ಕೊರಟಗೆರೆ:

      ಮಹಿಳೆಯ ಹೊಟ್ಟೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಗರ್ಭಕೋಶದ ಸುತ್ತಲು ಬೆಳೆದಿದ್ದ 2ಕೆಜಿ 650ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ನಡೆಸಿದ ಶಸ್ತ್ರಚಿಕಿತ್ಸೆ ಮಂಗಳವಾರ ಯಶಸ್ವಿಯಾಗಿದೆ.

      ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ನಾಗಭೂಷನ್, ಅರವಳಿಕೆ ತಜ್ಞ ಡಾ.ಪ್ರಕಾಶ್, ಆಸ್ಪತ್ರೆಯ ಸಿಬ್ಬಂದಿಗಳಾದ ಚಂದ್ರಕಲಾ, ಪ್ರೇಮಾ ಮತ್ತು ನಂಜೇಗೌಡ ನೇತೃತ್ವದ ವೈದ್ಯರ ತಂಡ ಕಮಲಮ್ಮ ಎಂಬ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

       ತುಂಬಾಡಿ ಗ್ರಾಪಂ ವ್ಯಾಪ್ತಿಯ ಪುಟ್ಟಮ್ಮನಪಾಳ್ಯ ಗ್ರಾಮದ ಕಮಲಮ್ಮ ಎಂಬ ಮಹಿಳೆಯ ಹೊಟ್ಟೆಯಲ್ಲಿ ಗರ್ಭಕೋಶ ಸುತ್ತಲೂ ಕಳೆದ ನಾಲ್ಕು ವರ್ಷದಿಂದ ಬೆಳೆದಿದ್ದ 2ಕೆಜಿ 650ಗ್ರಾಂ ತೂಕದ ಗೆಡ್ಡೆಯನ್ನು ಕೊರಟಗೆರೆ ಪಟ್ಟಣದ ಸರಕಾರಿ ವೈದ್ಯರ ತಂಡ ಸುಸುತ್ರವಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೀದ್ದಾರೆ.

      ಕಳೆದ ಹದಿನೈದು ದಿನದ ಹಿಂದೆ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ವೈದ್ಯರು ಪರೀಕ್ಷೆ ನಡೆಸಿದ ವೇಳೆ ಹೊಟ್ಟೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ. ನಂತರ ಶುಕ್ರವಾರ ಆಸ್ಪತ್ರೆಗೆ ದಾಖಲು ಮಾಡಿಕೊಂಡ ವೈದ್ಯರ ತಂಡ ಮಂಗಳವಾರ ಸತತ 2ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರಗಡೆ ತೆಗೆಯುವಲ್ಲಿ ಯಶಸ್ವಿ ಆಗಿದ್ದಾರೆ.

      ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ನಾಗಭೂಷನ್ ಮಾತನಾಡಿ ಮಹಿಳೆಗೆ ಹೃದಯ ಸಂಬಂಧ ಖಾಯಿಲೆಯ ನಡುವೆಯು ಗರ್ಭಕೋಶದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಕ್ಲೀಷ್ಟಕರ ಪರಿಸ್ಥಿತಿಯಲ್ಲಿ ಮಹಿಳೆಯ ಮಗನ ಒಪ್ಪಿಗೆಯ ಮೇಲೆ ದೊಡ್ಡ ಗಾತ್ರ ಗೆಡ್ಡೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಮಾಡಿ ಯಶಸ್ವಿಯಾದ ಕೀರ್ತಿ ಅರವಳಿಕೆ ತಜ್ಞರಾದ ಡಾ.ಪ್ರಕಾಶ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೂ ಸಲ್ಲುತ್ತದೆ ಎಂದು ಹೇಳಿದರು.

      ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯ ಮಗ ಹರೀಶ್ ಪತ್ರಿಕೆಗೆ ಪ್ರತಿಕ್ರಯಿಸಿ ನನ್ನ ತಾಯಿಗೆ ಹೊಟ್ಟೆ ನೋವಿನ ಬಾದೆಯಿಂದ ಕಳೆದ ಹದಿನೈದು ದಿನದಿಂದ ಪರೀಕ್ಷೆ ನಡೆಸಿ ವೈದ್ಯರು ಸೂಚಿಸಿದ ರೀತಿಯಲ್ಲಿ ಚಿಕಿತ್ಸೆ ಕೂಡಿಸಿದ್ದೇನೆ. ಇಂದು ಶಸ್ತ್ರ ಚಿಕಿತ್ಸೆ ಮಾಡಿ 2ಕೆಜಿಗೂ ಅಧಿಕ ಗಾತ್ರ ಗೆಡ್ಡೆಯನ್ನು ಹೊಟ್ಟೆಯಿಂದ ಹೊರಗಡೆ ತೆಗೆದು ನನ್ನ ತಾಯಿಗೆ ದೇವರ ರೀತಿಯಲ್ಲಿ ವೈದ್ಯರ ತಂಡ ಮರು ಜನ್ಮ ನೀಡಿದ್ದಾರೆ ಎಂದು ಹೇಳಿದರು.

(Visited 796 times, 1 visits today)