ಅಂತಃಜಿಲ್ಲಾ ಕಳ್ಳರ ಬಂಧನ ; 2ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಶ!

ಕೊರಟಗೆರೆ : 

      ದೊಡ್ಡಬಳ್ಳಾಪುರ ಪಟ್ಟಣದ ಖಾಸಗಿ ಮನೆಯಲ್ಲಿ ಕಳ್ಳತನ ಮಾಡಿದ್ದ ಕಳ್ಳರ ತಂಡ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಚಿನ್ನ-ಬೆಳ್ಳಿ ಮತ್ತು ಹಣವನ್ನು ಹಂಚಿಕೊಳ್ಳುವ ವೇಳೆ ಕೋಳಾಲ ಕ್ರೈಂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.

      ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ ತಂಗುದಾಣದ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿಗಳೇ ದೊಡ್ಡಬಳ್ಳಾಪುರದ ಮನೆಯ ಕಳ್ಳತನದ ಆರೋಪಿಗಳು. ಕೋಳಾಲ ಪೊಲೀಸ್ ಠಾಣೆಯ ಮುಖ್ಯಪೇದೆ ಮೋಹನಕುಮಾರ್ ಮತ್ತು ಜಯಸಿಂಹ ಆರೋಪಿಗಳನ್ನು ಪ್ರಶ್ನಿಸಿ ಪರಿಶೀಲನೆ ನಡೆಸಿದಾಗ ಬ್ಯಾಗಿನಲ್ಲಿದ್ದ ಬೆಳ್ಳಿಯ ಒಡವೆಗಳು ಪತ್ತೆಯಾಗಿವೆ.

     ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಮಾವಿನಕೆರೆ ಗ್ರಾಮದ ಅನಿಲ್, ಕೊರಟಗೆರೆ ತಾಲೂಕು ದೊಡ್ಡಸಾಗ್ಗೆರೆ ಗ್ರಾಮದ ಆನಂದ ಬಂಧಿತರು. ಇನ್ನೋರ್ವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕೃಷ್ಣನ ಪತ್ತೇಗಾಗಿ ಈಗಾಗಲೇ ಕೋಳಾಲ ಪಿಎಸೈ ನವೀನಕುಮಾರ್ ನೇತೃತ್ವದ ಪೊಲೀಸರ ತಂಡ ಬಲೆ ಬಿಸಿದೆ.

    ದೊಡ್ಡಸಾಗ್ಗೆರೆ ತಂಗುದಾಣದ ಬಳಿ ಆರೋಪಿಗಳಿಂದ 440ಗ್ರಾಂನ ಒಂದು ಜೊತೆ ಬೆಳ್ಳಿದ್ವೀಪ, ದೀಪಾಲೆ ಕಂಭ, ಬೆಳ್ಳಿ ಲೋಟ, ಬೆಳ್ಳಿ ಕಳಸ, ಬೆಳ್ಳಿ ಆರತಿ ತಟ್ಟೆ, ಬೆಳ್ಳಿ ತಟ್ಟೆ ಮತ್ತು ತಿಪಟೂರಿನ ಇಂಟೇಲ್ ಮನಿ ಪ್ರವೈಟ್ ಲೀ.ನಲ್ಲಿ 21ಗ್ರಾಂ ಚಿನ್ನ ನಕ್ಸಸ್ ಸೇರಿ ಒಟ್ಟು 2ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ವಶಕ್ಕೆ ಪಡೆದಿದ್ದಾರೆ.

      ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 2 times, 1 visits today)

Related posts

Leave a Comment