, 1 visits today)